
Areca Nut: ಅಡಿಕೆ ಎಲೆ ಚುಕ್ಕೆ ರೋಗಕ್ಕೆ ಔಷಧ ಕಂಡು ಹಿಡಿದುಕೊಂಡ ರೈತ.
ಅಡಿಕೆ ಒಂದು ಸಾಂಪ್ರದಾಯಿಕವಾಗಿ ಬಳಸುವ, ವಸ್ತುವಾಗಿದೆ. ಇದನ್ನು ಪ್ರತಿನಿತ್ಯ ಊಟದ ನಂತರ, ವೀಳ್ಯದೆಲೆ ಜೊತೆಗೆ ಬಳಸುತ್ತಾರೆ. ಅಡಿಕೆಯಿಂದ ಟೀ ಸಹ ತಯಾರು ಮಾಡಲಾಗುತ್ತದೆ.
ಅಡಿಕೆಗೆ ಎಲೆ ಚುಕ್ಕೆ ರೋಗ..
ಕಾಳುಮೆಣಸು ಕೃಷಿಯಲ್ಲಿ ಸಾಧನೆ ಮಾಡಿದ ಯುವ ಕೃಷಿಕ…!
ಅಡಿಕೆಗೆ ಹಲವಾರು ಪ್ರಕಾರಗಳಲ್ಲಿ ಒಂದಿಲ್ಲೊಂದು ರೋಗಗಳು ಬರುವುದು ಸರ್ವೇ ಸಾಮಾನ್ಯ, ಆದರೆ ಅದನ್ನು ಸರಿಯಾದ ಸಮಯಕ್ಕೆ ತಡೆಯದೆ ಇದ್ದರೆ, ಅಡಿಕೆ ಮರ ಹಾಳಾಗುವ ಸಾದ್ಯತೆ ಹೆಚ್ಚು ಇರುತ್ತದೆ. ಅದರಲ್ಲಿ ಈಗ ಉಲ್ಬಣಿಸುತ್ತಿರುವ ಎಲೆ ಚುಕ್ಕೆ ರೋಗ…

ಉತ್ತರ ಕನ್ನಡ ಜಿಲ್ಲೆಯ, ಶಿರಸಿ ತಾಲೂಕಿನ ನರ್ನಲ್ಲಿ ಗ್ರಾಮದ ರೈತರೊಬ್ಬರು, ತಮ್ಮ ಅಡಿಕೆ ತೋಟದಲ್ಲಿ ಬಂದಂತಹ ರೋಗವನ್ನು ಗುರುತಿಸಿ, ಅದಕ್ಕೆ ಯಾವುದೇ ರಾಸಾಯನಿಕ ಗೊಬ್ಬರ , ಮತ್ತು ಯಾವುದೇ ಕೃಷಿ ಇಲಾಖೆ ಗೆ ಬೇಟಿ ನೀಡದೆ, ತಮ್ಮ ಜಮೀನಿನಲ್ಲಿ ಇರುವಂತಹ ಸಾವಯವ ವಸ್ತುಗಳನ್ನು ಬಳಸಿ ರೋಗವನ್ನು ಹಿಮ್ಮೆಟ್ಟಿ ಸಿದ್ದಾರೆ.ರೋಗ ನಿವಾರಣೆ ಗೆ ಜೀವಾಮೃತ ಬಳಕೆ.

ರೋಗವನ್ನು ನಿಯಂತ್ರಿಸಲು ರಾಮಚಂದ್ರ ಹೆಗಡೆ ಅವರು, ತಮ್ಮ ಮನೆಯಲ್ಲಿ ಸಿಗುವ ಹಸುವಿನ ಸೆಗಣಿ, ಬೆಲ್ಲ, ನೀರು, ಮತ್ತು ಎರೆಹುಳು ಗೊಬ್ಬರವನ್ನು, ಮತ್ತು ಹಸುವಿನ ಉಚ್ಚೆ( urine) ಬಳಸಿ ಮಿಶ್ರಣ ಮಾಡಿ, ಜೀವಮೃತವನ್ನು ತಯಾರು ಮಾಡಿ, ಎಲ್ಲ ರೋಗ ಪೀಡಿತ ಅಡಿಕೆ ಗಿಡಗಳಿಗೆ ಹಾಕಿದ್ದಾರೆ.
ಅಧಿಕೆಯಲ್ಲಿ ( areca nut) ರೋಗ ಬರಲು, ಪಿಲೋಸ್ಟಿಕ areka ಕಾರಣವಾಗುತ್ತದೆ. ಜೀವಾಮೃತ ತಯಾರು ಮಾಡಿ, ಅದರಲ್ಲಿ ಇರುವಂತಹ ಟ್ರೈಕಾಡರ್ಮ ಎಂಬ ಫಂಗಸ್ ( trichoderma fungus) ಪಿಲಾಸ್ಟಿಕ ವನ್ನು ಆಕ್ರಮಿಸಿ, ರೋಗವನ್ನು ನಿಯಂತ್ರಿಸಲು ಸಹಾಯಕ ಆಗಿದೆ.
Invention: ರೈತರ ಕಷ್ಟ ನೋಡದೆ, ಎಲೆಕ್ಟ್ರಿಕ್ ಎತ್ತು ಕಂಡು ಹಿಡಿದ ಎಂಜಿನಿಯರ್ ದಂಪತಿ
ಹೀಗೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ನಿರ್ನಲ್ಲಿ ಗ್ರಾಮದ ರಾಮಚಂದ್ರ ಹೆಗಡೆ ಅವರು, ತಮ್ಮ ಅಡಿಕೆ ತೋಟದಲ್ಲಿ ಬಂದಂತಹ ಎಲೆ ಚುಕ್ಕೆ ರೋಗದ ನಿವಾರಣೆ ತಾವೇ ಸ್ವತಃ ಮಾಡಿಕೊಂಡಿದ್ದಾರೆ. ಇತರ ರೈತರಿಗೆ ಮಾದರಿ ಆಗಿದ್ದಾರೆ.