
Tractor yojana: ಹೌದು ವೀಕ್ಷಕರೇ, ಕಳೆದ ಎರಡು ಮೂರು ತಿಂಗಳಿನಿಂದ ಸಾಮಾಜಿಕ ಜಾಲ ತಾಣಗಳಲ್ಲಿ ಹರಿ ಬಿಡುತ್ತಿರುವ ಒಂದು ಸುಳ್ಳು ಸುದ್ದಿಯೆಂದರೆ , ಅದು ಕರ್ನಾಟಕದಲ್ಲಿ ಜಾರಿ ಮಾಡಲಾಗಿದೆ ಎನ್ನುವ ರೈತರಿಗೆ ನೀಡಲಾಗುವ ಟ್ರಾಕ್ಟರ್ ಯೋಜನೆ.
ಕಳೆದ ಎರಡು ಮೂರು ತಿಂಗಳಿನಿಂದ, ಈ ತರ ಒಂದು ಸುದ್ದಿ ಅನೇಕ ಕೃಷಿ ವೆಬ್ಸೈಟ್ ಗಳಲ್ಲಿ , ಸುಳ್ಳು ಸುದ್ದಿಯನ್ನು ಹರಿ ಬಿಡುತ್ತಿದ್ದು , ರಾಜ್ಯದ ರೈತರಿಗೆ ಸಂಶಯ ಮತ್ತು ಯೋಜನೆ ರಹಿತ ಸುದ್ದಿಯೊಂದನ್ನು ಬಿಟ್ಟಿರುವ ಬಗ್ಗೆ ಅನೇಕ ರೀತಿಯ ಸಮಸ್ಯೆಗಳು ಆಗುತ್ತಿವೆ.
ಏನಿದು ರೈತರಿಗೆ ಟ್ರಾಕ್ಟರ್ ಯೋಜನೆ..?
ನಿಮಗೆಲ್ಲ ಗೊತ್ತಿರುವಂತೆ ಕೇಂದ್ರ ಸರ್ಕಾರವು 2018 ರಲ್ಲಿ ಜಾರಿಗೆ ತಂದ ಮಹತ್ವಾಕಾಂಕ್ಷಿ ಯೋಜನೆಯಾದ ಪಿಎಂ ಕಿಸಾನ್ ಸಮ್ಮಾನ ಯೋಜನೆಯು, ದೇಶದ ಎಲ್ಲ ಅರ್ಹ ಫಲಾನುಭವಿ ರೈತರಿಗೆ ತಲಾ 2000 ರೂಗಳನ್ನು ನೇರವಾಗಿ ಹಣವನ್ನು ಜಮಾ ಮಾಡಲಾಗುತ್ತಿದೆ.
CROP INSURANCE: ಹಿಂಗಾರು ಬೆಳೆ ವಿಮೆ ತುಂಬಲು ಮಾಹಿತಿ.
ಅದರಂತೆ ನಮ್ಮ ರಾಜ್ಯ ಸರ್ಕಾರವು ಸಹ, ಕೇಂದ್ರ ದ ಪಿಎಂ ಕಿಸಾನ್ ಸಮ್ಮಾನ ಯೋಜನೆಯ ಪರವಾಗಿ, ಮತ್ತು ಜೊತೆಗೆ, ಕೆ- ಕಿಸಾನ್ ಯೋಜನೆ ಅಡಿಯಲ್ಲಿ ಪಿಎಂ ಕಿಸಾನ್ ಸಮ್ಮಾನ ಯೋಜನೆಯ ಫಲಾನಭವಿಗಳಿಗೆ ವರ್ಷಕ್ಕೆ 4000 ರೂಗಳನ್ನು ನೀಡುತ್ತಿದೆ.
ಟ್ರಾಕ್ಟರ್ ಯೋಜನೆ ಯಾವ ರಾಜ್ಯದಲ್ಲಿ ಜಾರಿಗೆ ಇದೆ…?
ದೇಶದ ಆಯಾ ರಾಜ್ಯಗಳಲ್ಲಿ, ತಮ್ಮ ರಾಜ್ಯದ ಎಲ್ಲಾ ರೈತರಿಗೆ ಅನುಕೂಲ ಆಗುವಂತೆ, ಒಂದೊಂದು ಬೇರೆ ಬೇರೆ ತರನಾದ, ಯೋಜನೆಗಳನ್ನು ರೂಪಿಸಿದ್ದು, ಅದರಲ್ಲಿ ಓಡಿಸಾ ( orissa) ರಾಜ್ಯವು ತನ್ನ ರೈತರಿಗೆ, ಪಿಎಂ ಕಿಸಾನ್ ಸಮ್ಮಾನ ಯೋಜನೆಯ ಜೊತೆಗೆ, ಪ್ರತಿ ನೋಂದಣಿ ಮಾಡಿಕೊಂಡ ರೈತನಿಗೆ ಟ್ರಾಕ್ಟರ್ ತೆಗೆದುಕೊಳ್ಳಲು , ಸಹಾಯಧನ ನೀಡಲಾಗುತ್ತಿದೆ.
ಈ ರೀತಿ ಆಯಾ ರಾಜ್ಯಗಳಲ್ಲಿ ತಮ್ಮ ರಾಜ್ಯದ ಎಲ್ಲಾ ರೈತರಿಗೆ, ಯೋಜನೆಗಳನ್ನು ಮಾಡಿದ್ದು, ಇದರಿಂದ ತಮ್ಮ ರಾಜ್ಯದ ಎಲ್ಲಾ ರೈತರಿಗೆ ಯೋಜನೆಗಳ ಲಾಭ ಪಡೆಯಲು ಅನುಕೂಲ ಆಗುತ್ತಿದೆ. ಆದರೆ ನಮ್ಮ ಕರ್ನಾಟಕ ರಾಜ್ಯದಲ್ಲಿ ಈ ತರಹ ಯಾವುದೇ, ಟ್ರಾಕ್ಟರ್ ಯೋಜನೆ ಜಾರಿಗೆ ತಂದಿಲ್ಲ.
ಇದನ್ನೂ ಓದಿ:Agriculture: ಸುಲಭವಾಗಿ ಗೊಬ್ಬರ ಹಾಕುವ ಯಂತ್ರ.
ನಮ್ಮ ಕೃಷಿ ಜಗತ್ತು ವೆಬ್ಸೈಟ್ ವಾಟ್ಸಾಪ್ ಗ್ರೂಪ್ ಸೇರಲು ಇದರ ಮೇಲೆ ಕ್ಲಿಕ್ ಮಾಡಿ…
ರಾಜ್ಯದ ಎಲ್ಲಾ ರೈತರಿಗೆ ಮನವಿ, ಈ ತರ ಯಾವುದೇ ಸುಳ್ಳು ಸುದ್ದಿಯನ್ನು ನಂಬದೆ, ನಿಮ್ಮ ಹತ್ತಿರದ ಕೃಷಿ ಇಲಾಖೆ ಗೆ ಭೇಟಿ ನೀಡಿ, ಉಪಯುಕ್ತ ಮಾಹಿತಿಯನ್ನು ಪಡೆದುಕೊಳ್ಳಿ. ಮತ್ತು ಯಾವುದೇ ರೀತಿಯ ಅನಗತ್ಯ ಕಾರಣಕ್ಕೆ, ತಮ್ಮ ಅಮೂಲ್ಯವಾದ ಸಮಯವನ್ನು ವ್ಯರ್ಥ ಮಾಡಿಕೊಳ್ಳಬೇಡಿ.