
2022 ಮತ್ತು 2023 ಸಾಲಿನ ಈ ವರ್ಷದ ಭಾರೀ ಪ್ರಮಾಣದ ಮಳೆಯಿಂದಾಗಿ, ಮುಂಗಾರು ಬೆಳೆಯ ಬೆಳೆ ವಿಮಾ ತುಂಬಲು ಕಳೆದ ಎರಡು ತಿಂಗಳ ಹಿಂದೆ ಸುತ್ತೋಲೆಯನ್ನು ಕರ್ನಾಟಕ ಸರ್ಕಾರ ಹೊರಡಿಸಿತ್ತು. ಅದರಂತೆ ರಾಜ್ಯದ ಎಲ್ಲಾ ರೈತರು ತಮ್ಮ ಜಿಲ್ಲೆಗಳ ಅನುಸಾರ, ತಮ್ಮ ತಮ್ಮ ತಾಲೂಕ ಕಚೇರಿಗಳಲ್ಲಿ ಬೆಳೆ ವಿಮಾ ( crop insurance) ಅರ್ಜಿಗಳನ್ನು ಪಡೆದು, ಸೂಕ್ತ ದಾಖಲೆಗಳೊಂದಿಗೆ ಭರ್ತಿ ಮಾಡಿ, ನೆಮ್ಮದಿ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಿದ್ದರು.
ನಮ್ಮ ರಾಜ್ಯದಲ್ಲಿ ನೈಸರ್ಗಿಕ ವಿಕೋಪಗಳು, ಅವಘಡಗಳು ಜಿಲ್ಲೆಯಿಂದ ಜಿಲ್ಲೆಗೆ ಬೇರೆ ಬೇರೆ ರೀತಿಯಲ್ಲಿ ಸಂಭವಿಸುತ್ತವೆ. ಹಾಗಾಗಿ ಆಯಾ ಜಿಲ್ಲೆಗಳ ಪೈಕಿ, ತಾಲೂಕ ಅಧಿಕಾರಿಗಳು, ತಹಶೀಲ್ದಾರ್ ಇವರು ಬೆಳೆಗಳ ಹಾನಿಯ ಆದಾರದ ಮೇಲೆ report ಮಾಡಿಕೊಂಡು, ಸರ್ಕಾರಕ್ಕೆ ಮತ್ತು ವಿಮಾ ನೀಡುವ ಕಂಪೆನಿಗಳಿಗೆ ಮಾಹಿತಿ ( information) ನೀಡುತ್ತಾರೆ.
ಇದನ್ನೂ ಓದಿ:Lumpy skin disease: ಈ ರೀತಿ ಕ್ರಮ ಅನುಸರಿಸಿ ಗಂಟು ರೋಗ ನಿವಾರಣೆ ಮಾಡಿ,
ಬೆಳೆ ವಿಮಾ ಎಂದರೆ ಏನು..? ಇದನ್ನು ಏಕೆ ಜಾರಿಗೆ ತರಲಾಗಿದೆ..?
ಬೆಳೆ ವಿಮೆ ಒಂದು ಅಪಾಯ ಮತ್ತು ರೈತರ ಬೆಳೆಯ ನಷ್ಟದ ಪರಿಹಾರ ಒದಗಿಸುವ ಒಂದು ಕಾರ್ಯಕ್ರಮ ಆಗಿದೆ. ಪ್ರಸ್ತುತವಾಗಿ ಬೆಳೆ ವಿಮೆಯಲ್ಲಿ ಸುಮಾರು 128 ಪೈರುಗಳು( crops) ಒಳಗೊಂಡಿವೆ. ಆಯಾ ಪೈರಿನ( crops) ಕರ್ಚು ವೆಚ್ಚದ ಆಧಾರದ ಮೇಲೆ ಬೆಳೆ ವಿಮಾ ಅರ್ಜಿ ತುಂಬಿಸಿಕೊಂಡು, ವಿಮಾ ( insurance) ನೀಡಲಾಗುತ್ತದೆ.
ಬೆಳೆ ವಿಮೆಯಲ್ಲಿ ಎಷ್ಟು ವಿಧ..
1) ಬೆಳೆ ಆಲಿಕಲ್ಲು ವಿಮೆ: ಈ ವಿಮೆಯನ್ನು ಹೆಚ್ಚಾಗಿ ಖಾಸಗಿ ಕಂಪನಿಗಳು ನೀಡುತ್ತವೆ. ಆಲಿಕಲ್ಲು ಸೀಮಿತ ಜಾಗದಲ್ಲಿ ಕಂಡುಬರುವುದರಿಂದ, ಇದನ್ನು ಎಲ್ಲ ಪ್ರದೇಶಕ್ಕೆ ಒಂದೇ ಸಮನೆ ನೀಡಲು ಸಾದ್ಯವಿಲ್ಲ, ಹಾಗಾಗಿ ಈ ವಿಮೆಯನ್ನು ಖಾಸಗಿ ವಿಮದರರು ನೀಡುತ್ತಾರೆ.
2) ಪೈಲಟ್ ಬೆಳೆ ವಿಮೆ ಯೋಜನೆ: ಈ ಬೆಳೆ ವಿಮೆಯಲ್ಲಿ ಕೇವಲ ಸಾಂಪ್ರದಾಯಿಕ ಹಳ್ಳಿಯ ಬೆಳೆಗಳಾದ ಹತ್ತಿ, ಮೆಕ್ಕೆಜೋಳ,ಏಕದಳ ಧಾನ್ಯಗಳು, ಕಾಳುಗಳು ಇವುಗಳಿಗೆ ಮಾತ್ರ ಬೆಳೆ ವಿಮೆಯನ್ನು ನೀಡಲಾಗುತ್ತದೆ.
3) ಸಮಗ್ರ ಬೆಳೆ ವಿಮಾ ಯೋಜನೆ: ನಮ್ಮ ಭಾರತ ಸರ್ಕಾರವು, ಸಮಗ್ರ ಬೆಳೆ ವಿಮೆ ಯೋಜನೆಯನ್ನು 1985 ಏಪ್ರಿಲ್ 1 ರಂದು ಜಾರಿಗೆ ಮಾಡಲಾಯಿತು. ಈ ಬೆಳೆ ವಿಮೆಯಲ್ಲಿ ರೈತರಿಗೆ ಏಕರೂಪದ ಪ್ರದೇಶದ ವಿಮೆ ಒದಗಿಸಲಾಗುತ್ತದೆ. ಮತ್ತು ಬೆಳೆ ಕಾಳುಗಳಿಗೆ ಸುಮಾರು 10000 ತನಕ , ಮತ್ತು ಎಣ್ಣೆ ಕಾಳುಗಳಿಗೆ 5% ವಿಮಾ ನೀಡಲಾಗುತ್ತದೆ.
ಬೆಳೆ ವಿಮೆಗೆ ಈ ಕೆಳಗಿನ ಕೆಲವು ಮುಖ್ಯ ಪೈರುಗಳು( crops) ಒಳಗೊಂಡಿವೆ ,
- ಹತ್ತಿ ( cotton)
- ಮೆಕ್ಕೆಜೋಳ (corn)
- ಜೋಳ ( jawer)
- ಮೆಣಸಿನಕಾಯಿ ( chilli)
- ಸೂರ್ಯಕಾಂತಿ ( sunflower)
- ಭತ್ತ ( rice)
- ಕಡಲೆಕಾಯಿ
- ಬಾಳೆಹಣ್ಣು ( banana)
- ಅರಿಶಿಣ ( Turmuric)
- ಹೆಸರುಕಾಳು
- ಕಪ್ಪು ಕಡಲೆ
- ಈ ರೀತಿ ಇನ್ನೂ ಹಲವಾರು ಬೆಳೆಗಳು ಒಳಗೊಂಡಿವೆ.
ಇದನ್ನೂ ಓದಿ:ನಿಮ್ಮ ಖಾತೆಗೆ ಬೆಳೆ ಪರಿಹಾರ ಜಮಾ ಆಗಿದ್ಯಾ? ಈಗಲೇ ಚೆಕ್ ಮಾಡಿ..
ಇದನ್ನೂ ಓದಿ:Labour card: ಈಗ ಮನೆಯಲ್ಲೇ ಕುಳಿತು ಲೇಬರ್ ಕಾರ್ಡ್ ಮಾಡಿಕೊಳ್ಳಿ, ಮದುವೆ,ಹೆರಿಗೆ, ಆಕ್ಸಿಡೆಂಟ್ ಸಹಾಯಧನ ಪಡೆಯಿರಿ
ಈ ಕೆಳಗಿನ ಮಾಹಿತಿಯನ್ನು ಬಳಸಿಕೊಂಡು ನಿಮ್ಮ ಬೆಳೆ ವಿಮಾ ಸ್ಟೇಟಸ್ ನ್ನು ಚೆಕ್ ಮಾಡಿಕೊಳ್ಳಿ..
ನೀವು ಮೊದಲು ನಿಮ್ಮ ಮೊಬೈಲ್ ನಲ್ಲಿ ಕರ್ನಾಟಕ ಸರ್ಕಾರದ ಅಧಿಕೃತ ವೆಬ್ಸೈಟ್ ( website) ಆದ ಸಂರಕ್ಷಣೆ ಇದರ ಮೇಲೆ samrakshane ಕ್ಲಿಕ್ ಮಾಡಿ.
ಈ ಲಿಂಕ್ ಒತ್ತಿ…👇
/https://www.samrakshane.karnataka.gov.in/

ಈ ವೆಬ್ಸೈಟ್ ನ ಮುಖ ಪುಟ ( main page) ಓಪನ್ ಆದಮೇಲೆ , ಮದ್ಯದ ಫಾರ್ಮರ್ ಖಾನೆಯಲ್ಲಿ ( farmer section) check ಸ್ಟೇಟಸ್ ಎಂಬ ಆಪ್ಷನ್ ( option ) ಮೇಲೆ ಕ್ಲಿಕ್ ಮಾಡಿ…

ನಂತರ ನಿಮಗೆ ಈ ರೀತಿಯ ಮುಖ ಪುಟ ತೆರೆದುಕೊಳ್ಳುತ್ತದೆ , ಅದು ಓಪನ್ ಆದಮೇಲೆ ನೀವು ನಿಮ್ಮ ಆಧಾರ್ ಕಾರ್ಡ್ ( adhar card) , ಮೊಬೈಲ್ ನಂಬರ್ ( registered mobile number) ಯಾವುದಾದರೊಂದು fillup ಮಾಡಿ,

ಪ್ರಸಕ್ತ ವರ್ಷ, 2022-2023 ಸೆಲೆಕ್ಟ್ ಮಾಡಿಕೊಂಡು, ನೀವು ಅರ್ಜಿ ಸಲ್ಲಿಸಿದ application number ನ್ನೂ ಕೊಟ್ಟಿರುವ ಜಾಗದಲ್ಲಿ ತುಂಬಿ,
ಸೀಸನ್ ಸೆಲೆಕ್ಟ್ ಮಾಡಿ, ನಂತರ ಕೊಟ್ಟಿರುವ captcha ಅಕ್ಷರಗಳನ್ನು ತುಂಬಿ, submit ಕೊಡಿ.
ಈ ರೀತಿ ನೀವು ಸುಲಭವಾಗಿ ನಿಮ್ಮ ಈ ವರ್ಷದ ಬೆಳೆ ವಿಮಾ ಪರಿಹಾರದ ಸ್ಟೇಟಸ್ ನ್ನೂ ಚೆಕ್ ಮಾಡಿಕೊಳ್ಳಬಹುದು.
ಮೇಲೆ ಕೊಟ್ಟಿರುವ ಬೆಳೆ ವಿಮಾ ಚೆಕ್ ಮಾಡುವ ಲಿಂಕ್ ಓಪನ್ ಆಗದೆ ಇದ್ದಲ್ಲಿ, ನೀವು ನೇರವಾಗಿ google ಒಳಗೆ, ಬೆಳೆ ವಿಮಾ 2022 ಎಂದು ಟೈಪ್ ಮಾಡಿ, ಅಲ್ಲಿಯೂ ಸಹ ನೋಡಬಹುದು..