ಹೌದು ಸ್ನೇಹಿತರೇ, ಕಳೆದ ಎರಡು ತಿಂಗಳಿಂದ ಕೃಷಿ ವಲಯದಲ್ಲಿ ಭಾರಿ ಚರ್ಚೆಗೆ ಈಡಾದ ವಿಷಯವೇನೆಂದರೆ ಕಳೆದ 15 20 ವರ್ಷಗಳಿಂದ ಕೃಷಿ ಬೋರವೆಲ್ ಗಳಿಗೆ ನೀಡುತ್ತಿರುವ ಉಚಿತ ವಿದ್ಯುತ್ ಈಗ ಹಠನೇ ಮೀಟರ್ ಅಳವಡಿಕೆ ಅಥವಾ ಉಚಿತ ವಿದ್ಯುತ್ ಪೂರೈಕೆ ನಿಲ್ಲಿಸಲು ಸರ್ಕಾರದಿಂದ ಮಾಹಿತಿ ಹರಿದು ಬಿದ್ದಿತ್ತು ಇದರಿಂದ ರಾಜ್ಯದ ಕೋಟ್ಯಂತರ ರೈತರು ಕಂಗಾಲಾಗಿದ್ದರು.
ನಮ್ಮ ದೇಶದಲ್ಲಿ ಪ್ರತಿಶತ 60ರಷ್ಟು ಜನರು ಕೃಷಿಯನ್ನು ಅವಲಂಬಿಸಿ, ಜೀವನ ನಡೆಸುತ್ತಿದ್ದಾರೆ ಆದರೆ ಇತ್ತೀಚಿನ ಸರ್ಕಾರದ ಯೋಜನೆ ರಹಿತ , ನಿರ್ಧಾರಗಳಿಂದ ಕೃಷಿಯನ್ನು ಅವಲಂಬಿಸಿ ಜೀವನ ನಡೆಸುತ್ತಿರುವ ರೈತರಿಗೆ ತುಂಬಾ ಸಂಕಷ್ಟ ಎದುರಾಗುತ್ತಿದೆ. 2021 ಮತ್ತು 2022ರ ಅತಿಯಾದ ಮಳೆಯಿಂದಾಗಿ ಈಗಾಗಲೇ ರೈತರು ಲಕ್ಷಾಂತರ ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ ಹೀಗಿರುವಾಗ ಸರ್ಕಾರ ಇಂತಹ ನಿರ್ಧಾರಗಳನ್ನು ತೆಗೆದುಕೊಂಡರೆ ರೈತರ ಗತಿಯೇನು.
ಪಿಎಂ ಕಿಸಾನ್ 12 ನೇ ಕಂತಿನ ಸ್ಟೇಟಸ್ ತಿಳಿದುಕೊಳ್ಳಿ.. ಶೀಘ್ರವೇ ಬರಲಿದೆ ನಿಮ್ಮ ಖಾತೆಗೆ ಹಣ. Pm kisan 12th installment
ಹೀಗಾಗಿ ಸಪ್ಟೆಂಬರ್ 25 2022ರ ಸೋಮವಾರದಂದು ಕರ್ನಾಟಕದ ಹಾವೇರಿ ಜಿಲ್ಲೆಯಲ್ಲಿ ನಡೆದ ರೈತರ ಬೃಹತ್ ಪ್ರತಿಭಟನೆಯಲ್ಲಿ, ಸಾವಿರಾರು ರೈತರು ಪಾಲ್ಗೊಂಡು ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮತ್ತು ಸರಕಾರದ ಯೋಜನೆ ರಹಿತ ನಿರ್ಧಾರಗಳ ಕುರಿತು ಬೃಹತ್ ರ್ಯಾಲಿ ಏರ್ಪಡಿಸಿ ಬೆಳಗ್ಗಿನಿಂದ ಸಂಜೆವರೆಗೆ ಹಾವೇರಿಯ ಹೃದಯ ಭಾಗದಲ್ಲಿ ಪ್ರತಿಭಟನೆಯನ್ನು ರೈತ ಮುಖಂಡರ ಮುಂದಾಳತ್ವದಲ್ಲಿ ನಡೆಸಲಾಯಿತು.
ಇದನ್ನೂ ಓದಿ:
ಈಗ ಮೊಬೈಲ್ ನಲ್ಲೆ ಡಿಜಿಟಲ್ ವೋಟಿಂಗ್ ಕಾರ್ಡ್ ಪಡೆದುಕೊಳ್ಳಿ.. Digital india
ಸ್ಥಳಕ್ಕೆ ಆಗಮಿಸಿದ ನಮ್ಮ ರಾಜ್ಯದ ಕೃಷಿಯ ಸಚಿವರಾದಂತಹ ಬಿಸಿ ಪಾಟೀಲ್ ಅವರು ಮಾತನಾಡಿ ರೈತರ ಎಲ್ಲ ಬೇಡಿಕೆಗಳನ್ನು ಈಡೇರಿಸಲು ನಾನು ಸಮ್ಮತಿಯನ್ನು ಸೂಚಿಸುತ್ತೇನೆ. ಎಂದು ಮಾತನಾಡಿ ಮತ್ತು ವಿದ್ಯುತ್ ಖಾಸಗಿಕರಣ ಸರ್ಕಾರದ ಮುಂದೆ ಇಲ್ಲ ಊಹಾಪೋಹಗಳಿಗೆ ಅವನ ಕೊಡದಿರಿ, ನಾವೆಂದು ರೈತರ ಪರವಾಗಿ ಇದ್ದೇವೆ ಯಾವುದೇ ಕಾರಣಕ್ಕೂ ವಿದ್ಯುತ್ ಖಾಸಗಿಕರಣ ಮಾಡುವುದಿಲ್ಲ, ಒಂದು ವೇಳೆ ಈ ತರ ಆದಲ್ಲಿ ನಾವು ಸಹ ಸರ್ಕಾರದಲ್ಲಿ ಉಳಿಯುವುದಿಲ್ಲ ಎಂದರು.
ಪ್ರತಿಭಟನೆ ವೇಳೆ ಮಾತನಾಡಿದ ರೈತ ಪ್ರಧಾನ ಕಾರ್ಯದರ್ಶಿಯಾದಂತಹ ಮಂಜುನಾಥ್ ಬಳ್ಳಾರಿಯವರು ಬಿಸಿ ಪಾಟೀಲ್ ಅವರಿಗೆ, 18 ವರ್ಷ ಮೇಲ್ಪಟ್ಟ ರೈತರಿಗೆ ಮಾತ್ರ ಹಾವು ಕಚ್ಚಿದಲ್ಲಿ ಪರಿಹಾರವನ್ನು ನೀಡುತ್ತೀರಿ ಆದರೆ 18 ವರ್ಷ ಒಳಗಿರುವಂತಹ ರೈತ ಮಕ್ಕಳಿಗೆ ಮಾತ್ರ ಸಾವಿನ ಪರಿಹಾರ ಸಿಗುತ್ತಿಲ್ಲ ಹೀಗಾಗಿ 18 ವರ್ಷಕ್ಕಿಂತ ಒಳಪಟ್ಟ ರೈತರ ಮಕ್ಕಳು ಹಾವು ಕಡಿತದಿಂದ ಸಾವಿಗೀಡಾದಲ್ಲಿ ಅವರಿಗೂ ಸಹ ಪರಿಹಾರ ಒದಗಿಸುವಂತೆ ತಿಳಿಸಿದರು.
ಬೆಳೆ ವಿಮೆ ಸ್ಟೇಟಸ್ ಚೆಕ್ ಮಾಡಲು, ಡೈರೆಕ್ಟ್ ಲಿಂಕ್ ಇಲ್ಲಿದೆ ನೋಡಿ.. Crop Insurance
ಬಿ.ಸಿ.ಪಾಟೀಲ್ ಅವರು ರೈತರ ಪರವಾಗಿ ಮಾತನಾಡಿ, ನಾನು ಕೂಡ ರೈತನ ಮಗ ಆಗಿದ್ದೇನೆ, ನನಗೆ ರೈತರ ಕಷ್ಟ ಗೊತ್ತಿದೆ, ನಮ್ಮ ಸರ್ಕಾರವು ಸಹ ರೈತರ ಪರವಾಗಿದೆ, ಆದಷ್ಟು ನಿಮ್ಮ ಎಲ್ಲಾ ಬೇಡಿಕೆಗಳನ್ನು ನಾನು ಬಗೆ ಹರಿಸುತ್ತೇನೆ, ಎಂದರು.