
ಕರ್ನಾಟಕ ಜಾನುವಾರು ಪ್ರತಿಬಂಧಕ ಮತ್ತು ಸಂರಕ್ಷಣಾ ಅಧಿನಿಯಮ 2020ನ್ನು ಜಾರಿಗೊಳಿಸಿರುವುದರಿಂದ ಇದಕ್ಕೆ ಸಂಬಂಧಪಟ್ಟಂತೆ ಜಾನುವಾರು ಸಾಗಾಣಿಕೆ ಸಂಬಂಧಿಸಿದಂತೆ ನಿಯಮಗಳು ದಿನಾಂಕ : 24-05-2021 ರಂದು ಕರ್ನಾಟಕ ರಾಜ್ಯಪತ್ರದಲ್ಲಿ ಹೊರಡಿಸಲಾಗಿದೆ.
ಸಾಗಾಣಿಕೆ ನಿಯಮಗಳನ್ನು ನೋಡೋಣ…
1) ಕೃಷಿ ಅಥವಾ ಪಶು ಸಂಗೋಪನೆ ಉದ್ದೇಶಕ್ಕಾಗಿ ಜಾನುವಾರು ಸಾಗಾಣಿಕೆಗೆ ರಾಜ್ಯ ಸರ್ಕಾರದ ಪಶುವೈದ್ಯಾಧಿಕಾರಿ ದರ್ಜೆಗೆ( gazetted officer) ಕಡಿಮೆಯಿಲ್ಲದ,ಸಕ್ಷಮ ಪ್ರಾಧಿಕಾರದ ಪಶುವೈದ್ಯಾಧಿಕಾರಿಯ ಪ್ರಮಾಣೀಕರಣದೊಂದಿಗೆ ಪರವಾನಗಿ ಪಡೆಯಬೇಕು, ವೈದ್ಯರ ಸಲಹೆಯ ಮೇರೆಗೆ ಸಾಗಾಣಿಕೆಗೆ ಸಿದ್ಧರಾಗಬೇಕು.
2) ಜಾನುವಾರುಗಳನ್ನು ಸಾಗಾಣಿಕೆ ಮಾಡುವ ಸಮಯದಲ್ಲಿ ಸಾಗಾಣಿಕೆ ಪತ್ರ ಮಾಲೀಕತ್ವ ( ownership ) ದಾಖಲಾತಿಗಳು, ಪ್ರಥಮ ಪಶು ವೈದ್ಯಕೀಯ ಕಿಟ್ ಹೊಂದಿರಬೇಕು. ಇಲ್ಲವಾದಲ್ಲಿ ಭಾರೀ ದಂಡಕ್ಕೆ ಆಹ್ವಾನಿಸಿ ಬೇಕಾಗುತ್ತದೆ.
3) ಮಾಲೀಕತ್ವ ದಾಖಲಾತಿ ಎಂದರೆ ಜಾನುವಾರಿನ (cattles) ಕಿವಿಯೋಲೆ / ಆಧಾರ್ ಕಾರ್ಡ್ ಅಥವಾ ವೋಟರ್ ಐಡಿ ಅಥವಾ ಪ್ಯಾನ್ ಕಾರ್ಡ್ (pancard) ಅಥವಾ ರೇಷನ್ ಕಾರ್ಡ್ ಅಥವಾ ಡ್ರೈವಿಂಗ್ ಲೈಸನ್ಸ್ (Driving lisence) ಅಥವಾ ನರೇಗಾ ಕಾರ್ಡ್ (Nrega card) ರಾಜ್ಯ ಸರ್ಕಾರ ಅಥವಾ ಕೇಂದ್ರ ಸರ್ಕಾರದಿಂದ ನೀಡಿರುವ ಫೋಟೋ ಐಡಿ ಹೊಂದಿರಬೇಕು.
4) ವಿನಾಯಿತಿ : 15 ಕಿ.ಮೀ ವ್ಯಾಪ್ತಿ ಒಳಗಡೆ ಎರಡು ಹೈನುರಾಸುಗಳು( Milking cows and buffaloes) ಮತ್ತು ಅವುಗಳ ಕರುಗಳನ್ನು ( calves) ಸಾಗಾಣಿಕೆ ಮಾಡಬೇಕಾದಲ್ಲಿ ವಿನಾಯಿತಿ ನೀಡಲಾಗಿದೆ.
5) 6 ತಿಂಗಳ ಮೇಲ್ಪಟ್ಟು ಗರ್ಭಧರಿಸಿದ (pregnent cows) ಜಾನುವಾರುಗಳನ್ನು ಚಿಕಿತ್ಸೆಗೆ ಹೊರತುಪಡಿಸಿ ಬೇರೆಡೆಗೆ ಸಾಗಾಣಿಕೆ ಮಾಡತಕ್ಕದ್ದಲ್ಲ. ಈ ರೀತಿ ಮಾಡುವುದು ತಪ್ಪು.
6) ಹೊರ ರಾಜ್ಯದಿಂದ ಜಾನುವಾರನ್ನು ಖರೀದಿ ಮಾಡಿ ತರುವ ಸಂದರ್ಭದಲ್ಲಿ ಸಂಬಂಧಪಟ್ಟ ರಾಜ್ಯದ ತಾಲ್ಲೂಕು ಮ್ಯಾಜಿಸ್ಟ್ರೇಟ್ರವರಿಂದ ( Taluk magistrate) ಒಪ್ಪಿಗೆ ಪತ್ರ ಹಾಗೂ ಅಧೀನದಲ್ಲಿರುವ ಪಶುವೈದ್ಯಾಧಿಕಾರಿಗಳಿಂದ ( Veterinary doctor) ಸಾಗಾಣಿಕೆ ಪ್ರಮಾಣಪತ್ರ ( transportation certificate) ತರತಕ್ಕದ್ದು.
7) ಸಾಗಾಣಿಕೆ ವಾಹನದಲ್ಲಿ ( vehicle) ಕೆಂಪುದಪ್ಪ ( bold red) ಅಕ್ಷರದಲ್ಲಿ ಮಾಲೀಕನ | ಮಾರಾಟಗಾರನ ಹೆಸರು ವಿಳಾಸ, ಮೊಬೈಲ್ ಸಂಖ್ಯೆ ಅಳವಡಿಸಬೇಕು.
8) ಜಾನುವಾರುಗಳನ್ನು ವಾಹನದಲ್ಲಿ ಇಳಿಸುವಾಗ ಮತ್ತು ಹತ್ತಿಸುವಾಗ ಸೂಕ್ತವಾದ ಹಗ್ಗ ಮತ್ತು ಪ್ಲಾಟ್ಫಾರ್ಮ್ ಒದಗಿಸಬೇಕು. ಜಾನುವಾರುಗಳನ್ನು ಸಾಗಾಣಿಕೆ ಮಾಡುವಾಗ ಪೂರ್ಣ ಪ್ರಮಾಣದಲ್ಲಿ ಮೇವು ಮತ್ತು ನೀರಿನ ಸೌಕರ್ಯ ಒದಗಿಸಬೇಕು.
9) ಎಂಟು ತಿಂಗಳ ( 8 month pregnant cow) ಗರ್ಭದ ಜಾನುವಾರುಗಳನ್ನು ಸಾಗಾಣಿಕೆ ಮಾಡುವಾಗ ವಾಹನದಲ್ಲಿ ಸಾಕಷ್ಟು ಸ್ಥಳಾವಕಾಶ ನೀಡಿ ಗಂಟೆಗೆ 20.ಕಿ.ಮೀ. ವೇಗದಲ್ಲಿ ಸಂಚರಿಸಬೇಕು.
10) ಎರಡಕ್ಕಿಂತ ಹೆಚ್ಚು ಜಾನುವಾರುಗಳನ್ನು ಸಾಗಾಣಿಕೆ ಮಾಡುವ ಸಂದರ್ಭದಲ್ಲಿ ಶಾಶ್ವತ ವಿಭಜನೆ ( divider) ಕಲ್ಪಿಸಿ 100 ಕೆ.ಜಿ. ಗಿಂತ ಕಡಿಮೆ ಜಾನುವಾರಿಗೆ 1 X 1.5 ಮೀ. ಜಾಗಕಲ್ಪಿಸಬೇಕು, 100 ಕೆಜಿಗಿಂತ ಮೇಲ್ಪಟ್ಟ ಜಾನುವಾರಿಗೆ 1 X 2 ಮೀ. ಜಾಗ ಕಲ್ಪಿಸಬೇಕು.
ಜಾನುವಾರುಗಳ ರಕ್ಷಣೆ ನಮ್ಮೆಲ್ಲರ ಹೊಣೆ.
ಇದನ್ನೂ ಓದಿ: ನಿಮ್ಮ ಖಾತೆಗೆ ಬೆಳೆ ಪರಿಹಾರ ಜಮಾ ಆಗಿದ್ಯಾ? ಈಗಲೇ ಚೆಕ್ ಮಾಡಿ..
ಇದನ್ನೂ ಓದಿ:ABHA CARD: ಮನೆಯಲ್ಲೇ ಕುಳಿತು ABHA ಆಯುಶ್ಮಾನ್ ಕಾರ್ಡ್ ಮಾಡಿಕೊಳ್ಳಿ.
ಇದನ್ನೂ ಓದಿ:Lumpy skin disease: ಈ ರೀತಿ ಕ್ರಮ ಅನುಸರಿಸಿ ಗಂಟು ರೋಗ ನಿವಾರಣೆ ಮಾಡಿ,
ಗ್ರಾಮೀಣ ಭಾಗಗಳಲ್ಲಿ ಹೆಚ್ಚಾಗಿ, ಸಣ್ಣ ಸಣ್ಣ ರೈತರು, ಭೂ ರಹಿತ ಕೃಷಿ ಕಾರ್ಮಿಕರು ಎಲ್ಲರೂ ಜಾನುವಾರು ಅಥವಾ ದನ ಕರುಗಳ ಸಾಕಾಣಿಕೆ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ, ಮತ್ತು ಅದೇ ಅವರ ಜೀವನೋಪಾಯ ಆಗಿದೆ, ಪಶು ಸಂಗೋಪನೆ ಮತ್ತು ಕೃಷಿ ಎರಡು ಅವಲಂಬಿತವಾಗಿದೆ, ಒಂದನ್ನು ಬಿಟ್ಟು ಒಂದು ಇರಲು ಕಷ್ಟ ಸಾಧ್ಯ, ಯಾಕೆಂದರೆ ಜಾನುವಾರುಗಳು ನೀಡುವ ಉತ್ತಮ ಗುಣಮಟ್ಟದ ಸೆಗಣಿಯಿಂದ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಲು ತುಂಬಾ ಉಪಯುಕ್ತ ಆಗುತ್ತವೆ.
ಅದೇ ರೀತಿ, ನಮ್ಮ ದೇಶದಲ್ಲಿ ಶೇಕಡಾ 70-80% ಜನರು ಕೃಷಿಯನ್ನು ಅವಲಂಬಿಸಿ ಜೀವನ ನಡೆಸುತ್ತಿರುವುದರಿಂದ, ಹೈನುಗಾರಿಕೆ, ಪಶುಸಂಗೋಪನೆ, ಎರೆಹುಳು ಗೊಬ್ಬರ, ಗೋಕೃಪಮೃತ ಹೀಗೆ ಹಲವಾರು ಪ್ರಕಾರಗಳಲ್ಲಿ ಕೃಷಿಗೆ ಮತ್ತು ಜೀವನಕ್ಕೆ ಆಧಾರವಾಗಿವೆ, ಜಾನುವಾರುಗಳು.
English version:
CATTLE TRANSPORTATION RULES IN KARNATAKA
As the Karnataka Cattle Prevention and Protection Act 2020 has been enacted, the relevant rules regarding Cattle Traffic have been issued in the Karnataka Gazette on 24-05-2021.
1) Transport of livestock for agriculture or animal husbandry purposes should be licensed not below the rank of gazetted officer of the State Government, certified by a veterinary officer of competent authority, prepared for transport on the advice of a doctor.
2) At the time of transportation of cattle, ownership documentation, first veterinary medical kit should be carried. Otherwise, you will be liable to heavy fines
3) Ownership documentation means Cattles earring / Aadhaar card or Voter ID or Pancard or Ration card or Driving license or Nrega card with photo ID issued by State Government or Central Government
4) Exemption: Exemption is provided for transporting milking cows and buffaloes and their calves within 15 km radius.
Mostly in rural areas, small farmers, landless agricultural laborers all live by rearing cattle or calves, and that is their livelihood, animal husbandry and agriculture are two dependent, it is difficult to have one without the other, because the good quality dung provided by cattle improves soil fertility. are very useful for increasing.
Similarly, since 70-80% people in our country depend on agriculture for their livelihood, livestock are the basis of agriculture and livelihood in various forms like dairy farming, animal husbandry, earthworm manure, cow dung etc.
ಈ ಲೇಖನ ನಿಮಗೆ ಇಷ್ಟವಾದಲ್ಲಿ ಮೇಲಿರುವ ಸಾಮಾಜಿಕ ಜಾಲ ತಾಣಗಳ ಲಿಂಕ್ ಒತ್ತಿ, ನಿಮ್ಮ ರೈತ ಬಾಂಧವರಿಗೆ ತಲುಪಿಸಿ… ಜಾನುವಾರುಗಳ ಸಾಗಣಿಕೆ ನಿಯಮಗಳನ್ನು ತಪ್ಪದೆ ಪಾಲಿಸಿ…
ನಮ್ಮ ಕೃಷಿ ಜಗತ್ತು ವಾಟ್ಸಾಪ್ ಗ್ರೂಪ್ ಗೆ ಸೇರಲು ಈ ಕೆಳಗಿನ ಲಿಂಕ್ ಒತ್ತಿ,
https://chat.whatsapp.com/GIMEdBHFw0R0M1ysUW80dg