
Solar Eclipse: ಹೌದು ವೀಕ್ಷಕರೇ, 2022 ರ ಅಕ್ಟೋಬರ್ ತಿಂಗಳಲ್ಲಿ, ದೀಪಾವಳಿ ಅಮಾವಾಸ್ಯೆ ದಿನದಂದು, ಖಂಡಗ್ರಾಸ ಸೂರ್ಯಗ್ರಹಣ ಆಗಲಿದೆ. ಸೂರ್ಯಗ್ರಹಣ ಆಗುವ ಸಮಯ, ಬಿಡುವ ಸಮಯ, ಮತ್ತು ಊಟ ಮಾಡುವ ಸಮಯ, ಏನು ಮಾಡಬೇಕು, ಏನನ್ನು ಮಾಡಬಾರದು, ಎಂಬ ಸಂಪೂರ್ಣ ಮಾಹಿತಿ ತಿಳಿಯೋಣ.
India post: SSLC ಪಾಸಾದವರಿಗೆ ಪೋಸ್ಟ್ ಆಫೀಸ್ ಕೆಲಸ.. ಇಂದೆ ಅರ್ಜಿ ಸಲ್ಲಿಸಿ.
1) ಸೂರ್ಯಗ್ರಹಣ ( solar Eclipse ) ಎಂದರೇನು..?
ಚಂದ್ರನು ಸೂರ್ಯ ಮತ್ತು ಭೂಮಿಯ ನಡುವೆ ಬಂದು, ಸೂರ್ಯನ ಬೆಳಕನ್ನು ಭೂಮಿಗೆ ತಲುಪದಂತೆ ಸ್ವಲ್ಪ ಸಮಯದವರೆಗೆ ನಿರ್ಬಂಧಿಸಿದಾಗ ಸೂರ್ಯಗ್ರಹಣ ಸಂಭವಿಸುತ್ತದೆ. ಇದರಿಂದಾಗಿ ಚಂದ್ರನ ನೆರಳು ಭೂಮಿಯ ಮೇಲೆ ಬೀಳುತ್ತದೆ. ಮತ್ತು ಸೂರ್ಯನ ಕೆಲವು ಭಾಗವು ಗೋಚರಿಸುವುದಿಲ್ಲ. ಸೂರ್ಯಗ್ರಹಣಗಳಲ್ಲಿ ಭಾಗಶಃ, ವಾರ್ಷಿಕ( annual)ಮತ್ತು ಸಂಪೂರ್ಣ ( Total) ಸೂರ್ಯಗ್ರಹಣ ಎನ್ನುವ ಮೂರು ವಿಧದ ಸೂರ್ಯಗ್ರಹಣಗಳಿವೆ.
2) ನಮ್ಮ ದೇಶದ ಯಾವ ಭಾಗಗಳಲ್ಲಿ ಕಾಣುತ್ತದೆ…?
ಅಕ್ಟೋಬರ್ ತಿಂಗಳಲ್ಲಿ ಸಂಭವಿಸಲಿರುವ ವರ್ಷದ ಕೊನೆಯ ಸೂರ್ಯಗ್ರಹಣವು ಯುರೋಪ್, ಈಶಾನ್ಯ ಆಫ್ರಿಕಾ ಮತ್ತು ಪಶ್ಚಿಮ ಏಷ್ಯಾದ ವಿವಿಧ ಭಾಗಗಳಲ್ಲಿ ಗೋಚರಿಸುತ್ತದೆ. ಕೆಲವು ಸ್ಥಳಗಳಲ್ಲಿ ಇದನ್ನು ಭಾರತದಲ್ಲಿಯೂ ಕಾಣಬಹುದು. ಭಾರತದಲ್ಲಿ, ವರ್ಷದ ಎರಡನೇ ಮತ್ತು ಕೊನೆಯ ಸೂರ್ಯಗ್ರಹಣವು ದೆಹಲಿ, ಬೆಂಗಳೂರು, ಕೋಲ್ಕತ್ತಾ, ಚೆನ್ನೈ, ಉಜ್ಜಯಿನಿ, ವಾರಣಾಸಿ ಮತ್ತು ಮಥುರಾದಲ್ಲಿ ಗೋಚರಿಸುತ್ತದೆ.
ಇದನ್ನೂ ಓದಿ:Crop insurance: ರೈತರ ಖಾತೆಗೆ ಬೆಳೆ ವಿಮೆ ಜಮಾ
3) ಸೂರ್ಯಗ್ರಹಣ ( solar Eclipse) ಆಗುವ ಸಮಯ, ಮತ್ತು ಬಿಡುವ ಸಮಯ.
1.ದೆಹಲಿಯಲ್ಲಿ ಸೂರ್ಯಗ್ರಹಣವು ಭಾರತೀಯ ಕಾಲಮಾನದಂತೆ ಸಂಜೆ 4:29 ಕ್ಕೆ ಪ್ರಾರಂಭವಾಗುತ್ತದೆ.
2.ಮುಂಬೈನಲ್ಲಿ ಸೂರ್ಯಗ್ರಹಣವು ಸಂಜೆ 4:49 ಕ್ಕೆ ಪ್ರಾರಂಭವಾಗುತ್ತದೆ. (ಗ್ರಹಣದ ಅವಧಿಯು (ಬೆಳಗ್ಗೆಯಿಂದ ಸೂರ್ಯಾಸ್ತದವರೆಗೆ) ದೆಹಲಿ ಮತ್ತು ಮುಂಬೈ ಎರಡಕ್ಕೂ ಕ್ರಮವಾಗಿ 1 ಗಂಟೆ 13 ನಿಮಿಷಗಳು ಮತ್ತು 1 ಗಂಟೆ 19 ನಿಮಿಷಗಳು).
3.ಕೋಲ್ಕತ್ತಾದಲ್ಲಿ ಸೂರ್ಯಗ್ರಹಣವು ಭಾರತೀಯ ಕಾಲಮಾನ ಸಂಜೆ 4:52 ಕ್ಕೆ ಪ್ರಾರಂಭವಾಗುತ್ತದೆ.
4. ಚೆನ್ನೈನಲ್ಲಿ ಸೂರ್ಯಗ್ರಹಣವು ಸಂಜೆ 5:14 ಕ್ಕೆ ಪ್ರಾರಂಭವಾಗುತ್ತದೆ. (ಸೂರ್ಯಗ್ರಹಣದ ಆರಂಭದಿಂದ ಸೂರ್ಯಾಸ್ತದವರೆಗೆ ಕೋಲ್ಕತ್ತಾ ಮತ್ತು ಚೆನ್ನೈನಲ್ಲಿ 31 ನಿಮಿಷ 12 ನಿಮಿಷ ಇರುತ್ತದೆ).
5.ಉಡುಪಿಯಲ್ಲಿ ಗ್ರಹಣ ಸ್ಪರ್ಶ ಸಂಜೆ 5:08 ರಿಂದ ಗ್ರಹಣ ಬಿಡುವ ಸಮಯ ಸಂಜೆ 6:29 ಕ್ಕೆ.
SBI BANK: SBI ಬ್ಯಾಂಕಿನಲ್ಲಿ ಬರ್ಜರಿ ನೇಮಕಾತಿ.. 1422 posts
4) ಈ ಸೂರ್ಯಗ್ರಹಣದಿಂದ ಯಾವ ರಾಶಿಗಳಿಗೆ ಗಂಡಾಂತರ ಇದೆ.
ಈ ಖಂಡಗ್ರಾಸ ಸೂರ್ಯಗ್ರಹಣ ಆಗುವ ಪರಿಣಾಮದಿಂದ, ನಮ್ಮ ದೇಶದ ಈ ರಾಶಿಯ ವ್ಯಕ್ತಿಗಳಿಗೆ ತುಂಬಾ ತೊಂದರೆ ಆಗುವ ಸಾದ್ಯತೆ ಇರುತ್ತದೆ.
1. ಸ್ವಾತಿ ನಕ್ಷತ್ರ ತುಲಾ ರಾಶಿಯಲ್ಲಿ ಕೇತು ಗ್ರಹಣ ವು ಸಂಭವಿಸುವುದು.
2. ತುಲಾ, ವೃಶ್ಚಿಕ, ಮೀನ, ವೃಷಭ, ಕರ್ಕಾಟಕ ರಾಶಿಯವರಿಗೆ ಅರಿಷ್ಠ ಪ್ರಭಾವವಿರುತ್ತದೆ.
3. ಕುಂಭ, ಮೇಷ, ಮಿಥುನ, ಕನ್ಯಾ ರಾಶಿಯವರಿಗೆ ಮಧ್ಯಮ ಪ್ರಭಾವವಿರುತ್ತದೆ.
5) ಊಟ ಉಪಚಾರ ಮಾಡುವ ವಿಧಾನ.
- ಈ ದಿನ ಉಪಹಾರ ಮಾತ್ರ ತೆಗೆದುಕೊಳ್ಳಬೇಕು.
- ಈ ದಿನ ಭೋಜನ ನಿಷಿದ್ಧವಾಗಿರುತ್ತದೆ.
- ಉಪಹಾರ ಮಧ್ಯಾಹ್ನ 2 ಘಂಟೆ ಒಳಗೆ ತದ ನಂತರ ಆಹಾರ ಸೇವನೆ ಮಾಡಬಾರದು.
- ಗ್ರಹಣ ಬಿಟ್ಟ ನಂತರ ರಾತ್ರಿ 7 ರ ನಂತರ ಮಕ್ಕಳು, ವೃದ್ಧರು ಮತ್ತು ಅನಾರೋಗ್ಯ ವ್ಯಕ್ತಿಗಳು, ಆಹಾರ ಸೇವನೆ ಮಾಡಬಹುದು.
6) ಗ್ರಹಣ ಕಾಲದಲ್ಲಿ ಏನೇನು ಮಾಡಬೇಕು..?
ಗ್ರಹಣ ಸಮಯದಲ್ಲಿ ಗ್ರಹಣ ಶಾಂತಿ ಹಾಗೂ ಜಪ – ತಪ, ಅನುಷ್ಠಾನ, ವಿಷ್ಣು ಸಹಸ್ರ ನಾಮ ಪಠಣ ಮಾಡುವುದು ಉತ್ತಮ.
– ಅರಿಷ್ಠ ಪ್ರಭಾವ ಇರುವ ರಾಶಿಯವರು ಗ್ರಹಣ ಆರಂಭ ಕಾಲದಲ್ಲಿ ಸ್ನಾನವನ್ನು ಮಾಡಿ.
– ಯಥಾಯೋಗ್ಯತಾನುಸಾರ ಹುರುಳಿ (ಕುಳಿತ್ಥ) ಮತ್ತು ಗೋಧಿಯನ್ನು ಕೆಂಪು ವಸ್ತ್ರದಲ್ಲಿ ಇಟ್ಟು ವಿಷ್ಣು ಸಹಸ್ರನಾಮ ಅಥವಾ ಇತರೆ ಸ್ತೋತ್ರಗಳನ್ನು ಪಠಿಸಿ ಗ್ರಹಣ ನಂತರ ಪುನಹ ಸ್ನಾನ ಮಾಡಿ.
– ದಾನ ಮಾಡಿ. ( ಅರಿಷ್ಟ ಪ್ರಭಾವದಿಂದ ಮುಕ್ತಿ ಪಡೆಯಲು ನವಗ್ರಹ ಸಹಿತ ಗ್ರಹಣ ಶಾಂತಿ ಮಾಡಿಸಬಹುದು).
Crop loan: ಆಧಾರ್ ನಂಬರ್ ಹಾಕಿ ಬೆಳೆ ಸಾಲ ಮನ್ನಾ ಚೆಕ್ ಮಾಡಿ.
ಲೇಬರ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬ ಕಾರ್ಮಿಕನಾಗಿ ಸರ್ಕಾರದಿಂದ ಸುಮಾರು ಅನುಕೂಲ ಗಳು ಸಿಗಲಿದ್ದು, ಹೆರಿಗೆ ಸೌಲಭ್ಯ, ಮಕ್ಕಳ ಸ್ಕಾಲರ್ಶಿಪ್,( scholorship) , ಉಚಿತ ಬಸ್ ಪಾಸ್, ಮದುವೆಗೆ ಸಹಾಯಧನ ( 1 ಲಕ್ಷದ ವರೆಗೆ) , ಹೀಗೆ ಹಲವಾರು ಒಂದಿಲ್ಲೊಂದು ರೀತಿಯಲ್ಲಿ ಸರ್ಕಾರ ಕಟ್ಟಡ ಕಾಮಗಾರಿ ಕಾರ್ಮಿಕರು, ಮತ್ತು ಬೇರೆ ಬೇರೆ ಕ್ಷೇತ್ರದ ಕಾರ್ಮಿಕರಿಗೆ ಸೌಲಭ್ಯ ಒದಗಿಸುತ್ತಿದೆ, ಹಾಗಾಗಿ ನೀವು ಲೇಬರ್ ಕಾರ್ಡ್ ಮಾಡಿಸಿಕೊಳ್ಳಿ, labour card ಮಾಡಿಕೊಳ್ಳಲು, ಮಾಹಿತಿ ಪಡೆಯಲು ಕೆಳಗೆ ಕೊಟ್ಟಿರುವ ಲಿಂಕ್ ಒತ್ತಿ.
Labour card: ಈಗ ಮನೆಯಲ್ಲೇ ಕುಳಿತು ಲೇಬರ್ ಕಾರ್ಡ್ ಮಾಡಿಕೊಳ್ಳಿ, ಮದುವೆ,ಹೆರಿಗೆ, ಆಕ್ಸಿಡೆಂಟ್ ಸಹಾಯಧನ ಪಡೆಯಿರಿ
ನಮ್ಮ ಕೃಷಿ ಜಗತ್ತು ವೆಬ್ಸೈಟ್ ಒಳಗೆ SUBSCRIBE NOTIFICATIONS ಆನ್ ಮಾಡಿಕೊಳ್ಳಿ, ಮತ್ತು ಮುಂದೆ ಹಾಕುವ ಎಲ್ಲ ರೈತರ ಸಲಹೆಗಳು ನಿಮಗೆ ನೇರವಾಗಿ ಸಂದೇಶದ ಮೂಲಕ ಮಾಹಿತಿ ಪಡೆಯಬಹುದು.