
ಹೌದು ವೀಕ್ಷಕರೇ, ನಿಮಗೆಲ್ಲ ತಿಳಿದ ಹಾಗೆ ರಾಜ್ಯ ಸರ್ಕಾರ ಒಂದು ಮಹತ್ವದ ಯೋಜನೆಯನ್ನು ರೂಪಿಸಿತ್ತು, ಅದುವೇ ರೈತ ಶಕ್ತಿ ಯೋಜನೆ.
ರೈತ ಶಕ್ತಿ ಯೋಜನೆ. ಡೀಸೆಲ್ ಸಬ್ಸಿಡಿಸಣ್ಣ ಮತ್ತು ಅತೀ ಹೆಚ್ಚು ಹಿಡುವಳಿ ಭೂಮಿ ಹೊಂದಿರುವ ರಾಜ್ಯದ ಎಲ್ಲಾ ರೈತರಿಗೆ ಎಕರೆಗೆ 250-500 ರೂಪಾಯಿ ಡೀಸೆಲ್ ಪಡೆಯಲು ಸಬ್ಸಿಡಿ ಯೋಜನೆ ಆಗಿದೆ.
ಸಣ್ಣ ಮತ್ತು ಅತೀ ಹೆಚ್ಚು ಹಿಡುವಳಿ ಭೂಮಿ ಹೊಂದಿರುವ ರಾಜ್ಯದ ಎಲ್ಲಾ ರೈತರಿಗೆ ಎಕರೆಗೆ 250-500 ರೂಪಾಯಿ ಡೀಸೆಲ್ ಪಡೆಯಲು ಸಬ್ಸಿಡಿ ಯೋಜನೆ ಆಗಿದೆ.
https://raitamitra.karnataka.gov.in/
Arecanut leaf spot disease: ಎಲೆ ಚುಕ್ಕೆ ರೋಗಕ್ಕೆ ಹತೋಟಿ ಕ್ರಮಗಳು.
ಕಿಸಾನ್ ಸಮ್ಮಾನ ಯೋಜನೆಯ ಫಲಾನುಭವಿಗಳು ಇದಕ್ಕೆ ಅರ್ಹರು.
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಪಿಎಂ ಕಿಸಾನ್ ಸಮ್ಮಾನ ಯೋಜನೆಯ ಫಲಾನುಭವಿಗಳು, ಮತ್ತು ಯೋಜನೆಗೆ ನೋಂದಣಿ ಮಾಡಿಕೊಂಡ, ಎಲ್ಲ ಸಣ್ಣ ಮತ್ತು ಅತೀ ಸಣ್ಣ ಹಿಡುವಳಿದಾರರು ಈ ಯೋಜನೆಯ ಲಾಭ ಪಡೆಯಲು ಅರ್ಹರಾಗಿರುತ್ತಾರೆ.
Pm kisan: ಪಿಎಂ ಕಿಸಾನ್ 12 ಕಂತಿನ ಅರ್ಹರ ಪಟ್ಟಿ ಬಿಡುಗಡೆ
ನೇರವಾಗಿ ರೈತರ ಖಾತೆಗೆ ಹಣ ಜಮಾ.
ಇನ್ನು ಮುಂದೆ ರೈತರು ಯಾವುದೇ, ಕೃಷಿ ಇಲಾಖೆ ಗೆ ಹೋಗುವ ಅವಶ್ಯಕತೆ ಇರುವುದಿಲ್ಲ, ಮತ್ತು ಯಾವುದೇ ಅರ್ಜಿಯನ್ನು ಸಲ್ಲಿಸುವ ಅವಶ್ಯಕತೆ ಇಲ್ಲ. ನೇರವಾಗಿ ರೈತರ ಖಾತೆಗೆ ಪಿಎಂ ಕಿಸಾನ್ ಸಮ್ಮಾನ ಯೋಜನೆಯ ಫಲಾನುಭವಿಗಳ ಆಧಾರದ ಮೇಲೇ ರಾಜ್ಯ ಸರ್ಕಾರ ಜಮಾ ಮಾಡಲಾಗುವುದು , ಎಂದು ಕೃಷಿ ಸಚಿವ ಬಿ .ಸಿ . ಪಾಟೀಲ್ ಹೇಳಿದ್ದಾರೆ.

ಕೃಷಿ ಸಚಿವ ಬಿ.ಸಿ. ಪಾಟೀಲ್ ಭರವಸೆ.
ರೈತರು ಒಂದು ಎಕರೆ ಜಮೀನಿನಲ್ಲಿ ಟ್ರಾಕ್ಟರ್ ಸಹಾಯದಿಂದ ಉಳುಮೆ ಮಾಡಲು, ಸುಮಾರು 20-23 ಲೀಟರ್ ಡೀಸೆಲ್ ಬೇಕಾಗುತ್ತದೆ. ಈಗಿನ ಸಮಯದಲ್ಲಿ ಡೀಸೆಲ್ ಮತ್ತು ಪೆಟ್ರೋಲ್ ಬೆಲೆಗಳು ಗಗನಕ್ಕೆ ತಲುಪಿದೆ.
ಆದ್ದರಿಂದ ರೈತರಿಗೆ ಅನುಕೂಲ ಆಗುವಂತೆ , ರಾಜ್ಯ ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿದ್ದು, ಅಲ್ಪ ಮಟ್ಟಿನ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು 250-500 ರೂಪಾಯಿ ನೀಡಲು ನಿರ್ಧರಿಸಿತ್ತು.
ಹಣವನ್ನು ನೇರವಾಗಿ ರೈತರ ಖಾತೆಗೆ ಹಣ ಜಮಾ ಮಾಡಿದಲ್ಲಿ, ಯೋಜನೆಯ ಸಂಪೂರ್ಣ ಲಾಭವನ್ನು ರೈತನೇ ಪಡೆಯುತ್ತಾನೆ. ಎಂದು ಕೃಷಿ ಸಚಿವ ಬೆಂಗಳೂರಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ನಡೆದ ಕೃಷಿ ಮೇಳದಲ್ಲಿ ಮಾತನಾಡಿದರು.
ಬೆಂಗಳೂರಿನಲ್ಲಿ ಗಾಂಧಿ ಕೃಷಿ ವಿಜ್ನಾನ ಕೇಂದ್ರದಲ್ಲಿ ನಡೆದ ಕೃಷಿ ಮೇಳದ ಲೇಖನ ಓದಲು ಇಲ್ಲಿ ಕ್ಲಿಕ್ ಮಾಡಿ.
https://krushijagattu.com/bangalore-on-november-3-to-6-krushi-mela-happens/
ಪಿಎಂ ಕಿಸಾನ್ ಸಮ್ಮಾನ ಯೋಜನೆಯ, ಹಣ ಬಿಡುಗಡೆ ಆಗಿದೆಯಾ ಎಂದು ತಿಳಿದುಕೊಳ್ಳಲು ಈ ಕೆಳಗಿನ ಲಿಂಕ್ ಒತ್ತಿರಿ.
ಕರ್ನಾಟಕದಲ್ಲಿ ಟ್ರಾಕ್ಟರ್ ಯೋಜನೆ ನಿಜಾನಾ ಅಥವಾ ಸುಳ್ಳಾ? ಹಾಗಾದರೆ ಈ ಯೋಜನೆ ಯಾವ ರಾಜ್ಯದಲ್ಲಿ ಜಾರಿಗೆ ತರಲಾಗಿದೆ , ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ. ಕ್ಲಿಕ್ ಮಾಡಿ ನೋಡಿ.
https://krushijagattu.com/is-it-true-tractor-yojana-in-karnataka-false-information/
ಯಶಸ್ವಿನಿ ಯೋಜನೆಯಡಿ ಫಲಾನುಭವಿಗಳಿಗೆ ಒಟ್ಟು 400 ಕ್ಕಂತಲೂ ಹೆಚ್ಚು ಬಗೆಯ ಶಸ್ತ್ರ ಚಿಕಿತ್ಸೆಗೆ 5 ಲಕ್ಷದವರೆಗೆ ಸರ್ಕಾರದಿಂದ ಪ್ರಯೋಜನ ಸಿಗಲಿದೆ. ಅದರ ಪ್ರಯೋಜನ ಮತ್ತು ಹೇಗೆ ಯಶಸ್ವಿನಿ ಯೋಜನೆ ಸೌಲಭ್ಯ ಪಡೆಯುವುದು , ಮಾಹಿತಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.
ನಮ್ಮ ಕೃಷಿ ಜಗತ್ತು ವೆಬ್ಸೈಟ್ ಭೇಟಿ ಮಾಡಿದ್ದಕ್ಕೆ ಧನ್ಯವಾದಗಳು.
ನಮ್ಮ ಕೃಷಿ ಜಗತ್ತು ವೆಬ್ಸೈಟ್ Subscribe Notifications ಆನ್ ಮಾಡಿ, ನಿಮ್ಮ ಮೊಬೈಲ್ ಗೆ ನೇರವಾಗಿ ಸಂದೇಶದ ಮೂಲಕ ಮಾಹಿತಿ ಪಡೆಯಲು ಅನುಕೂಲ ಆಗುತ್ತದೆ.