
Bangalore: 2022 ರ ಸಾಲಿನ ಈ ವರ್ಷದಲ್ಲಿ ಒಟ್ಟು ಅತಿದೊಡ್ಡ ಕೃಷಿ ಮೇಳಗಳು ಜರುಗಲಿವೆ, ಅದರಲ್ಲೂ ಧಾರವಾಡದ ಕೃಷಿ ಮೇಳ ಈಗಾಗಲೇ ಯಶಸ್ವಿಯಾಗಿ ಜರುಗಿದ್ದು, ಇದರ ಪ್ರಯೋಜನವನ್ನು ಸಾವಿರಾರು ರೈತರು ಪಡೆದುಕೊಂಡಿದ್ದಾರೆ.
ಈ ನವೆಂಬರ್ ತಿಂಗಳ ಅಂದರೆ ವರ್ಷದ ಕೊನೆಯ ಅತಿದೊಡ್ಡ ಕೃಷಿ ಮೇಳ, ಮೂರು ದಿನಗಳ ಕಾಲ ಬೆಂಗಳೂರಿನಲ್ಲಿ ನಡೆಯುತ್ತಿದ್ದು, ಲಕ್ಷಾಂತರ ರೈತರು ಭಾಗವಹಿಸುವ ಸಾದ್ಯತೆ ಇದೆ.
ಧಾರವಾಡ ಕೃಷಿ ಮೇಳದಲ್ಲಿ ಏನಾಯ್ತು…? ವಿಚಾರಗೋಷ್ಠಿಯಲ್ಲಿ ಏನು ಮಾತನಾಡಿದರು…?
Bangalore: ಕೃಷಿ ಮೇಳ ಎಲ್ಲಿ ನಡೆಯಲಿದೆ?
ನವೆಂಬರ್ 3 ರಿಂದ 6 ವರೆಗೆ ಬೆಂಗಳೂರಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಎರಡು ವರ್ಷಗಳ ನಂತರ ಈ ಭಾರಿ ಕೃಷಿ ಮೇಳವನ್ನು ಆಯೋಜಿಸಿದೆ. ಈ ಸಾರಿ ಸುಮಾರು 14 ಲಕ್ಷಕ್ಕೂ ಹೆಚ್ಚಿನ ಜನರು ಬರುವ ಎಲ್ಲಾ ಸಾದ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಕೃಷಿ ಮೇಳದಲ್ಲಿ ಈ ಭಾರಿ ಎಷ್ಟು ಮಳಿಗೆಗಳು ಇರಲಿವೆ..?
ಈ ಬಾರಿಯ ಕೃಷಿ ಮೇಳದಲ್ಲಿ ಸುಮಾರು 600-700 ಕ್ಕು ಹೆಚ್ಚು ಕೃಷಿ ಮಳಿಗೆಗಳು ಇರಲಿವೆ, ಅದರಲ್ಲಿ ತಮ್ಮ ತಮ್ಮ ಎಲ್ಲ ಕೃಷಿ ಮಾಹಿತಿಗಳು , ಕೃಷಿ ಚಟವಟಿಕೆಗಳಿಗೆ ಬೇಕಾಗುವ ಸಾಮಗ್ರಿಗಳು, ಅದರ ಸಂಪೂರ್ಣ ಮಾಹಿತಿ ನೀಡಲು ಅವರು ಪೂರ್ಣ ಸಿದ್ಧತೆ, ಮಾಡಿಕೊಂಡಿರುತ್ತಾರೆ. ಎಂದು ಕೃಷಿ ಮೇಳದ ಆಯೋಜಕರು ತಿಳಿಸಿದ್ದಾರೆ.
Banana farming: ಜಿ-9 ತಳಿಯ ಬಾಳೆ ಬೆಳೆದು 20 ಲಕ್ಷ ಗಳಿಸಿದ ರೈತ
Bangalore: ಕೃಷಿ ಮೇಳದಲ್ಲಿ ಯಾವುದಕ್ಕೆ ಪ್ರಾಮುಖ್ಯತೆ ಕೊಡಲಾಗಿದೆ ಮತ್ತು ಯಾವೆಲ್ಲ ಹೊಸ ಆವಿಷ್ಕಾರ ಇರಲಿವೆ..?
ಸತತ ಮೂರು ದಿನಗಳ ನಡೆಯುವ ಈ ಕೃಷಿ ಮೇಳದಲ್ಲಿ, ಕೃಷಿಯಲ್ಲಿ ಡ್ರೋನ್ ಬಳಕೆ, ಕೃಷಿ ಯಂತ್ರೋಪಕರಣಗಳು, ಆಟೋಮೇಟೆಡ್ ಕೃಷಿ ತಂತ್ರಜ್ಞಾನ ಮುಂತಾದ ವಿವಿಧ, ರೀತಿಯ ಆವಿಷ್ಕಾರಗಳ ಕುರಿತು ಮಳಿಗೆಗಳಲ್ಲಿ ಲಭ್ಯವಿದೆ.
ಸಾವಯವ ಕೃಷಿ ಪದ್ಧತಿ, ಹೈನುಗಾರಿಕೆ, ಪಶುಸಂಗೋಪನೆ, ಎರೆಹುಳು ಗೊಬ್ಬರ ತಯಾರಿಕೆ, ಸಿರಿಧಾನ್ಯ ಮಹತ್ವ ಮತ್ತು ಬಳಕೆ, ಔಷಧೀಯ ಸಸ್ಯಗಳ ಸಂರಕ್ಷಣೆ ಮತ್ತು ಕೃಷಿ, ಸುಗಂಧ ದ್ರವ್ಯಗಳ ಕೃಷಿ, ಜಲನಯನ ಸಂರಕ್ಷಣೆ, ಮತ್ತು
https://krushijagattu.com/lumpy-skin-disease-make-these-steps-to-cure-this-deadly-virus/
ಮೀನು ಸಾಕಾಣಿಕೆ, ಕುರಿ ಸಾಕಾಣಿಕೆ, ಮೊಲ ಸಾಕಾಣಿಕೆ, ಹಂದಿ ಸಾಕಾಣಿಕೆ, ಹೀಗೆ ಹಲವಾರು ಪ್ರಕಾರಗಳಲ್ಲಿ ಕೃಷಿಯ ಬಗ್ಗೆ ವಿಜ್ಞಾನಿಗಳಿಂದ ಮತ್ತು ತಜ್ಞರಿಂದ ರೈತರಿಗೆ ನೇರವಾಗಿ ಕೃಷಿ ಮೇಳದಲ್ಲಿ ಮಾಹಿತಿ ಸಿಗಲಿದೆ.
ಈ ಭಾರೀ ಚರ್ಮ ಗಂಟು ರೋಗ ( LUMPY SKIN DISEASE ) ದನ ಕರುಗಳಿಗೆ ಬಂದಿರುವ ಕಾರಣ, ಪಶುಗಳ ಅಥವಾ ಜಾನುವಾರುಗಳ ಪ್ರದರ್ಶನವನ್ನು ನಿಷೇಧ ಮಾಡಲಾಗಿದೆ.
Kisan ಪಿಂಚಣಿ ಯೋಜನೆಯು ಒಂದು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಈ ಯೋಜನೆ ಅಡಿಯಲ್ಲಿ, ನೊಂದಾಯಿಸಿಕೊಂಡು ಎಲ್ಲ ರೈತರಿಗೆ 60 ವರ್ಷಗಳು ಆದ ನಂತರ ಪ್ರತಿ ತಿಂಗಳು, ಮಾಸಿಕ 3000 ಪಿಂಚಣಿ ಸೌಲಭ್ಯ ದೊರೆಯಲಿದೆ
https://krushijagattu.com/join-kisan-pinchani-yojana-get-monthly-3000-rupees/
ಆಯುಷ್ಮನ್ ಭಾರತ್ ಹೆಲ್ತ್ ಅಕೌಂಟ್ ( Ayushman bharat health account) ಅಂದರೆ ಇದರ ಅರ್ಥ, ನಮ್ಮ ದೇಶದ ಪ್ರತಿ ಪ್ರಜೆಯ ತನ್ನ ಆರೋಗ್ಯದ ಸಂಪೂರ್ಣ ಮಾಹಿತಿ ಈ ಡಿಜಿಟಲ್ ಕಾರ್ಡಿನಲ್ಲಿ ಒಳಗೊಂಡಿರುತ್ತದೆ. ರೋಗಿಯು ತಾನು ಆಸ್ಪತ್ರೆಗೆ ದಾಖಲಾದ ಮಾಹಿತಿ, ವೈದ್ಯರಿಂದ ಪಡೆದುಕೊಂಡ ಚಿಕಿತ್ಸೆಯ ಎಲ್ಲ ಮಾಹಿತಿಯನ್ನು ಇದರಲ್ಲಿ ಹಾಕಲಾಗುತ್ತದೆ.
https://krushijagattu.com/latest-news-abha-health-card-benefits-lets-check-out/
CROP INSURANCE: 2022 ಮತ್ತು 2023 ಸಾಲಿನ ಈ ವರ್ಷದ ಭಾರೀ ಪ್ರಮಾಣದ ಮಳೆಯಿಂದಾಗಿ, ಹಿಂಗಾರು ಬೆಳೆಯ ಬೆಳೆ ವಿಮಾ ತುಂಬಲು ಸುತ್ತೋಲೆಯನ್ನು ಕರ್ನಾಟಕ ಸರ್ಕಾರ ಹೊರಡಿಸಿದೆ. ಅದರಂತೆ ರಾಜ್ಯದ ಎಲ್ಲಾ ರೈತರು ತಮ್ಮ ಜಿಲ್ಲೆಗಳ ಅನುಸಾರ, ತಮ್ಮ ತಮ್ಮ ತಾಲೂಕ ಕಚೇರಿಗಳಲ್ಲಿ ಬೆಳೆ ವಿಮಾ ( crop insurance) ಅರ್ಜಿಗಳನ್ನು ಪಡೆದು, ಸೂಕ್ತ ದಾಖಲೆಗಳೊಂದಿಗೆ ಭರ್ತಿ ಮಾಡಿ, ನೆಮ್ಮದಿ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಿಬೇಕು.
https://krushijagattu.com/information-and-application-process-about-crop-insurance-of-rabi/
2022 ಸಾಲಿನ ವಾರ್ಷಿಕ ಮಳೆಯಿಂದ ಈ ಕಳೆದ ಎರಡು ಮೂರು ತಿಂಗಳಿಂದ ರಾಜ್ಯದಲ್ಲಿ ಅತಿಯಾದ ಪ್ರಮಾಣದಲ್ಲಿ ಮಳೆಯಾಗಿದ್ದು ಕರ್ನಾಟಕದ ಸುಮಾರು ಜಿಲ್ಲೆಗಳಲ್ಲಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದ್ದು ರೈತರು ತುಂಬಲಾರದ ನಷ್ಟ ಅನುಭವಿಸಿದ್ದಾರೆ.
https://krushijagattu.com/know-how-to-check-the-details-of-agriculture-crop-solution/