March 23, 2023

Labour card: ಈಗ ಮನೆಯಲ್ಲೇ ಕುಳಿತು ಲೇಬರ್ ಕಾರ್ಡ್ ಮಾಡಿಕೊಳ್ಳಿ, ಮದುವೆ,ಹೆರಿಗೆ, ಆಕ್ಸಿಡೆಂಟ್ ಸಹಾಯಧನ ಪಡೆಯಿರಿ

Share News

Labour card

Labour card: ಹೌದು ವೀಕ್ಷಕರೇ, ಕಳೆದ ಎರಡು ವರ್ಷಗಳ ಹಿಂದೆ ಆಕ್ರಮಿಸಿದ corona ವೈರಸ್ ನೀಂದ ಕೂಲಿ ಕಾರ್ಮಿಕರು, ಕಟ್ಟಡ ಕಾಮಗಾರಿ ಕೆಲಸಗಾರರು, ಸಣ್ಣ ಸಣ್ಣ ಗೂಡಂಗಡಿ ವ್ಯಾಪಾರಿಗಳು, ಅತೀ ಬಡ ಕುಟುಂಬದ ಜನರು ಉದ್ಯೋಗ ಕಳೆದುಕೊಂಡು ತುಂಬಲಾರದ ನಷ್ಟ ಅನುಭವಿಸಿದ್ದರು. ಹಾಗಾಗಿ ರಾಜ್ಯ ಸರ್ಕಾರ, ಲೇಬರ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬ ಫಲಾನುಭವಿಗೆ ತಲಾ 3000/- ರೂಗಳನ್ನು ಅವರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿತ್ತು.

ಇದರಿಂದ ಲೇಬರ್ ಕಾರ್ಡ್ ಹೊಂದಿದ್ದ ಸಾವಿರಾರು ಕಟ್ಟಡ ಮತ್ತು ಕೂಲಿ ಕಾರ್ಮಿಕರಿಗೆ ಸ್ವಲ್ಪವಾದರೂ ಸಹಾಯವಾಗಿತ್ತು. ಲೇಬರ್ ಕಾರ್ಡ್ ಹೊಂದದೆ ಇದ್ದ ಲಕ್ಷಾಂತರ ಕಟ್ಟಡ ಕಾಮಗಾರಿ ಕೆಲಸಗಾರರು, ಮತ್ತು ಅನೇಕ ಕೂಲಿ ಕಾರ್ಮಿಕರು ಇದರ ಪ್ರಯೋಜನ ಪಡಿಯಲಿಲ್ಲ, ಯಾಕೆಂದರೆ ಸರ್ಕಾರ ಲೇಬರ್ ಕಾರ್ಡ್ ಹೊಂದಿದ ಫಲಾನುಭವಿಗಳಿಗೆ ಮಾತ್ರ ಹಣವನ್ನು ಜಮಾ ಮಾಡಿದ್ದರು, ಇದಲ್ಲದೆ, ಈ ಯೋಜನೆಯಿಂದ ಇನ್ನೂ ಹೆಚ್ಚಿನ ಉಪಯೋಗಗಳನ್ನು ಫಲಾನುಭವಿಗಳು ಪಡೆಯಬಹುದಾಗಿದೆ.

ಇದನ್ನೂ ಓದಿ:Lumpy skin disease: ಈ ರೀತಿ ಕ್ರಮ ಅನುಸರಿಸಿ ಗಂಟು ರೋಗ ನಿವಾರಣೆ ಮಾಡಿ,

ಇದನ್ನೂ ಓದಿ:Cattle Transportation rules: ಜಾನುವಾರು ಸಾಗಾಣಿಕೆ ನಿಯಮಗಳನ್ನು ಒಮ್ಮೆ ನೋಡಿ…

ಆದರೆ ಇದನ್ನೇ ಬಂಡವಾಳ ಮಾಡಿಕೊಂಡ ಕೆಲವು ಕಂಪ್ಯೂಟರ್ ಸೆಂಟರ್ ( computer centre) ನವರು ತಲಾ ಒಂದು labour ಕಾರ್ಡ್ ಗೆ 800-1000/- ರುಗಳನ್ನ ನಿಗದಿ ಪಡಿಸಿ , ಹಣವನ್ನು ಪಡೆಯುತ್ತಿದ್ದರು. ಆದರೆ ಈ ಲೇಬರ್ ಕಾರ್ಡ್ ಮಾಡಿಸಲು ನೀವು ಸರ್ಕಾರ ನಿಗದಿಪಡಿಸಿದ ಸ್ವಲ್ಪವೇ ಹಣದಿಂದ 1-3 ವರ್ಷದ ಅವಧಿಯ ಕಾರ್ಡ್ ನ್ನು ಪಡೆದುಕೊಳ್ಳಬಹುದು. ಅವಧಿ ಮುಗಿದ ನಂತರ ನೀವು renewal ಮಾಡಿಕೊಳ್ಳಬಹುದು.

ಆದರೆ ಈಗ ತಾವುಗಳು ತಮ್ಮ ಮನೆಯಲ್ಲೇ ಕುಳಿತು ತಮ್ಮ ಮೊಬೈಲ್ ನ ಸಹಾಯದಿಂದ ಲೇಬರ್ ಕಾರ್ಡ್ ನ್ನೂ ಸುಲಭವಾಗಿ ಪಡೆದುಕೊಳ್ಳಬಹುದು. ಹಾಗಾದರೆ ಲೇಬರ್ ಕಾರ್ಡ್ ಅರ್ಜಿ ಸಲ್ಲಿಸುವ ವಿಧಾನ ನೋಡೋಣ.

ಆನ್ಲೈನ್ ( Online) ಲ್ಲಿ ಕಾರ್ಮಿಕ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು…

  • ಆಧಾರ್ ಕಾರ್ಡ್ (Adhar card)
  • ಬ್ಯಾಂಕ್ ಪಾಸ್ ಬುಕ್ ( Bank passbook number)
  • ಕುಟುಂಬದ ಸದಸ್ಯರ ಆಧಾರ್ ಕಾರ್ಡ್ [ family members adhar card ( as a nominee) ]
  • ಪಾಸ್ ಪೋರ್ಟ್ ಅಳತೆಯ ಭಾವಚಿತ್ರ ( passport size photo)
  • ಪಡಿತರ ಚೀಟಿ ( Ration card )

ಕಾರ್ಮಿಕ ಕಾರ್ಡ್ ಪಡೆಯಲು ಮಾನದಂಡಗಳು ( Terms and conditions for applying labour card)

ಇದನ್ನೂ ಓದಿ:ನಿಮ್ಮ ಖಾತೆಗೆ ಬೆಳೆ ಪರಿಹಾರ ಜಮಾ ಆಗಿದ್ಯಾ? ಈಗಲೇ ಚೆಕ್ ಮಾಡಿ..

ಇದನ್ನೂ ಓದಿ:ABHA CARD: ಮನೆಯಲ್ಲೇ ಕುಳಿತು ABHA ಆಯುಶ್ಮಾನ್ ಕಾರ್ಡ್ ಮಾಡಿಕೊಳ್ಳಿ.

  • ನೀವು ಭಾರತೀಯ ಪ್ರಜೆ ಆಗಿರಬೇಕು.
  • ಕಡ್ಡಾಯವಾಗಿ 18 ವರ್ಷ ಆಗಿರಬೇಕು.
  • ಅರ್ಜಿ ಸಲ್ಲಿಸಲು 60 ವರ್ಷ ದಾಟಿರಬಾರದು
  • ನಿಮ್ಮ ಪ್ರದೇಶದಲ್ಲಿ ಜಿಲ್ಲಾ ಕಾರ್ಮಿಕ ಕಚೇರಿಯಲ್ಲಿ ನೀವು ಕಾರ್ಮಿಕರಾಗಿ ನೋಂದಾಯಿಸಿಕೊಳ್ಳಬೇಕು.
  • ವರ್ಷಕ್ಕೆ ಕನಿಷ್ಠ 100-150 ದಿನ ಕಾರ್ಮಿಕ ಕೆಲಸದಲ್ಲಿ ತೊಡಗಿರಬೇಕು.
  • ಕಟ್ಟಡ ಕಾರ್ಮಿಕ ಆಗಿದ್ದಲ್ಲಿ , ನಿಮ್ಮ ಮೆಸ್ತ್ರಿಯ (cantractor) ( ಲೇಬರ್ ಕಾರ್ಡ್ ನಂಬರ್ ) ಅಥವಾ ಅವರ ಜೊತೆಗೆ ಕೆಲಸ ಮಾಡುವ ಕುರಿತು ಸರ್ಟಿಫಿಕೇಟ್ ಪಡೆದುಕೊಳ್ಳಬೇಕು.

ಲೇಬರ್ ಕಾರ್ಡ್ ಗೆ ಆನ್ಲೈನ್ ಲ್ಲಿ ಅರ್ಜಿ ಸಲ್ಲಿಸುವುದು ಹೇಗೆ..?

ಕರ್ನಾಟಕ ಕಾರ್ಮಿಕ ಇಲಾಖೆಯ ಅಧಿಕೃತ ವೆಬ್ಸೈಟ್ ಆದ https://labouronline.kar.nic.in/InterStateMigrantWorkmen/InterstateMagReg.aspx ಬೇಟಿ ಮಾಡಿ.

1) ಆನ್ಲೈನ್ ನೋಂದಣಿ tab ಓಪನ್ ಮಾಡಿ, ನಂತರ ನವೀಕರಣ tab open ಮಾಡಿಕೊಳ್ಳಿ.

2) Screen ಮೇಲೆ ಕೊಟ್ಟಿರುವ ಎಲ್ಲ ಕಾರ್ಮಿಕ ಕಾಯಿದೆಯ ಸೂಚನೆಗಳನ್ನು ಓದಿ.

3) portal ಒಳ್ಗೆ ನಿಮ್ಮನ್ನು ಸೇರಿಸಲು, ಹೊಸ ನೋಂದಣಿ (new registration ) tab ನ್ನು ಕ್ಲಿಕ್ ಮಾಡಿಕೊಳ್ಳಿ.

4) ಅಲ್ಲಿ ಕೊಟ್ಟಿರುವ ಎಲ್ಲ ವಿವರಗಳನ್ನು ತುಂಬಿ (fillup) ಮಾಡಿ, ನಿಮ್ಮ ಬಳಕೆದಾರರ ಐಡಿ ( Benificery id) ಮತ್ತು ಪಾಸ್ವರ್ಡ್ ( password ) ರಚನೆ ( create) ಮಾಡಿಕೊಳ್ಳಿ. ಇದು ನಿಮಗೆ ಆನ್ಲೈನ್ ಒಳ್ಗೆ ಕಾರ್ಡ್ application ( ಅರ್ಜಿ) ತುಂಬಲು ಬಹುಮುಖ್ಯ ಪಾತ್ರ ವಹಿಸುತ್ತದೆ.

5) benificary id ಮತ್ತು ಪಾಸ್ವರ್ಡ್ ( password ) ಬಳಸಿಕೊಂಡು ಪೋರ್ಟಲ್ ಗೆ ಲಾಗಿನ್ ( login ) ಮಾಡಿ , ಅಲ್ಲಿ ಕೊಟ್ಟಿರುವ ಎಲ್ಲ ದಾಖಲೆಗಳನ್ನು ತುಂಬಿ, upload ಮಾಡಿ

6) ನಂತರದಲ್ಲಿ ಅರ್ಜಿ ಸಲ್ಲಿಸಿದ ಮೇಲೆ, ನೀವು ಶುಲ್ಕವನ್ನು ನೀಡಬೇಕಾಗುತ್ತದೆ, ಆನ್ಲೈನ್ ( online) ಅಥವಾ ಆಫ್ಲೈನ್ ( offline) ಕೂಡ payment ಮಾಡಬಹುದು… ನೀವು ಆನ್ಲೈನ್ ಒಳಗೆ ಪಾವತಿಸಲು ಅನುಕೂಲ ಇದ್ದಲ್ಲಿ, ಪಾವತಿಸಿ, ಇಲ್ಲವಾದಲ್ಲಿ challan ನ್ನೂ download ಮಾಡಿಕೊಂಡು, offline ಲ್ಲು ಬ್ಯಾಂಕಿನಲ್ಲಿ ಸಲ್ಲಿಸಿ, ನಂತರ ನಿಮ್ಮ ಅರ್ಜಿಗೆ ಅಪ್ಲೋಡ್ ಮಾಡಿ, ಅರ್ಜಿಯನ್ನು ಸಬ್ಮಿಟ್ ಮಾಡಬೇಕು.

offline ಒಳಗೆ ಹೇಗೆ ಅರ್ಜಿ ಸಲ್ಲಿಸುವುದು..?

ಅಧಿಕೃತ ವೆಬ್ಸೈಟ್ ಗೆ ಭೇಟಿ ಮಾಡಿ, ಕಾರ್ಮಿಕ ಕಾರ್ಡ್ ನ application ( ಅರ್ಜಿ) ಪ್ರತಿಯನ್ನು ಡೌನ್ಲೋಡ್ ( download) ಮಾಡಿಕೊಂಡು, ಇಲ್ಲವೇ ಕಾರ್ಮಿಕ ಇಲಾಖೆಯ ಮೂಲಕ ಫಾರ್ಮ್ ತೆಗೆದುಕೊಂಡು, ಕೊಟ್ಟಿರುವ ಎಲ್ಲಾ ಅಗತ್ಯ ದಾಖಲೆಗಳನ್ನು ಭರ್ತಿ ಮಾಡಿ, ಅರ್ಜಿಯ ಶುಲ್ಕವನ್ನು ತುಂಬಿ, ಸಂಬಂಧಪಟ್ಟ ಅಧಿಕಾರಿಗಳಿಗೆ, ಅರ್ಜಿಯನ್ನು ಸಲ್ಲಿಸಬೇಕು, ಎಲ್ಲಾ ಅರ್ಜಿಯ ಸ್ಥಿತಿ ಸರಿಯಾಗಿದ್ದರೆ, ನಿಮಗೆ ಕಾರ್ಮಿಕ ಕಾರ್ಡ್ ದೊರೆಯುತ್ತದೆ.

ಈ ಲೇಖನ ನಿಮಗೆ ಇಷ್ಟವಾದಲ್ಲಿ ಮೇಲಿರುವ ಸಾಮಾಜಿಕ ಜಾಲ ತಾಣಗಳ ಲಿಂಕ್ ಉಪಯೋಗಿಸಿ, ನಿಮ್ಮ ರೈತ ಬಾಂಧವರಿಗೆ ಮತ್ತು ಮಿತ್ರರಿಗೆ , ಕೃಷಿ ಕಾರ್ಮಿಕರಿಗೆ, ಬಡ ಕಾರ್ಮಿಕರಿಗೆ ತಲುಪಿಸಿ


Share News

Malatesh

Hey I'm malatesh, from karnataka india... This website includes Agriculture, horticulture, vetarnary, latest news informations.

View all posts by Malatesh →

23 thoughts on “Labour card: ಈಗ ಮನೆಯಲ್ಲೇ ಕುಳಿತು ಲೇಬರ್ ಕಾರ್ಡ್ ಮಾಡಿಕೊಳ್ಳಿ, ಮದುವೆ,ಹೆರಿಗೆ, ಆಕ್ಸಿಡೆಂಟ್ ಸಹಾಯಧನ ಪಡೆಯಿರಿ

  1. ಉತ್ತಮವಾದ ಮಾಹಿತಿ ಕೊಟ್ಟಿದ್ದೀರಿ ಇದು ಅನೇಕ ಜನರಿಗೆ ತುಂಬಾ ಅನುಕೂಲಕರ ವಾಗಿದೆ ಧನ್ಯವಾದಗಳು

Leave a Reply

Your email address will not be published. Required fields are marked *