ಹೌದು ವೀಕ್ಷಕರೇ, ಕಳೆದ ಎರಡು ವರ್ಷಗಳಿಂದ 2021ರ ನಂತರ ಮಾಡಿಸಿದ ಎಲ್ಲ ವೋಟರ್ ಐಡಿ ( ಚುನಾವಣಾ ಚೀಟಿ) ಗಳು, ಡಿಜಿಟಲ್ ರೂಪದಲ್ಲಿ ಬರುತ್ತಿವೆ. ಭಾರತೀಯ ಚುನಾವಣಾ ಆಯೋಗವು, ದೇಶದ ಪ್ರತಿಯೊಬ್ಬ ಪ್ರಜೆಗೂ ಡಿಜಿಟಲ್ ವೋಟರ್ ಐಡಿ ಕಲ್ಪಿಸುವ ಒಂದು ಮಹತ್ವದ ನಿರ್ಧಾರ ಈಗಾಗಲೇ, ಮಾಡಿದೆ.
ಆದರೆ ವಿಷಯ ಏನೆಂದರೆ, ಇಲ್ಲಿಯವರೆಗೆ 2021ರ ನಂತರ ಮಾಡಿಸಿಕೊಂಡ ಹೊಸ ಚುನಾವಣಾ ಚೀಟಿಗಳು ಮಾತ್ರ ( voter ID) ಡಿಜಿಟಲ್ ರೂಪದಲ್ಲಿ ಬರುತ್ತಿದ್ದವು. ಆದರೆ ಈಗ ಹಳೆಯ ಅಂದರೆ 2021ರ ಮುಂಚೆ ಇರುವಂತಹ ಎಲ್ಲಾ ಚುನಾವಣಾ ಚೀಟಿ ಗಳು ಸಹ ಡಿಜಿಟಲ್ ಮಾಡಿಕೊಳ್ಳಬಹುದು. ಅದನ್ನು ಸ್ವತಃ ನಾವೇ ನಮ್ಮ ಮೊಬೈಲ್ ಮೂಲಕ, ಚುನಾವಣಾ ಆಯೋಗದ ಅಧಿಕೃತ ವೆಬ್ಸೈಟ್ ( website) ಗೆ ಲಾಗಿನ್ ಆಗುವುದರ ಮೂಲಕ, ಡಿಜಿಟಲ್ ವೋಟರ್ ಐಡಿ ಪಡೆದುಕೊಳ್ಳಬಹುದು.
ಚುನಾವಣಾ ಆಯೋಗವು ಒಂದು ಭಾರತೀಯ ಸಂವಿಧಾನದ 73 ಮತ್ತು 74 ತಿದ್ದುಪಡಿ ಅನ್ವಯ, ನಗರ ಮತ್ತು ಗ್ರಾಮೀಣ ಭಾಗಗಳಲ್ಲಿ ಚುನಾವಣೆ ನಡೆಸಲು ದಿನಾಂಕ : 26 ನೆ ಮೇ 1993ದಲ್ಲಿ ಅಸ್ತಿತ್ವಕ್ಕೆ ಬಂದಿತು.
ರಾಜ್ಯ ಚುನಾವಣೆ ಆಯೋಗವು ಒಂದು ಸ್ವತಂತ್ರ ಸಂಸ್ಥೆಯಾಗಿದೆ, ಇದು ನಮ್ಮ ರಾಜ್ಯ ಎಲ್ಲ ಗ್ರಾಮ ಪಂಚಾಯತ್, ತಾಲ್ಲೂಕ್ ಪಂಚಾಯತ್, ಜಿಲ್ಲಾ ಪಂಚಾಯತ್ ನ ಚುನಾವಣೆ( Election) ನಡೆಸುತ್ತದೆ. ಮತ್ತು ಸುಮಾರು ನಾಲ್ಕು ಹಂತದ ನಗರ ಸ್ಥಳೀಯ ಸಂಸ್ಥೆಗಳಿಗೆ, ಅಂದರೆ ಪುರಸಭೆ, ಮಹಾನಗರ ಪಾಲಿಕೆ, ನಗರ ಸಭೆ, ಮತ್ತು ಪಟ್ಟಣ ಪಂಚಾಯತ್ ನ ಚುನಾವಣೆಗಳನ್ನು ನಡೆಸಿಕೊಡುತ್ತಾರೆ.
ಸುಮಾರು ವರ್ಷಗಳ ಹಿಂದೆ, ಚುನಾವಣಾ ಡಬ್ಬಿಗಳು ಇರುತ್ತಿದ್ದವು, ಆದರೆ ಅದು ಭ್ರಷ್ಟಾಚಾರಕ್ಕೆ ದಾರಿ ಮಾಡಿಕೊಡುವ ಡಬ್ಬಿಗಳು ಆಗಿದ್ದರಿಂದ ಅದನ್ನು ತೆಗೆದುಕೊಳ್ಳಿ ಈಗ ಕಳೆದ ಸುಮಾರು ವರ್ಷಗಳಿಂದ, ಬ್ಯಾಲೆಟ್ ಮಿಷನ್ಗಳನ್ನು ಅಳವಡಿಸಿದ್ದಾರೆ ಈ ಬ್ಯಾಲೆಟ್ ಮಿಷಿನ್ ಅತ್ಯಂತ ಪಾರದರ್ಶಕ ಮತ್ತು ಎಲೆಕ್ಟ್ರಾನ್ ಡಿಜಿಟಲ್ ಆಗಿರುವುದರಿಂದ ಯಾವುದೇ ಕಳ್ಳ ವ್ಯವಹಾರ ಅಥವಾ ತಪ್ಪು ಮತ ಎಣಿಕೆ ಕೌಂಟಿಂಗ್ ನಡೆಯುವುದಿಲ್ಲ.
Labour card: ಈಗ ಮನೆಯಲ್ಲೇ ಕುಳಿತು ಲೇಬರ್ ಕಾರ್ಡ್ ಮಾಡಿಕೊಳ್ಳಿ, ಮದುವೆ,ಹೆರಿಗೆ, ಆಕ್ಸಿಡೆಂಟ್ ಸಹಾಯಧನ ಪಡೆಯಿರಿ
ಡಿಜಿಟಲ್ ವೋಟರ್ ಐಡಿ ಮಾಡಿಕೊಳ್ಳುವುದು ಹೇಗೆ..?
ಚುನಾವಣಾ ಆಯೋಗದ ಅಧಿಕೃತ ವೆಬ್ಸೈಟ್ ಆದ https://voterportal.eci.gov.in/ ಗೆ ಭೇಟಿ ನೀಡಿ, ನಿಮಗೆ ಒಂದು Election commission portal ಪೇಜ್ ಓಪನ್ ಆಗುತ್ತದೆ, ನಂತರ.

ಈ ರೀತಿಯ ಪುಟ ತೆರೆದುಕೊಳ್ಳುತ್ತದೆ, ನಂತರ ಇದರಲ್ಲಿ ಈಗಾಗಲೇ ನಿಮ್ಮದು , Election commission portal ನ ಯೂಸರ್ ಐಡಿ ಮತ್ತು ಪಾಸ್ವರ್ಡ್ ಇದ್ದಲ್ಲಿ, ಕೊಟ್ಟಿರುವ ಖಾನೇಯಲ್ಲಿ ತುಂಬಿ ಲಾಗಿನ್ ಮಾಡಿಕೊಳ್ಳಿ. ಇಲ್ಲವಾದಲ್ಲಿ , ಕೆಳಗೆ ಕೊಟ್ಟಿರುವ ಚಿತ್ರದಂತೆ ಅನುಸರಿಸಿ.
ಇದನ್ನೂ ಓದಿ: ನಿಮ್ಮ ಖಾತೆಗೆ ಬೆಳೆ ಪರಿಹಾರ ಜಮಾ ಆಗಿದ್ಯಾ? ಈಗಲೇ ಚೆಕ್ ಮಾಡಿ..
ಇದನ್ನೂ ಓದಿ: ಡ್ರಾಗನ್ ಫ್ರೂಟ್ ಬಗ್ಗೆ ನಿಮಗೆಷ್ಟು ಗೊತ್ತು…? ಈಗಲೇ ತಿಳಿಯಿರಿ..

ನಂತರ ನಿಮ್ಮ ಈಮೇಲ್ ಐಡಿ ( Email Id ) ಅಥವಾ ಮೊಬೈಲ್ ನಂಬರ್ ಹಾಕಿ, OTP ಯನ್ನು ಪಡೆದುಕೊಳ್ಳಿ. ನಿಮ್ಮ Email Id ಮತ್ತು ಮೊಬೈಲ್ ಗೆ ಬಂದ One time password ನ್ನು ಹಾಕಿ,

ಈ ರೀತಿಯ ಪುಟ ತೆರೆದುಕೊಳ್ಳುತ್ತದೆ, ನಂತರ ನಿಮಗೆ ಬೇಕಾದ ಒಂದು ಹೊಸ ಪಾಸ್ವರ್ಡ್ ಸೆಲೆಕ್ಟ್ ಮಾಡಿಕೊಂಡು, ತುಂಬಿ , captcha letter ಭರ್ತಿ ಮಾಡಿ, ಎಲೆಕ್ಷನ್ ಕಮಿಷನ್ ನ ಪೋರ್ಟಲ್ login id ಮತ್ತು ಪಾಸ್ವರ್ಡ್ ಸಂಪಾದಿಸಿ.

ಈ ರೀತಿ main page ಓಪನ್ ಆದಮೇಲೆ, ನೀವು, correction in Voter ID ಅಂತಾ, ಅದರ ಮೇಲೆ ಕ್ಲಿಕ್ ಮಾಡಿ.
ನಂತರ ನಿಮ್ಮ ವೋಟರ್ ಐಡಿ, ನಂಬರ್ enter madi, nimma ವೋಟರ್ ಐಡಿ ಯ ಎಲ್ಲ ಮಾಹಿತಿ ತೋರಿಸುತ್ತದೆ. ಲೆಟ್ಸ್ ಸ್ಟಾರ್ಟ್ ( lets start) ಬಟನ್ ಮೇಲೆ ಕ್ಲಿಕ್ ಮಾಡಿ, ಕೊನೆಯ ಪುಟದಲ್ಲಿ, ವೋಟರ್ ಐಡಿ new farmet option ಇರುತ್ತದೆ , ಅದರ ಮೇಲೆ ಕ್ಲಿಕ್ ಮಾಡಿ…

ಇದಾದ ನಂತರ, ನಿಮ್ಮ ಊರಿನ ಚುನಾವಣಾ ಅಧಿಕಾರಿಯೊಬ್ಬರನ್ನು ನೇಮಿಸಿರುತ್ತಾರೆ. ಉದಾಹರಣೆಗೆ ನಿಮ್ಮೂರಿನ ಪ್ರಾಥಮಿಕ ಶಾಲೆಯ ಹೆಡ್ ಮಾಸ್ಟರ್ ಆಗಿರುತ್ತಾರೆ. ಇವರ ಹತ್ತಿರ ನಿಮ್ಮ ವೋಟರ್ ಐಡಿ ದಾಖಲೆಗಳನ್ನು ನೀಡಿದರೆ, ಅವರು ತಾಲೂಕ ಕಚೇರಿಯಲ್ಲಿರುವ ಚುನಾವಣಾ ಇಲಾಖೆಗೆ ದಾಖಲು ಪಡಿಸುತ್ತಾರೆ. ನಂತರ ನಿಮ್ಮ ಮನೆಗೆ ಪೋಸ್ಟ್ ಮುಖಾಂತರ ವೋಟರ್ ಐಡಿ ಡಿಜಿಟಲ್ ರೂಪದಲ್ಲಿ ಬರುತ್ತದೆ.
ರೈತರ ಹಬ್ಬದ ಹೋರಿಗಳಿಗೆ, ಚರ್ಮ ಗಂಟು ರೋಗ : Lumpy skin disease
ಈ ಲೇಖನ ನಿಮಗೆ ಉಪಯುಕ್ತ ಆದಲ್ಲಿ, ನಿಮ್ಮ ಸ್ನೇಹಿತರಿಗೆ, ಕುಟುಂಬದವರಿಗೆ share madi, ನಮ್ಮ ಬೇರೆ ಲೇಖನಗಳನ್ನು ಓದಿರಿ.
ನಮ್ಮ ಕೃಷಿ ಜಗತ್ತು ವಾಟ್ಸಾಪ್ ಗ್ರೂಪ್ ಸೇರಲು ಈ ಲಿಂಕ್ ಒತ್ತಿ
https://chat.whatsapp.com/K0Y6QZq8WJgEqKsghwgvT3