ರೈತ ಭಾಂದವರೆ, ಡ್ರಾಗನ್ ಫ್ರೂಟ್ ಬಗ್ಗೆ ನಿಮಗೆಷ್ಟು ತಿಳಿದಿದೆ, ನಮ್ಮ ಭಾರತದಲ್ಲಿ ಕೆಲವು ವರ್ಷಗಳಿಂದ ತುಂಬಾ ಬೇಡಿಕೆ ಮತ್ತು ಕೃಷಿ ವಲಯದಲ್ಲಿ ಸಂಚಲನ ಮೂಡಿಸುತ್ತಿರುವ ಹಣ್ಣೆಂದರೆ ತಪ್ಪಾಗಲಾರದು, ಲಕ್ಷಾಂತರ ರೈತರು ಈ ವಿದೇಶಿ ಹಣ್ಣಿನ ಕೃಷಿಗೆ ಆಸಕ್ತಿ ಹೊಂದುತ್ತಿದ್ದಾರೆ,ಮತ್ತು ಇದರಿಂದ ಲಕ್ಷಾಂತರ ಆದಾಯವನ್ನು ಗಳಿಸುತ್ತಿದ್ದಾರೆ, ಹಾಗಾದರೆ ಇದರ ಸಂಪೂರ್ಣ ವಿವರ ತಿಳಿಯೋಣ..
ಎಲ್ಲಿಂದ ಬಂತು ಈ ಹಣ್ಣು…? ಯಾವ ದೇಶದ್ದು…?
ಡ್ರ್ಯಾಗನ್ ಫ್ರೂಟ್ ಒಂದು ವಿದೇಶಿ ತಳಿಯ ಹಣ್ಣಾಗಿದ್ದು ಇದು ಮೂಲತಃ ಕಳ್ಳಿ ಜಾತಿಗೆ ಸೇರಿದೆ. ಇದನ್ನು ಪ್ರಪ್ರಥಮವಾಗಿ 1880ರಿಂದ ಕೇಂದ್ರ ಅಮೇರಿಕಾ ಮತ್ತು ದಕ್ಷಿಣ ಅಮೆರಿಕಗಳಲ್ಲಿ ಬೆಳೆಯಲಾಗುತ್ತಿತ್ತು.ನಂತರದಲ್ಲಿ ಮೆಕ್ಸಿಕೋ,ಏಷ್ಯಾ, ಥಾಯ್ಲ್ಯಾಂಡ್, ಹೀಗೆ ಹಲವಾರು ದೇಶಗಳಲ್ಲಿ ಇದನ್ನು ಪ್ರಮುಖವಾಗಿ ಬೆಳೆಯಲಾಗುತ್ತದೆ. ಮತ್ತು ಈ ಹಣ್ಣಿಗೆ ಪಿಟಾಯ, ಪಿತಾಹಾಯ, ಸ್ಟ್ರಾಬೆರಿ ಪೀರ್ ಎಂದು ಸಹ ಆಯಾ ದೇಶಗಳಲ್ಲಿ ಕರೆಯುತ್ತಾರೆ.
ಪಿಎಂ ಕಿಸಾನ್ 12 ನೇ ಕಂತಿನ ಸ್ಟೇಟಸ್ ತಿಳಿದುಕೊಳ್ಳಿ.. ಶೀಘ್ರವೇ ಬರಲಿದೆ ನಿಮ್ಮ ಖಾತೆಗೆ ಹಣ. Pm kisan 12th installment
1) ಹೇಗಿರುತ್ತೆ ಈ ಸಸ್ಯ…?
ಡ್ರಾಗನ್ ಫ್ರೂಟ್ ನ ಸಸ್ಯ ಒಂದು ಕಳ್ಳಿ ಜಾತಿಗೆ ಸೇರಿದ ಪ್ರಭೇದ ಆಗಿರುವುದರಿಂದ, ಇದರ ಕಾಂಡ (Tetragonal shape) ಆಕಾರದಲ್ಲಿ ಇರುತ್ತವೆ, ಇದರ ಕಾಂಡದಲ್ಲಿ Chlorophyll ಇರುವುದರಿಂದ ದ್ಯುತಸಂಶ್ಲೇಷಣೆ ( photosynthesis) , ಭಾಷ್ಪೀಕರಣ (Traspiration) , ಉಸಿರಾಟ ( Respiration ) ಎಲ್ಲವನ್ನೂ ಎಲೆಗಳು ಮಾಡುವ ಕೆಲಸವನ್ನು ಕಾಂಡವೇ ಮಾಡುತ್ತದೆ, ಹಾಗಾಗಿ ಎಲೆಗಳು ಸಸ್ಯದ ರಕ್ಷಣಗೋಸ್ಕರ ಮುಳ್ಳುಗಳ ( spines) ರೂಪದಲ್ಲಿ ಬೆಳವಣಿಗೆ ಆಗುತ್ತವೆ.
ನಿಮ್ಮ ಖಾತೆಗೆ ಬೆಳೆ ಪರಿಹಾರ ಜಮಾ ಆಗಿದ್ಯಾ? ಈಗಲೇ ಚೆಕ್ ಮಾಡಿ..
2) ಡ್ರಾಗನ್ ಫ್ರೂಟ್ ನ ಹೂವು ಹೇಗಿರುತ್ತವೆ…?
ಈ ಸಸ್ಯದ ಕಾಂಡ ಅಥವಾ ಎಲೆಗಳ ಮದ್ಯ ಮದ್ಯದಲ್ಲಿ ಮತ್ತು ತುದಿಯಲ್ಲಿ ಹೂವುಗಳು ಅರಳುತ್ತವೆ, ಎಲ್ಲಾ ಹೂವುಗಳು ಸೂರ್ಯನ ಕಿರಣಗಳ ಸಹಾಯದಿಂದ ಅರಳಿದರೆ, ಈ ಡ್ರಾಗನ್ ಫ್ರೂಟ್ ನ ಹೂವುಗಳು ರಾತ್ರಿ ಸಮಯದಲ್ಲಿ ಅರಳುತ್ತವೆ, ಇದಕ್ಕೆ (Nocturnal flowering) ಎಂದು ಕರೆಯುತ್ತಾರೆ. ಹೂವಿನ ಪಕಳೆಗಳು ನಾರಿನ ರೂಪದಲ್ಲಿದ್ದು, ತಿಳಿ ಹಳದಿ ಮತ್ತು ಕೆಂಪು ಬಣ್ಣದಿಂದ ಕೂಡಿರುತ್ತವೆ.
3) ಡ್ರಾಗನ್ ಫ್ರೂಟ್ ಕಾಯಿ ಮತ್ತು ಹಣ್ಣು…?
ಹೂವುಗಳು ಅರಳಿದ ನಂತರದಲ್ಲಿ ಸ್ವಲ್ಪ ದಿನಗಳ ನಂತರ ಡ್ರಾಗನ್ ಫ್ರೂಟ್ ಕಾಯಿ ಬೆಳೆಯಲು ಪ್ರಾರಂಭ ಆಗುತ್ತದೆ, ಕಾಯಿಯ ಸುತ್ತ ಹಸಿರು ಬಣ್ಣದ ಉದ್ದನೆಯ ಆಕಾರದ ಪಕಳೆಗಳು ಇರುತ್ತವೆ, ಇದೇ ಕಾರಣಕ್ಕೆ ಈ ಹಣ್ಣಿಗೆ dragon fruit ಎಂದು ಕರೆಯಲಾಗಿದೆ.
4) ಹಣ್ಣುಗಳಲ್ಲಿ ಎಷ್ಟು ವಿಧ…?
ಈ ಹಣ್ಣುಗಳಲ್ಲಿ ಒಟ್ಟು ಮೂರು ವಿಧಗಳಿವೆ.
- ಹಳದಿ ಬಣ್ಣದ ಡ್ರಾಗನ್ ಫ್ರೂಟ್
- ಕೆಂಪು ಬಣ್ಣದ ಡ್ರಾಗನ್ ಫ್ರೂಟ್
- ಬಿಳಿ ಬಣ್ಣದ ಡ್ರಾಗನ್ ಫ್ರೂಟ್
ಮೇಲಿರುವ ಚಿತ್ರದಲ್ಲಿ ಕಾಣುವ ಈ ಹಣ್ಣು ಕೆಂಪು ಬಣ್ಣದ ಡ್ರಾಗನ್ ಫ್ರೂಟ್ ಆಗಿರುತ್ತದೆ, ಹೊರಮೈ ಮತ್ತು ಒಳಗಿರುವ ತಿರುಳು ( PULP) ಕೆಂಪು ಬಣ್ಣದಿಂದ ಕೂಡಿರುತ್ತದೆ,
ಬೆಳೆ ವಿಮೆ ಸ್ಟೇಟಸ್ ಚೆಕ್ ಮಾಡಲು, ಡೈರೆಕ್ಟ್ ಲಿಂಕ್ ಇಲ್ಲಿದೆ ನೋಡಿ.. Crop Insurance
ಹಳದಿ ಬಣ್ಣದ ಡ್ರಾಗನ್ ಫ್ರೂಟ್ ನಲ್ಲಿ ಹೊರಮೈ ಕೆಂಪು ಬಣ್ಣ ಹೊಂದಿದ್ದು ಒಳಗಿನ ತಿರುಳು (pulp) ಹಳದಿ ಬಣ್ಣ ಇರುತ್ತದೆ, ಮತ್ತು ಚಿಕ್ಕ ಚಿಕ್ಕ ಕಪ್ಪು ಬಣ್ಣದ ಬೀಜಗಳು ಇರುತ್ತವೆ.
ಬಿಳಿ ಬಣ್ಣದ ಡ್ರಾಗನ್ ಫ್ರೂಟ್ ಸಹ ಹೊರಮೈ ಕೆಂಪು ಬಣ್ಣ ಇದ್ದು,ಒಳಗಿನ ತಿರುಳು ಮಾತ್ರ ಬಿಳಿ ಬಣ್ಣ ಇರುತ್ತದೆ, ಇದರಲ್ಲೂ ಸಹ ಬೀಜಗಳು ಇರುತ್ತವೆ.
5) ಈ ಹಣ್ಣಿನಿಂದ ಸಿಗುವ ಲಾಭಗಳೇನು…?
ಡ್ರಾಗನ್ ಫ್ರೂಟ್ ನಲ್ಲಿ ಹೆಚ್ಚು ವಿಟಮಿನ್ ಸಿ ಮತ್ತು ಕಬ್ಬಿಣದ ಅಂಶ ಇದೆ, ಮತ್ತು ಹೆಚ್ಚು fibre ಅಂಶ ಇರುವುದರಿಂದ, ಸಕ್ಕರೆ ಖಾಯಿಲೆ ( Diabitic) ರೋಗಿಗಳಿಗೆ ತುಂಬಾ ಒಳ್ಳೆಯದು, ಯಾಕೆಂದರೆ ಇದರಲ್ಲಿ ಕಡಿಮೆ calories ಇರುವುದರಿಂದ ಸಕ್ಕರೆ ಖಾಯಿಲೆ ರೋಗಿಗಳು ಸೇವಿಸಬಹುದು, ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ,ಹೀಗೆ ಹಲವಾರು ಪ್ರಕಾರಗಳಲ್ಲಿ ಈ ಹಣ್ಣು ಆರೋಗ್ಯದ ದೃಷ್ಟಿಯಲ್ಲಿ ಒಳ್ಳೆಯದು.