
CROP INSURANCE: 2022 ಮತ್ತು 2023 ಸಾಲಿನ ಈ ವರ್ಷದ ಭಾರೀ ಪ್ರಮಾಣದ ಮಳೆಯಿಂದಾಗಿ, ಹಿಂಗಾರು ಬೆಳೆಯ ಬೆಳೆ ವಿಮಾ ತುಂಬಲು ಸುತ್ತೋಲೆಯನ್ನು ಕರ್ನಾಟಕ ಸರ್ಕಾರ ಹೊರಡಿಸಿದೆ. ಅದರಂತೆ ರಾಜ್ಯದ ಎಲ್ಲಾ ರೈತರು ತಮ್ಮ ಜಿಲ್ಲೆಗಳ ಅನುಸಾರ, ತಮ್ಮ ತಮ್ಮ ತಾಲೂಕ ಕಚೇರಿಗಳಲ್ಲಿ ಬೆಳೆ ವಿಮಾ ( crop insurance) ಅರ್ಜಿಗಳನ್ನು ಪಡೆದು, ಸೂಕ್ತ ದಾಖಲೆಗಳೊಂದಿಗೆ ಭರ್ತಿ ಮಾಡಿ, ನೆಮ್ಮದಿ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಿಬೇಕು.
CROP INSURANCE: ಬೆಳೆ ವಿಮಾ ಹೇಗೆ ಕೊಡಲಾಗುತ್ತದೆ.?
ನಮ್ಮ ರಾಜ್ಯದಲ್ಲಿ ನೈಸರ್ಗಿಕ ವಿಕೋಪಗಳು, ಅವಘಡಗಳು ಜಿಲ್ಲೆಯಿಂದ ಜಿಲ್ಲೆಗೆ ಬೇರೆ ಬೇರೆ ರೀತಿಯಲ್ಲಿ ಸಂಭವಿಸುತ್ತವೆ. ಹಾಗಾಗಿ ಆಯಾ ಜಿಲ್ಲೆಗಳ ಪೈಕಿ, ತಾಲೂಕ ಅಧಿಕಾರಿಗಳು, ತಹಶೀಲ್ದಾರ್ ಇವರು ಬೆಳೆಗಳ ಹಾನಿಯ ಆದಾರದ ಮೇಲೆ report ಮಾಡಿಕೊಂಡು, ಸರ್ಕಾರಕ್ಕೆ ಮತ್ತು ವಿಮಾ ನೀಡುವ ಕಂಪೆನಿಗಳಿಗೆ ಮಾಹಿತಿ ( information) ನೀಡುತ್ತಾರೆ.
Agriculture: ಬೆಳೆ ಹಾನಿ ಮತ್ತು ಮನೆ ಹಾಳಾಗಿರುವುದಕ್ಕೆ ಪರಿಹಾರಕ್ಕೆ ಅರ್ಜಿ ಆಹ್ವಾನ..
ಬೆಳೆ ವಿಮೆ ಅಂದರೆ ಏನು? ಅದನ್ನು ಏಕೆ ಜಾರಿಗೆ ತರಲಾಗಿದೆ?
ಬೆಳೆ ವಿಮೆ ಒಂದು ಅಪಾಯ ಮತ್ತು ರೈತರ ಬೆಳೆಯ ನಷ್ಟದ ಪರಿಹಾರ ಒದಗಿಸುವ ಒಂದು ಕಾರ್ಯಕ್ರಮ ಆಗಿದೆ. ಪ್ರಸ್ತುತವಾಗಿ ಬೆಳೆ ವಿಮೆಯಲ್ಲಿ ಸುಮಾರು 128 ಪೈರುಗಳು( crops) ಒಳಗೊಂಡಿವೆ. ಆಯಾ ಪೈರಿನ( crops) ಕರ್ಚು ವೆಚ್ಚದ ಆಧಾರದ ಮೇಲೆ ಬೆಳೆ ವಿಮಾ ಅರ್ಜಿ ತುಂಬಿಸಿಕೊಂಡು, ವಿಮಾ ( insurance) ನೀಡಲಾಗುತ್ತದೆ.
ಬೆಳೆ ವಿಮೆ ಯಲ್ಲಿ ಎಷ್ಟು ವಿಧಗಳಿವೆ..?
1) ಬೆಳೆ ಆಲಿಕಲ್ಲು ವಿಮೆ: ಈ ವಿಮೆಯನ್ನು ಹೆಚ್ಚಾಗಿ ಖಾಸಗಿ ಕಂಪನಿಗಳು ನೀಡುತ್ತವೆ. ಆಲಿಕಲ್ಲು ಸೀಮಿತ ಜಾಗದಲ್ಲಿ ಕಂಡುಬರುವುದರಿಂದ, ಇದನ್ನು ಎಲ್ಲ ಪ್ರದೇಶಕ್ಕೆ ಒಂದೇ ಸಮನೆ ನೀಡಲು ಸಾದ್ಯವಿಲ್ಲ, ಹಾಗಾಗಿ ಈ ವಿಮೆಯನ್ನು ಖಾಸಗಿ ವಿಮದರರು ನೀಡುತ್ತಾರೆ.
2) ಪೈಲಟ್ ಬೆಳೆ ವಿಮೆ ಯೋಜನೆ: ಈ ಬೆಳೆ ವಿಮೆಯಲ್ಲಿ ಕೇವಲ ಸಾಂಪ್ರದಾಯಿಕ ಹಳ್ಳಿಯ ಬೆಳೆಗಳಾದ ಹತ್ತಿ, ಮೆಕ್ಕೆಜೋಳ,ಏಕದಳ ಧಾನ್ಯಗಳು, ಕಾಳುಗಳು ಇವುಗಳಿಗೆ ಮಾತ್ರ ಬೆಳೆ ವಿಮೆಯನ್ನು ನೀಡಲಾಗುತ್ತದೆ.
ಇದನ್ನೂ ಓದಿ:SBI BANK: SBI ಬ್ಯಾಂಕಿನಲ್ಲಿ ಬರ್ಜರಿ ನೇಮಕಾತಿ.. 1422 posts
3) ಸಮಗ್ರ ಬೆಳೆ ವಿಮಾ ಯೋಜನೆ: ನಮ್ಮ ಭಾರತ ಸರ್ಕಾರವು, ಸಮಗ್ರ ಬೆಳೆ ವಿಮೆ ಯೋಜನೆಯನ್ನು 1985 ಏಪ್ರಿಲ್ 1 ರಂದು ಜಾರಿಗೆ ಮಾಡಲಾಯಿತು. ಈ ಬೆಳೆ ವಿಮೆಯಲ್ಲಿ ರೈತರಿಗೆ ಏಕರೂಪದ ಪ್ರದೇಶದ ವಿಮೆ ಒದಗಿಸಲಾಗುತ್ತದೆ. ಮತ್ತು ಬೆಳೆ ಕಾಳುಗಳಿಗೆ ಸುಮಾರು 10000 ತನಕ , ಮತ್ತು ಎಣ್ಣೆ ಕಾಳುಗಳಿಗೆ 5% ವಿಮಾ ನೀಡಲಾಗುತ್ತದೆ.
ಬೆಳೆ ವಿಮೆ ಸ್ಟೇಟಸ್ ಚೆಕ್ ಮಾಡಲು, ಡೈರೆಕ್ಟ್ ಲಿಂಕ್ ಇಲ್ಲಿದೆ ನೋಡಿ.. Crop Insurance
ಬೆಳೆ ವಿಮೆಗೆ ಈ ಕೆಳಗಿನ ಕೆಲವು ಮುಖ್ಯ ಪೈರುಗಳು( crops) ಒಳಗೊಂಡಿವೆ
ಹತ್ತಿ ( cotton)
ಮೆಕ್ಕೆಜೋಳ (corn)
ಜೋಳ ( jawer)
ಮೆಣಸಿನಕಾಯಿ ( chilli)
ಸೂರ್ಯಕಾಂತಿ ( sunflower)
ಭತ್ತ ( rice)
ಕಡಲೆಕಾಯಿ
ಬಾಳೆಹಣ್ಣು ( banana)
ಅರಿಶಿಣ ( Turmuric)
ಹೆಸರುಕಾಳು
ಕಪ್ಪು ಕಡಲೆ
ಈ ರೀತಿ ಇನ್ನೂ ಹಲವಾರು ಬೆಳೆಗಳು ಒಳಗೊಂಡಿವೆ.
ಬೆಳೆ ವಿಮೆ ತುಂಬಲು ಹೀಗೆ ಮಾಡಿ.
ಸರ್ಕಾರದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ.
https://www.samrakshane.karnataka.gov.in/

ಈ ಮೇಲೆ ಕೊಟ್ಟಿರುವ ಚಿತ್ರದಂತೆ ವೆಬ್ಸೈಟ್ ಗೆ ಹೋಗಿ..

ಮೇಲೆ ಕೊಟ್ಟಿರುವ ಬೆಳೆ ವಿಮಾ ಚೆಕ್ ಮಾಡುವ ಲಿಂಕ್ ಓಪನ್ ಆಗದೆ ಇದ್ದಲ್ಲಿ, ನೀವು ನೇರವಾಗಿ google ಒಳಗೆ, ಬೆಳೆ ವಿಮಾ 2022 ಎಂದು ಟೈಪ್ ಮಾಡಿ, ಅಲ್ಲಿಯೂ ಸಹ ನೋಡಬಹುದು..
AUTHER AND PUBLISHER:
ಮಾಲತೇಶ್ ಕುಲಕರ್ಣಿ
BSC, ( ಪ್ರಾಣಿಶಾಸ್ತ್ರ ಮತ್ತು ಜೀವಶಾಸ್ತ್ರ)