March 23, 2023

ಪ್ರಧಾನಮಂತ್ರಿ ನರೇಗಾ ಯೋಜನೆಯಿಂದ ದನದ ಕೊಟ್ಟಿಗೆ ನಿರ್ಮಾಣಕ್ಕೆ 57000 ಸಹಾಯ ಧನ.

Share News

2021-2022 ನೇ ಸಾಲಿನ ನರೇಗಾ ಯೋಜನೆ ಅಡಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಅಲ್ಪಸಂಖ್ಯಾತರು ಹಿಂದುಳಿದ ವರ್ಗ, ಸಾಮಾನ್ಯ ಜನರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ 2022 ಜುಲೈ ತಿಂಗಳಲ್ಲಿ ಪಂಚಾಯತ್ ರಾಜ್ ಇಲಾಖೆ ಅಡಿಯಲ್ಲಿ, ದನದ ಕೊಟ್ಟಿಗೆ ನಿರ್ಮಾಣ ಮಾಡಲು ಸಹಾಯಧನ ನೀಡಲಾಗುತ್ತಿದೆ.

ಈ ಕಳೆದ 2020-2021 ಸಾಲಿನಲ್ಲಿ ದನದ ಕೊಟ್ಟಿಗೆ ನಿರ್ಮಾಣಕ್ಕೆ ಕೇವಲ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಇವರಿಗೆ ಮಾತ್ರ ಸಹಾಯಧನ ನೀಡಲಾಗುತ್ತಿತ್ತು, 19000 ರೂ ಗಳನ್ನು ನಿಗದಿ ಪಡಿಸಿ, ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿ, ಫಲಾನುಭವಿಗಳಿಗೆ work card ನೀಡಿ ಕೆಲಸ ಮಾಡಲು ಅನುಮತಿಯನ್ನು ನೀಡುತ್ತಿದ್ದರು.

ಆದರೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರು ಇದರ ಸದುಪಯೋಗ ಪಡಿಸಿಕೊಳ್ಳಲು ಅಷ್ಟೇನೂ ಆಸಕ್ತಿ ತೋರದೇ ಇದ್ದ ಕಾರಣಕ್ಕಾಗಿ, ಮತ್ತು ಎಲ್ಲ ಹಿಂದುಳಿದ ವರ್ಗ ಹಾಗೂ ಸಾಮಾನ್ಯ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿ ಆಯ್ಕೆಯಾದ ಫಲಾನುಭವಿಗಳಿಗೆ ದನದ ಕೊಟ್ಟಿಗೆ ನಿರ್ಮಾಣಕ್ಕೆ work card ನೀಡಿದ್ದರು..

ಅದೇ ರೀತಿ ಎಲ್ಲ ಫಲಾನುಭವಿಗಳು ಅದರ ಸದುಪಯೋಗ ಪಡೆದುಕೊಂಡಿದ್ದರು,

ಈ ಪ್ರಸಕ್ತ 2021-2022 ರ ಸಾಲಿನ ನರೇಗಾ ಯೋಜನೆಯ ಕೇಂದ್ರ ಸರ್ಕಾರ, ಎಲ್ಲ ವರ್ಗಗಳಿಗೆ ತಲಾ 57000 ರೂಗಳನ್ನು ನೀಡುತ್ತಿದ್ದಾರೆ, ಈಕೆಂದರೆ ಕೆಲ ದಿನಗಳಿಂದ ಕಟ್ಟಡ ಸಾಮಗ್ರಿಗಳ ಬೆಲೆ ಹೆಚ್ಚಾಗಿರುವುದರಿಂದ ಸಹಾಯಧನದ ಬೆಲೆಯನ್ನು ಸಹ ಜಾಸ್ತಿ ಮಾಡಿದ್ದಾರೆ.

ಎಲ್ಲಿ ಅರ್ಜಿ ಸಲ್ಲಿಸಬೇಕು..?

ರೈತರು, ಮತ್ತು ಸಣ್ಣ ಕುಟುಂಬದ ಜನರು, ದನ ಕರು ಎಮ್ಮೆ ಹೊಂದಿರುವ, adhar card, voter ID ಇರುವ ಯಾವುದೇ ಅಭ್ಯರ್ಥಿ ಆರಾಮಾಗಿ ಈ ಯೋಜನೆಯ ಲಾಭ ಪಡೆಯಲು ಅರ್ಹರಾಗಿರುತ್ತಾರೆ, ಈ ಮೊದಲೇ ದನದ ಕೊಟ್ಟಿಗೆ ಹೊಂದಿದ್ದರೆ, ಅಂತವರು ಈ ಯೋಜನೆಯ ಲಾಭ ಪಡೆಯಲು ಸಾಧ್ಯವಿಲ್ಲ.

ತಮ್ಮ ಹಳ್ಳಿಯ ಗ್ರಾಮ ಪಂಚಾಯತ್ ಗೆ ಹೋಗಿ, ಅಲ್ಲಿನ ಪಂಚಾಯತ್ ಅಭಿವೃದ್ಧಿ ಅಧಿಕಾರಿ (PDO) ಇವರ ಹತ್ತಿರ ಪ್ರಸಕ್ತ ಸಾಲಿನ ದನದ ಕೊಟ್ಟಿಗೆ ನಿರ್ಮಾಣದ ಮಾಹಿತಿಯನ್ನು ಪಡೆದು,

  • ಆಧಾರ್ ಕಾರ್ಡ್
  • ಪಡಿತರ ಚೀಟಿ
  • ವೋಟರ್ ಐಡಿ
  • ಬ್ಯಾಂಕ್ ಪಾಸಬುಕ್
  • ಜಮೀನು ಇದ್ದರೆ ಪಹಣಿ ಪತ್ರ
  • ಜಮೀನು ಇಲ್ಲದಿದ್ದರೆ (No land certificate)
  • Passport ಸೈಜ್ ಫೋಟೋಸ್

ಇವೆಲ್ಲವನ್ನೂ ತೆಗೆದುಕೊಂಡು, ಪಂಚಾಯತ್ ಒಳಗೆ ಇರುವ ಕೇಸ್ ವರ್ಕರ್ (case worker) ಅಥವಾ ಡೇಟಾ ಎಂಟ್ರಿ ಆಪರೇಟರ್ (data entry operator) ಹತ್ತಿರ ನೀಡಿ ಅರ್ಜಿಯನ್ನು ತುಂಬಿ , ಅರ್ಜಿಯ ನಕಲು ಪ್ರತಿ (recieved copy ) ಪಡೆದುಕೊಳ್ಳಬೇಕು.

ನಿಮ್ಮ ಖಾತೆಗೆ ಬೆಳೆ ಪರಿಹಾರ ಜಮಾ ಆಗಿದ್ಯಾ? ಈಗಲೇ ಚೆಕ್ ಮಾಡಿ..

ಇದಾದ ನಂತರ, ಅರ್ಜಿಯನ್ನು ಪರಿಶೀಲಿಸಿ ಆಯ್ಕೆಯಾದಲ್ಲಿ ಫಲಾನುಭವಿಗಳ ಪಟ್ಟಿ ಸಿದ್ಧ ಮಾಡಿ, ಪಂಚಾಯತ್ ನ ಫಲಕದಲ್ಲಿ ಅಂಟಿಸುತ್ತಾರೆ. ನಂತರದಲ್ಲಿ ತಾವುಗಳು ಪಂಚಾಯತ್ ಅಭಿವೃದ್ಧಿ ಅಧಿಕಾರಿಯ ನಿರ್ದೇಶನದ ಮೇರೆಗೆ, work card ಪಡೆದುಕೊಂಡು, ದನದ ಕೊಟ್ಟಿಗೆ ನಿರ್ಮಾಣಕ್ಕೆ ಸಿದ್ಧತೆ ಮಾಡಿಕೊಳ್ಳಬೇಕು,

ನೀವು ನಿಗದಿ ಪಡಿಸಿಕೊಂಡ ಜಾಗದಲ್ಲಿ, ಪಂಚಾಯತ್ ಇಂದ ಅಳತೆ ಕೊಟ್ಟಿರುವ 17×21 ಅಡಿ ಜಾಗದಲ್ಲಿ ಬುನಾದಿ ತೆಗೆದು, ಜಿಪಿಎಸ್ಸ ( GPS) ಮಾಡಿಸಲು ಪಂಚಾಯತ್ ನ ಸಿಬ್ಬಂದಿಗೆ ಮಾಹಿತಿ ತಿಳಿಸಬೇಕು, ಅವರು ಜಿಪಿಎಸ್ ಮಾಡಿದ ನಂತರ , ಸಿಮೆಂಟ್ ಹೆಂಟೆ (cement bricks), ಮಣ್ಣಿನ ಹೆಂಟೆ (clay bricks) , ಮರಳು (sand) ಸಿಮೆಂಟ್ ಉಪಯೋಗಿಸಿ ಕಟ್ಟಡ ಕಟ್ಟಲು ಪ್ರಾರಂಭ ಮಾಡಬೇಕು,

ಬೆಳೆ ವಿಮೆ ಸ್ಟೇಟಸ್ ಚೆಕ್ ಮಾಡಲು, ಡೈರೆಕ್ಟ್ ಲಿಂಕ್ ಇಲ್ಲಿದೆ ನೋಡಿ.. Crop Insurance

ಸರಿಯಾದ ಕ್ರಮದಲ್ಲಿ ದನಗಳು ಮಲಗಲು, ಅವುಗಳು ಸೆಗಣಿ( dung) ಉಚ್ಚೆ ( Urine) ತೆಗೆಯುವ ರೀತಿಯಲ್ಲಿ ಕಟ್ಟಿಸಬೇಕು, ಇದನ್ನೆಲ್ಲ ಮಾಡಿದ ನಂತರ ಮೇಲ್ಛಾವಣಿ ಗೆ ತಗಡು ( sheets) ಅಥವಾ ಹಂಚು ಹಾಕಿಸಬಹುದು, ಕೊಟ್ಟಿಗೆಯ ಮದ್ಯ ಭಾಗದಲ್ಲಿ ಅಥವಾ ಕೊಟ್ಟಿಗೆಯ ಉತ್ತರ , ದಕ್ಷಿಣ ಭಾಗದಲ್ಲಿ, ಗೊಂದಲಿ ( ಮೇವು ಹಾಕುವ ಜಾಗ) 2 ಫೀಟ್ ಅಂತರದಲ್ಲಿ ಕಟ್ಟಸಬೇಕು.

ನಂತರ ಎಲ್ಲಾ ಗೋಡೆಗಳಿಗೆ ಪ್ಲಾಸ್ಟರ್ ಮಾಡಿಸಿ, ಗ್ರಾಮ ಪಂಚಾಯತ್ ನೀಡುವ ದನದ ಕೊಟ್ಟಿಗೆಯ ನಾಮಫಲಕವನ್ನು ದನದ ಕೊಟ್ಟಿಗೆಯ ಮುಂದೆ ಹಾಕಬೇಕು,ಮುಂದಿನ ಗೋಡೆಗೆ ಸುಣ್ಣ ಹಚ್ಚಿ ಫೈನಲ್ ಫೋಟೋ ಗೆ ಸಿದ್ದಪಡಿಸಿ, ಸಿಬ್ಬಂದಿಗೆ ಮತ್ತು ಪಿಡಿಒ ಗೆ, ತಿಳಿಸಬೇಕು,

ಇವೆಲ್ಲ ಮಾಡಿದ ನಂತರ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮತ್ತು ಎಂಜಿನಿಯರ್ ಪರಿಶೀಲಿಸಿ, ಅಳತೆ ಮಾಡಿ, ನಿಮ್ಮ ಖಾತೆಗೆ ವೆಚ್ಚವಾದ ಸಹಾಯಧನ ಹಾಕುತ್ತಾರೆ.

ಈ ಲೇಖನ ನಿಮಗೆ ಇಷ್ಟವಾದಲ್ಲಿ ಮೇಲೆ ಮತ್ತು ಕೆಳಗೆ ಇರುವ social link ನ್ನು ಉಪಯೋಗಿಸಿ, share ಮಾಡಿ… ಈ ಯೋಜನೆಯ ಲಾಭ ಪಡೆಯಿರಿ.


Share News

Malatesh

Hey I'm malatesh, from karnataka india... This website includes Agriculture, horticulture, vetarnary, latest news informations.

View all posts by Malatesh →

Leave a Reply

Your email address will not be published. Required fields are marked *