ನಮಸ್ಕಾರ ವೀಕ್ಷಕರೇ, ನಿಮಗೆಲ್ಲ ಕೃಷಿ ಜಗತ್ತು website ಗೆ ಸ್ವಾಗತ. ಮನುಷ್ಯ ತನ್ನ ಜೀವನಕ್ಕಾಗಿ, ಆಹಾರಕ್ಕಾಗಿ, ಮತ್ತು ತನ್ನ ಕುಟುಂಬದ ಒಳಿತಿಗಾಗಿ, ಹಲವಾರು ಕಾರಣಗಳಿಂದ ವಿವಿಧ ರೀತಿಯ ಸಾಲವನ್ನು ಪಡೆಯುತ್ತಾನೆ, ಕೃಷಿಕರು, ಕೂಲಿ ಕಾರ್ಮಿಕರು, ವ್ಯಾಪಾರಿಗಳು, ಶ್ರೀಮಂತರು, ಬಡವರು, ಸರ್ಕಾರವು ಸಹ ಬ್ಯಾಂಕಿನಿಂದ ಸಾಲವನ್ನು ಪಡೆಯುತ್ತದೆ. ಆದರೆ ಒಂದು ವೇಳೆ ಸಾಲಗಾರ ಸತ್ತು ಹೋದರೆ, ಬ್ಯಾಂಕಿನಲ್ಲಿ, ಫೈನಾನ್ಸ್ ನಲ್ಲಿ , ಸೊಸೈಟಿ ಗಳಲ್ಲಿ ಮಾಡಿದ ಸಾಲ ಏನಾಗುತ್ತದೆ, ? ಅದನ್ನು ಯಾರು ತೀರಿಸುತ್ತಾರೆ… ಎಂಬುದು ಗೊತ್ತಿದೆಯಾ? ಹಾಗಾದ್ರೆ ಈ ಲೇಖನದಲ್ಲಿ ತಿಳಿಯೋಣ.
ಸಾಲಗಳಲ್ಲಿ ಎರಡು ವರ್ಗಗಳಿವೆ…
1) ಸುರಕ್ಷಿತ ಸಾಲ:
ಸುರಕ್ಷಿತ ಸಾಲ ಎಂದರೆ, ನೀವು ಮನೆಯ ಮೇಲೆ ಮಾಡಿದ ಸಾಲ ಆಗಿರಬಹುದು, ಮತ್ತು ಕಾರ್ ಮೇಲೆ ಮಾಡಿದ ಸಾಲ ಇರಬಹುದು, ಈ ಸಾಲಗಳು ದೀರ್ಘ ಕಾಲದವರೆಗೆ ಇರುವುದರಿಂದ, ಒಂದು ವೇಳೆ ಪ್ರಥಮ ಸಾಲಗಾರ ಸತ್ತು ಹೋದರೆ, ಅವನ ಸಹ ಸಾಲಗಾರ ಆದಂತಹ ಅವರ ಕುಟುಂಬದ ಸದಸ್ಯರಿಂದ ಸಾಲವನ್ನು ಪಾವತಿ ಮಾಡಲು ಬ್ಯಾಂಕಿನವರು, ಮತ್ತು ಬೇರೆ ಕ್ಷೇತ್ರದ ಸಾಲ ನೀಡಿದವರು ತಿಳಿಸುತ್ತಾರೆ.
ಈಗ ಮೊಬೈಲ್ ನಲ್ಲೆ ಡಿಜಿಟಲ್ ವೋಟಿಂಗ್ ಕಾರ್ಡ್ ಪಡೆದುಕೊಳ್ಳಿ.. Digital india
ಮತ್ತು ದೀರ್ಘ ಕಾಲದ ಸಾಲವನ್ನು ಮಾಡುವ ವೇಳೆ ಬ್ಯಾಂಕಿನವರು ನಿಮ್ಮ ಹೆಸರಿನಲ್ಲಿ ವಿಮೆಯನ್ನು ಮಾಡಿಸುತ್ತಾರೆ, ಒಂದು ವೇಳೆ ಸಾಲಗಾರ ನಿಧನವಾದಲ್ಲಿ , ವಿಮೆಯ ಮೂಲಕ ಉಳಿದ ಸಾಲವನ್ನು ಪಡೆಯುತ್ತಾರೆ. ಇಲ್ಲವೇ ಕುಟುಂಬದ ಸದಸ್ಯರಿಗೆ ಸೂಚನೆ ನೀಡಲಾಗುತ್ತದೆ, ಕುಟುಂಬದ ಸದಸ್ಯರು ಸಾಲ ಕಟ್ಟಲು ಒಪ್ಪಿಗೆ ನೀಡಿದಲ್ಲಿ, ಏನು ತೊಂದರೆ ಆಗುವುದಿಲ್ಲ, ಒಂದು ವೇಳೆ ಸಾಲಗಾರನ ಕುಟುಂಬದ ಸದಸ್ಯರು ನಿರಾಕರಿಸಿದರೆ ಬ್ಯಾಂಕಿನವರು , ಬ್ಯಾಂಕಿನ ಸರ್ಪೇಸಿ ಖಾಯಿದೆ ಮೂಲಕ ಮನೆ ಅಥವಾ ಕಾರನ್ನು ಸಾರ್ವಜನಿಕವಾಗಿ ಹರಾಜು ಮಾಡಿ, ಸಾಲದ ಮೊತ್ತವನ್ನು ತೆಗೆದುಕೊಳ್ಳುತ್ತಾರೆ.
2) ಅಸುರಕ್ಷಿತ ಸಾಲ:
ಸಾಮಾನ್ಯವಾಗಿ ಸಾವಿರಾರು, ಲಕ್ಷಾಂತರ ಜನರು, ರೈತರು ವ್ಯಯಕ್ತಿಕ ಸಾಲವನ್ನು ಸಹ ಬ್ಯಾಂಕಿನಿಂದ, ಸೊಸೈಟಿ ಇಂದ , ಪಡೆಯುತ್ತಾರೆ. ಇದು ಅಸುರಕ್ಷಿತ ಸಾಲ ಅಂದರೆ, ವ್ಯಕ್ತಿಯು ಅಥವಾ ರೈತನು ವ್ಯಯಕ್ತಿಕವಾಗಿ ಸಾಲವನ್ನು ಪಡೆದರೆ, ಮತ್ತು ಕ್ರೆಡಿಟ್ ಕಾರ್ಡ್ ಮೂಲಕ ಸಾಲವನ್ನು ಪಡೆದರೆ, ಬ್ಯಾಂಕು ಮತ್ತು ಸೊಸೈಟಿ ಗಳಿಗೆ, ಸಾಲಗಾರ ತೀರಿ ಹೋದ ಮೇಲೆ ಸಾಲಗಾರನ ಕುಟುಂಬದ ಸದಸ್ಯರ ಕಡೆಯಿಂದ ಸಾಲ ಮರು ಪಾವತಿಗೆ ತಿಳಿಸುವ ಯಾವುದೇ ಅಧಿಕಾರ ಇರುವುದಿಲ್ಲ, ಅದನ್ನು ಸಾಲ ಮರು ಪಾವತಿ ಮಾಡದೇ ಇರುವ, ( NPA) ಎಂದು ಪರಿಗಣಿಸಿ ರಿಯಾಯಿತಿ ಗೆ ಜಮಾ ಮಾಡಲಾಗುವುದು.
ನಿಮ್ಮ ಖಾತೆಗೆ ಬೆಳೆ ಪರಿಹಾರ ಜಮಾ ಆಗಿದ್ಯಾ? ಈಗಲೇ ಚೆಕ್ ಮಾಡಿ..
ಕೇಂದ್ರ ಸರ್ಕಾರದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಇಂದ ಹಲವು ಈ ರೀತಿ ಹೊಸ ನಿಯಮಗಳು ಬಂದಿದ್ದು, ನೀವು ಸಾಲ ಪಡೆಯುವ ವೇಳೆ, ಬ್ಯಾಂಕಿನ ಸಿಬ್ಬಂದಿ ಅಥವಾ manager ಹತ್ತಿರ, ವಿಮಾ ದ ಬಗ್ಗೆ ಮಾಹಿತಿ ತಿಳಿಯಿರಿ. ನಿಮ್ಮ ಸಾಲದ ಮೇಲೆ ವಿಮಾ ಇದ್ದಲ್ಲಿ, ಒಂದು ವೇಳೆ ಸಾಲಗಾರ ತೀರಿ ಹೋದರೆ, ವಿಮಾದ ಮೂಲಕ ಬ್ಯಾಂಕಿನವರು ಸಾಲವನ್ನು ಕಟ್ಟಿಕೊಳ್ಳುತ್ತಾರೆ. ಇದರಿಂದ ನಿಮ್ಮ ಕುಟುಂಬಕ್ಕೆ ಹೊರೆ ಆಗುವ ಸಾದ್ಯತೆ ಕಡಿಮೆ ಆಗುತ್ತದೆ.