
ಹೌದು ವೀಕ್ಷಕರೇ, ರಾಜ್ಯ ಸರ್ಕಾರದ ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಅವರು ಈ ತಿಂಗಳ ಸೆಪ್ಟೆಂಬರ್ 15ರಂದು, ಕರಾವಳಿ ಜಿಲ್ಲೆಗಳಿಗೆ ಪಡಿತರ ಅಂದರೆ ರೇಷನ್ ಲ್ಲಿ ಕರಾವಳಿ ಭಾಗದ ಪ್ರಸಿದ್ಧ ಮತ್ತು ಪ್ರಮುಖ ಅಕ್ಕಿಯಾದ ಕುಚಲಕ್ಕಿ (brown rice) ಒದಗಿಸಲು ಅನುಮತಿ ನೀಡಿದ್ದಾರೆ.
ಕರಾವಳಿ ಜಿಲ್ಲೆ ಗಳಾದ , ಉಡುಪಿ, ದಕ್ಷಿಣ ಕನ್ನಡ,ಉತ್ತರ ಕನ್ನಡ, ಈ ಭಾಗದ ಜನರು ಬಹುತೇಕ ಎಲ್ಲ ಮನೆಗಳಲ್ಲೂ ಬಳಸುವ ಆಹಾರ ಪದಾರ್ಥ ಎಂದರೆ ಕುಚಲಕ್ಕಿ, ಪ್ರತಿದಿನ ಈ ಅಕ್ಕಿ ಇಲ್ಲದೆ ಇವರಿಗೆ ಊಟವಿಲ್ಲ.
ರಾಜ್ಯ ಬಿಜೆಪಿ ಅಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಅವರು ಮತ್ತು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ನೇತೃತ್ವದಲ್ಲಿ, ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಉಪಾಧ್ಯಕ್ಷ Kiran Kumar ಕೊಡ್ಗಿ ಅವರು, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದರು.
ಇದನ್ನೂ ಓದಿ:
ನಿಮ್ಮ ಖಾತೆಗೆ ಬೆಳೆ ಪರಿಹಾರ ಜಮಾ ಆಗಿದ್ಯಾ..? ಹಾಗಿದ್ರೆ ಈಗಲೇ ಚೆಕ್ ಮಾಡಿ
ಈಗಾಗಲೇ ಕುಚಲಕ್ಕಿ ವಿತರಣೆಗೆ 299 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದ್ದು, ಆದರೆ ಸದ್ಯ ಕರಾವಳಿ ಭಾಗದ ಉಡುಪಿ ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆ ಗಳಲ್ಲಿ , ಆಹಾರ ನಿಗಮದ ವತಿಯಿಂದ ಬೇಳ್ತಗಿ ಹಾಗೂ ಕಡಿಮೆ ಗುಣಮಟ್ಟದ ಅಕ್ಕಿ ನೀಡಲಾಗುತ್ತಿದ್ದು, ಅದನ್ನು ಜನರು ಉಪಯೋಗಿಸುತ್ತಿಲ್ಲ , ಪಡಿತರದಾರರಿಗೆ ಸ್ಥಳೀಯವಾಗಿ ಉಪಯೋಗಿಸುವ ಕುಚಲಕ್ಕಿ ನೀಡುತ್ತಿಲ್ಲ.
ಕೇರಳದಲ್ಲಿ ಯಶಸ್ವಿಯಾಗಿ ಉತ್ತಮ ಗುಣಮಟ್ಟದ ಕುಚಲಕ್ಕಿ ವಿತರಣೆ ಮಾಡಲಾಗಿದೆ.

ನಮ್ಮ ನೆರೆಯ ರಾಜ್ಯವಾದ ಕೇರಳದ ಕರಾವಳಿ ಭಾಗದ ಜಿಲ್ಲೆಗಳಿಗೆ ಈಗಾಗಲೇ, ರೈತರು ಬೆಳೆದ ಭತ್ತವನ್ನು ಕರೀದಿ ಮಾಡಿ, ಪಡಿತರ ಚೀಟಿ ಇರುವ ಜನರಿಗೆ ವಿತರಣೆ ಮಾಡುತ್ತಿದ್ದಾರೆ, ಹಾಗೆಯೇ ನಮ್ಮ ರಾಜ್ಯದ ಕರಾವಳಿ ಭಾಗದ ಜನರಿಗೆ, ಉತ್ತಮ ಗುಣಮಟ್ಟದ ಅಕ್ಕಿ ವಿತರಣೆ ಮಾಡುವಂತೆ ಅನೇಕ ಬಾರಿ ಒತ್ತಾಯ ಮಾಡಿದ್ದರು, ಈ ಬಾರಿ ಮಣಿದ ಸರ್ಕಾರ ಕೊನೆಗೂ ಅಕ್ಕಿಯನ್ನು ನೀಡುವ ಭರವಸೆ ಕೊಟ್ಟಿದ್ದಾರೆ, ಅದಕ್ಕೆ ಬೇಕಾದ ಎಲ್ಲ ಕಾರ್ಯಕ್ರಮಗಳನ್ನು ರಾಜ್ಯ ಸರ್ಕಾರ ಮಾಡಲು ನಿರ್ಧರಿಸಿದೆ.
ಈ ಲೇಖನ ನಿಮಗೆ ಇಷ್ಟವಾದಲ್ಲಿ ಮೇಲಿರುವ ಸಾಮಾಜಿಕ ಜಾಲ ತಾಣಗಳ ಮೂಲಕ ನಿಮ್ಮ ರೈತ ಬಾಂಧವರಿಗೆ, ತಲುಪಿಸಿ…
ಇದನ್ನೂ ಓದಿ: