March 23, 2023

ಕಾಳುಮೆಣಸು ಕೃಷಿಯಲ್ಲಿ ಸಾಧನೆ ಮಾಡಿದ ಯುವ ಕೃಷಿಕ…!

Share News

ಕಾಳು ಮೆಣಸು ಒಂದು ಭಾರತೀಯ ಮಸಾಲೆ ಪದಾರ್ಥಗಳಲ್ಲಿ ಬರುವ ಮುಖ್ಯ ಸಾಮಾನು ಆಗಿದೆ. ಅನಾದಿ ಕಾಲದಿಂದಲೂ ಪೂರ್ವಜರು, ಸಮಗ್ರ ಕೃಷಿ, ಅರಣ್ಯ ಕೃಷಿ ಬೆಳೆಗಾರರು, ಕಾಳುಮೆಣಸನ್ನು ಬೆಳೆಯುತ್ತಾ ಬಂದಿದ್ದಾರೆ. ಅದರಲ್ಲಿ ಒಬ್ಬ ಯುವ ಕೃಷಿಕನೂ ಸಹ ಆಸಕ್ತಿ ತೋರಿದ್ದು, ಅವರ ವಿವರ, ಮತ್ತು ಈ ಚಿಕ್ಕ ವಯಸ್ಸಿನಲ್ಲೇ ಇಂತಹ ಒಂದು ಕೃಷಿ ಸಾಧನೆಗೆ ಏನು ಕಾರಣ, ಪರಿಶ್ರಮ ಏನಿರಬಹುದು ಎಂದು ತಿಳಿಯೋಣ.

ನಮ್ಮ ರಾಜ್ಯದ, ಶಾರದಾಂಬೆ ಪೀಠವನ್ನು ಹೊಂದಿರುವ ಶೃಂಗೇರಿಯ , ಶೃಂಗೇರಿಯಿಂದ ಸುಮಾರು 15 ಕಿಲೋ ಮೀಟರ್ ದೂರ ಇರುವ ಕೆಳಕುಡಿಗೆ ಗ್ರಾಮದ , ಶ್ರೀನಿವಾಸ್ ಅವರ ಪುತ್ರನಾದ ಸತ್ಯಪ್ರಕಾಶ್ ಅವರು.

ಸತ್ಯಪ್ರಕಾಶ್ ಅವರು ಮೂಲತಃ ಮಲೆನಾಡಿನ ಯುವಕನಾಗಿದ್ದು, ತಮ್ಮ ವಿದ್ಯಾಭ್ಯಾಸ ಮುಗಿಸಿ , ಮರಳಿ ಮನೆಗೆ ಬಂದ ಮೇಲೆ ಅವರಿಗೆ ಗೋಚರವಾಗುದ್ದು, ತೋಟಕ್ಕೆ ಬಂದಿರುವ ಹಳದಿ ಎಲೆ ರೋಗ ನೋಡಿ, ಅವರ ಸಂಪೂರ್ಣ ಗಮನ ಕೃಷಿಯ ಕಡೆಗೆ ಹರಿಯುತ್ತದೆ. ನಂತರದಲ್ಲಿ ಸತ್ಯಪ್ರಕಾಶ್ ಅವರು, ಕೃಷಿಯತ್ತ ತಮ್ಮನ್ನು ತಾವು ತೊಡಗಿಸಿಕೊಂಡು, ವ್ಯವಸ್ಥಿತವಾಗಿ ಔಷದಿ ಉಪಚಾರ ಮಾಡುತ್ತಾ, ರೋಗ ನಿವಾರಣೆ ಮಾಡಿದರು.

ತನ್ನ 10 ಎಕರೆಯ ಜಮೀನಿನಲ್ಲಿ ಅಡಕೆ ಮರಕ್ಕೆ , ಕಾಳುಮೆಣಸಿನ ಬಳ್ಳಿಯನ್ನು ಬೆಳೆಸಲು ಪ್ರಾರಂಬಿಸಿದರು. ಸಂಪೂರ್ಣವಾಗಿ ಕಾಳು ಮೆಣಸಿನ ಕೃಷಿಯನ್ನು ತಿಳಿದುಕೊಂಡು, ಈಗ ಸುಮಾರು 100 ಕ್ವಿಂಟಾಲ್ ( quintal) ಕಾಳು ಮೆಣಸು ಬೆಳೆದು ಒಬ್ಬ ಮಾದರಿ ಕೃಷಿಕನಾಗಿದ್ದಾನೆ.

ನಿಮ್ಮ ಖಾತೆಗೆ ಬೆಳೆ ಪರಿಹಾರ ಜಮಾ ಆಗಿದ್ಯಾ? ಈಗಲೇ ಚೆಕ್ ಮಾಡಿ..

ಕೇವಲ ಅಡಿಕೆಯಲ್ಲಿ ಮಾತ್ರ ಹೆಚ್ಚು ಇಳುವರಿ ಪಡೆಯಬಹುದು, ಕಾಳು ಮೆಣಸಿನಲ್ಲಿ ಹೆಚ್ಚು ಇಳುವರಿ ಪಡೆಯಲು ಸಾಧ್ಯವಿಲ್ಲ ಎಂದವರಿಗೆ ಸೆಡ್ಡು ಹೊಡೆಯುವ ರೀತಿ ಶೃಂಗೇರಿ ಮತ್ತು ಕೊಪ್ಪ ತಾಲೂಕಿನಲ್ಲಿ ಕಾಳುಮೆಣಸನ್ನು ಬೆಳೆದು ತೋರಿಸಿಕೊಟ್ಟಿದ್ದಾರೆ.

10 ಎಕರೆ ಅಡಿಕೆ ಮರಕ್ಕೆ ಪಣಿಯೊರು ಎಂಬ ವಿಭಿನ್ನ ತಳಿಯ, ಕಾಳು ಮೆಣಸಿನ ಬಳ್ಳಿಯನ್ನು ಬೆಳೆಸಿ ಎಕರೆಗೆ ಹತ್ತರಿಂದ ಹದಿನೈದು ಕ್ವಿಂಟಾಲ್ ಕಾಳು ಮೆಣಸು ಬೆಳೆಯುತ್ತಿದ್ದಾರೆ. ಸುಮಾರು 2500 ಕ್ಕೂ ಹೆಚ್ಚಿನ ಸಸಿಗಳು 10ಎಕರೆ ಜಮೀನಿನ ಅಡಿಕೆ ತೋಟದಲ್ಲಿ ಕೂರಿಸಿದ್ದಾರೆ.

ಕಾಳು ಮೆಣಸಿನ ಇತಿಹಾಸ ಗೊತ್ತಾ..?

ನಿಮಗೆ ಗೊತ್ತೇ, ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ, ಅಮೆರಿಕನ್ನರು ನಮ್ಮ ಭಾರತಕ್ಕೆ ಮೆಣಸಿನಕಾಯಿ ಪರಿಚಯ ಅಥವಾ ತರುವ ಮುನ್ನವೇ, ನಮ್ಮ ದೇಶದಲ್ಲಿ ಆಗಲೇ ಅಡುಗೆಯ ಖಾರಕ್ಕಾಗಿ ಮೆಣಸು, ಜೀರಿಗೆ, ಮತ್ತು ಶುಂಠಿಯನ್ನು ಬಳಸುತ್ತಾ ಇದ್ದರು. ನೋಡಿ ಪ್ರಾಚೀನ ಕಾಲದಿಂದಲೂ ನಮ್ಮ ದೇಶೀಯ ಸಾಂಬಾರು ಪದಾರ್ಥಗಳ ಬೇಡಿಕೆ ಮತ್ತು ಮಹತ್ವ ಎಷ್ಟು ಇತ್ತು ಎಂಬುದು.

ಆಗಿನ ಕಾಲದಲ್ಲಿ , ಕಪ್ಪು ಚಿನ್ನ ಎಂದೇ ಪ್ರಸಿದ್ದಿ ಪಡೆದಿತ್ತು ಈ ಕಾಳು ಮೆಣಸು. ಕೇರಳದ ಮಲಬಾರ್ ತೀರದಲ್ಲಿ ಈ ಕಾಳು ಮೆಣಸನ್ನು ಮೊಟ್ಟ ಮೊದಲು ಬೆಳೆಯುತ್ತಿದ್ದರು ಎಂದು ಹೇಳಲಾಗುತ್ತದೆ, ಸಹ್ಯಾದ್ರಿ ಬೆಟ್ಟಗಳು, ಪಶ್ಚಿಮ ಘಟ್ಟಗಳು, ಈ ಕಾಳು ಮೆಣಸು ಬೆಳೆಯಲು ತುಂಬಾ ಒಳ್ಳೆಯ ವಾತಾವರಣ ಆಗಿದೆ. ನಮ್ಮ ಪ್ರಾಚೀನ ಕಾಲದ ಮೆಣಸು ಎಂದರೆ ಪಾಶ್ಚಾತ್ಯ ದೇಶಗಳಿಗೆ, ಗ್ರೀಕರಿಗೆ, ರೊಮ್ಮನ್ನರಿಗೆ ಎಲ್ಲಿಲ್ಲದ ರುಚಿ. ಹಾಗಾಗಿ ನಮ್ಮ ದೇಶಕ್ಕೆ ಸಾಂಬಾರು ಪದಾರ್ಥಗಳ ರಪ್ತಿಗೆ ಬರುತ್ತಿದ್ದರು. ಈಗಲೂ ಸಹ ವಿದೇಶಗಳಲ್ಲಿ ನಮ್ಮ ಭಾರತದ ಸಾಂಬಾರು ಪದಾರ್ಥಗಳ ಬೇಡಿಕೆ ತುಂಬಾ ಇದೆ.

English summary:

A young farmer who has achieved success in pepper cultivation…!

Black pepper is a staple ingredient in Indian spices. From time immemorial, the ancestors, integrated agriculture, agroforestry growers, have been growing pepper. A young farmer also showed interest in it, let’s know his profile, and what is the reason and perseverance for such an agricultural achievement at such a young age.

Sathyaprakash, son of Srinivas, of Kelakudige village, about 15 kilometers from Sringeri, Sringeri, which has Sharadambe Peetha, in our state.

Satyaprakash is originally a young man from the hills, after completing his studies, he returns home and sees the yellow leaf disease in the garden and his full attention flows towards agriculture. Later, Satya Prakash devoted himself to agriculture, systematically administered medicine and cured diseases.

In his 10 acres of land, he started growing groundnut trees and pepper vines. He is a model farmer who has fully mastered pepper cultivation and now grows about 100 quintals of pepper.

Sringeri and Koppa talukas have shown how to get rid of those who say that you can get high yield only in groundnut and you cannot get high yield in black pepper.

ಇದನ್ನೂ ಓದಿ:ಪಿಎಂ ಕಿಸಾನ್ 12 ನೇ ಕಂತಿನ ಸ್ಟೇಟಸ್ ತಿಳಿದುಕೊಳ್ಳಿ.. ಶೀಘ್ರವೇ ಬರಲಿದೆ ನಿಮ್ಮ ಖಾತೆಗೆ ಹಣ. Pm kisan 12th installment

ಇದನ್ನೂ ಓದಿ:ಬೆಳೆ ವಿಮೆ ಸ್ಟೇಟಸ್ ಚೆಕ್ ಮಾಡಲು, ಡೈರೆಕ್ಟ್ ಲಿಂಕ್ ಇಲ್ಲಿದೆ ನೋಡಿ.. Crop Insurance

Ten to fifteen quintals of pepper are grown per acre by growing a different variety of pepper vine called Panioru for 10 acres of nut trees. More than 2500 saplings have been planted in the groundnut plantation of 10 acres of land.

Do you know the History of Black pepper..?

Do you know, during the Vijayanagara Empire, before the Americans introduced or brought chilies to our India, our country was already using pepper, cumin, and ginger to spice up cooking. See the demand and importance of our domestic spices since ancient times.

At that time, this black pepper was known as black gold. It is said that pepper was first grown on the Malabar coast of Kerala, the Sahyadri hills, Western Ghats, are very good climates for growing pepper. Pepper in our ancient times was a taste that the West, the Greeks, the Romans had nowhere else. So they used to come to our country to import spices. Even now there is a great demand for our Indian spices abroad.

ಈ ಲೇಖನ ನಿಮಗೆ ಇಷ್ಟವಾದಲ್ಲಿ ಮೇಲಿರುವ ಸಾಮಾಜಿಕ ಜಾಲ ತಾಣಗಳ ಲಿಂಕ್ ಉಪಯೋಗಿಸಿ , ನಿಮ್ಮ ರೈತ ಬಾಂಧವರಿಗೆ Share ಮಾಡಿ..


Share News

Malatesh

Hey I'm malatesh, from karnataka india... This website includes Agriculture, horticulture, vetarnary, latest news informations.

View all posts by Malatesh →

Leave a Reply

Your email address will not be published. Required fields are marked *