March 22, 2023

Kisan: ಕಿಸಾನ್ ಪಿಂಚಣಿ ಯೋಜನೆ ಸೇರಿ, ಪ್ರತಿ ತಿಂಗಳು 3000 ಪಡೆಯಿರಿ.

Share News

ಹೌದು ವೀಕ್ಷಕರೇ, ಕೇಂದ್ರ ಸರ್ಕಾರ ರಾಷ್ಟ್ರದ ರೈತರಿಗೆ ಒಂದಿಲ್ಲೊಂದು ರೀತಿಯಲ್ಲಿ ಆರ್ಥಿಕವಾಗಿ ಸದೃಢ ರಾಗಲು,ಹಲವಾರು ಮಹತ್ವದ ಯೋಜನೆಗಳನ್ನು ರೂಪಿಸಿದೆ. ಮತ್ತು ಇನ್ನೂ ಸಹ ಜಾರಿಗೆ ತರುತ್ತಿದೆ.

Kisan: ಕಿಸಾನ್ ಪಿಂಚಣಿ ಯೋಜನೆ ಎಂದರೇನು?

Kisan ಪಿಂಚಣಿ ಯೋಜನೆಯು ಒಂದು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಈ ಯೋಜನೆ ಅಡಿಯಲ್ಲಿ, ನೊಂದಾಯಿಸಿಕೊಂಡು ಎಲ್ಲ ರೈತರಿಗೆ 60 ವರ್ಷಗಳು ಆದ ನಂತರ ಪ್ರತಿ ತಿಂಗಳು, ಮಾಸಿಕ 3000 ಪಿಂಚಣಿ ಸೌಲಭ್ಯ ದೊರೆಯಲಿದೆ.

Yashaswini yojane: ಮತ್ತೆ ಬಂತು ಯಶಸ್ವಿನಿ ಕಾರ್ಡ್ ಯೋಜನೆ, ಏನಿದರ ಉಪಯೋಗ? ಮಾಹಿತಿ ಇಲ್ಲಿದೆ.

ಪ್ರಧಾನಮಂತ್ರಿ ಕಿಸಾನ್ ಮಾಂದನ್ ಯೋಜನೆಯಡಿ ರೈತರಿಗೆ 60 ವರ್ಷಗಳ ನಂತರ ಪಿಂಚಣಿ ನೀಡಲಾಗುವುದು. ವಿಶೇಷವೆಂದರೆ ನೀವು ಪಿಎಂ ಕಿಸಾನ್‌ನಲ್ಲಿ ಖಾತೆದಾರರಾಗಿದ್ದರೆ, ನಿಮಗೆ ಯಾವುದೇ ದಾಖಲೆಗಳ ಅಗತ್ಯವಿರುವುದಿಲ್ಲ. ಪಿಎಂ ಕಿಸಾನ್ ಮನ್ಧನ್ ಯೋಜನೆಯಲ್ಲಿ ನಿಮ್ಮ ನೇರ ನೋಂದಣಿಯನ್ನು ಸಹ ಮಾಡಲಾಗುತ್ತದೆ. ಈ ಯೋಜನೆಯ ಅನೇಕ ಉತ್ತಮ ವೈಶಿಷ್ಟ್ಯಗಳು ಮತ್ತು ಪ್ರಯೋಜನಗಳಿವೆ.

CROP INSURANCE: ಹಿಂಗಾರು ಬೆಳೆ ವಿಮೆ ತುಂಬಲು ಮಾಹಿತಿ.


ಪಿಎಂ ಕಿಸಾನ್ ಮಾಂದನ್ ಯೋಜನೆ(PM Kisan Maan Dhan Pension Scheme)ಯ ವೆಬ್‌ಸೈಟ್‌ನಲ್ಲಿ ನೀಡಿರುವ ಮಾಹಿತಿಯ ಪ್ರಕಾರ, 60 ವರ್ಷ ವಯಸ್ಸಿನ ನಂತರ ಈ ಯೋಜನೆಯಡಿ ರೈತರಿಗೆ ಪಿಂಚಣಿ ಸೌಲಭ್ಯವಿದೆ. ಅಂದರೆ, ರೈತರ ವೃದ್ದಾಪ್ಯ ಕಾಪಾಡಲು ಸರ್ಕಾರ ಈ ಯೋಜನೆ ಆರಂಭಿಸಿದೆ. 18 ವರ್ಷದಿಂದ 40 ವರ್ಷದವರೆಗಿನ ಯಾವುದೇ ರೈತರು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. 60 ವರ್ಷ ತುಂಬಿದ ನಂತರ ರೈತರು ಮಾಸಿಕ 3000 ರೂ.ವರೆಗೆ ಪಿಂಚಣಿ ಪಡೆಯುತ್ತಾರೆ.

Kisan: ಪಿಂಚಣಿ ಯೋಜನೆ ಮಾಡಿಸಲು ಅರ್ಹತೆಗಳು ಏನು?

  • ಈ ಯೋಜನೆಯ ಲಾಭ ಪಡೆಯಲು, ಕಡ್ಡಾಯವಾಗಿ ಭಾರತೀಯ ಪ್ರಜೆ ಆಗಿರಬೇಕು.
  • 18 ರಿಂದ 40 ವರ್ಷದ ಒಳಗಿನ ವಯಸ್ಕರು ಆಗಿರಬೇಕು.
  • ಸಣ್ಣ ಮತ್ತು ಅತೀ ಸಣ್ಣ ಭೂ ಹಿಡುವಳಿ ದಾರರು ಆಗಿರಬೇಕು.
  • ಕೇಂದ್ರ ಸರ್ಕಾರದ ಬೇರೆ ಯಾವುದೇ ಪಿಂಚಣಿ ಯೋಜನೆಯಲ್ಲಿ ಇರಬಾರದು.
  • ಪಹಣಿ ಪತ್ರ ( RTC) ಊತಾರ ಹೊಂದಿರಬೇಕು.

Kisan: ಪಿಂಚಣಿ ಯೋಜನೆ ಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು..

ಇದನ್ನೂ ಓದಿ: Health Card : ಅಭಾ ಕಾರ್ಡ್ ಉಪಯೋಗಗಳು.. ಈಗಲೇ ತಿಳಿಯಿರಿ.

ಇದನ್ನೂ ಓದಿ; Labour card: ಈಗ ಮನೆಯಲ್ಲೇ ಕುಳಿತು ಲೇಬರ್ ಕಾರ್ಡ್ ಮಾಡಿಕೊಳ್ಳಿ, ಮದುವೆ,ಹೆರಿಗೆ, ಆಕ್ಸಿಡೆಂಟ್ ಸಹಾಯಧನ ಪಡೆಯಿರಿ

  • ಅರ್ಜಿ ಸಲ್ಲಿಸುವ ಅಭ್ಯರ್ಥಿ ಭೂ ಪ್ರಮಾಣ ಪತ್ರ ( RTC ) ಪಹಣಿ ಪತ್ರ ಹೊಂದಿರಬೇಕು.
  • ರೇಷನ್ ಕಾರ್ಡ್ ಹೊಂದಿರಬೇಕು.
  • ಕಡ್ಡಾಯವಾಗಿ ಆಧಾರ್ ಕಾರ್ಡ್ ಮತ್ತು ಮೊಬೈಲ್ ನಂಬರ್ ಲಿಂಕ್ ಮಾಡಿರಬೇಕು.
  • ಬ್ಯಾಂಕ್ ಪಾಸ್ಬುಕ್ ಹೊಂದಿರಬೇಕು. ( Bank passbook)
  • ವಯಸ್ಸಿನ ಪ್ರಮಾಣ ಪತ್ರ ( Birth certificate)
  • ಗುರುತಿನ ಚೀಟಿ ( Election voter ID)
  • ಆದಾಯ ಪ್ರಮಾಣ ಪತ್ರ ( Income certificate)
  • ಕ್ಷೇತ್ರದ ಖಸ್ರ khatoni
  • Passport ಸೈಜ್ ಫೋಟೋಸ್.

Kisan: ಪಿಎಂ ಕಿಸಾನ್ ಸಮ್ಮಾನ ಯೋಜನೆ ಫಲಾನಭವಿ ಆಗಿದ್ದರೆ , ಇದಕ್ಕೆ ಏನು ಉಪಯೋಗ…?

ನೀವು ಈಗಾಗಲೇ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪಿಎಂ ಕಿಸಾನ್ ಸಮ್ಮಾನ ಯೋಜನೆಯ ಫಲಾನಭವಿಗಳು ಆಗಿದ್ದರೆ, ಅದಕ್ಕೆ ಪ್ರತಿ ವರ್ಷ ಮೂರು ಕಂತುಗಳಲ್ಲಿ ಎರಡು ಸಾವಿರ ರೂಗಳಂತೆ ಹಣ ನೇರವಾಗಿ ರೈತರ ಖಾತೆಗೆ ಜಮಾ ಆಗುತ್ತದೆ. ಅದರಲ್ಲಿ ನೀವು ಪಿಎಂ ಕಿಸಾನ್ ಪಿಂಚಣಿ ಯೋಜನೆ ಫಲಾನುಭವಿ ಆಗಲು ಬಯಸಿದ್ದಲ್ಲಿ ಈ ಯೋಜನೆಯ ಜೊತೆಗೆ ಲಿಂಕ್ ಮಾಡಿಸಿದರೆ ನೀವು ನಿಮ್ಮ ಜೋಬಿನಿಂದ ಒಂದು ರೂಪಾಯಿಯನ್ನು ಕಟ್ಟಲು ಅವಶ್ಯಕತೆ ಇರುವುದಿಲ್ಲ.

ಪಿಎಂ ಕಿಸಾನ್ ಸಮಾನ್ ಯೋಜನೆಯಲ್ಲಿ ಬರುವಂತಹ ಹಣ ಈ ಯೋಜನೆಗೂ ಕೂಡ ಕಡಿತಗೊಳಿಸಲಾಗುತ್ತದೆ ಆದ್ದರಿಂದ ನೀವು ಸುಲಭವಾಗಿ ಈ ಯೋಜನೆಯ ಲಾಭವನ್ನು ಪಡೆಯಬಹುದು.

ಹೇಗೆ ಈ ಯೋಜನೆ ರೈತರಿಗೆ ಅನುಕೂಲ ಆಗುತ್ತದೆ..?

ದೇಶದ ರೈತರು ಪಿಎಂ ಕಿಸಾನ್ ಪಿಂಚಣಿ ಯೋಜನೆ ಅಥವಾ ಪಿಎಂ ಕಿಸಾನ್ ಮಾನದನ್ ಯೋಜನೆ ಅಡಿಯಲ್ಲಿ ಫಲಾನುಭವಿ ಆಗಿದ್ದಲ್ಲಿ 18ರಿಂದ 40 ವರ್ಷ ವಯಸ್ಸಿನ ಸಣ್ಣ ಮತ್ತು ಅತಿ ಸಣ್ಣ ಭೂ ಹಿಡುವಳಿದಾರರು 60 ವರ್ಷಗಳ ನಂತರ ಪ್ರತಿ ಮಾಸಿಕ , 3000 ರೂಗಳನ್ನು ಪಿಂಚಣಿ ರೂಪದಲ್ಲಿ ಸರ್ಕಾರದಿಂದ ನೇರವಾಗಿ ಹಣವನ್ನು ಪಡೆಯಬಹುದು.

https://maandhan.in/

ನೀವು ಪ್ರತಿ ತಿಂಗಳು 50 ರೂಪಾಯಿಯಿಂದ 110ಗಳವರೆಗೆ ಹಣವನ್ನು ಯೋಜನೆ ಅಡಿಯಲ್ಲಿ ತೆರೆಯಲಾದ ಬ್ಯಾಂಕ್ ಖಾತೆಗೆ ಜಮಾ ಮಾಡಿದ್ದಲ್ಲಿ ಅದೇ ಸಮನಾದ ಹಣವನ್ನು ಕೇಂದ್ರ ಸರ್ಕಾರ ಖಾತೆಗೆ ಜಮಾ ಮಾಡುತ್ತದೆ. ಈ ರೀತಿ 60 ವರ್ಷಗಳವರೆಗೆ ನೀವು ಪ್ರತಿ ತಿಂಗಳು ಜಮಾ ಮಾಡುತ್ತಾ ಬಂದಲ್ಲಿ ಫಲಾನುಭವಿ ಆದಂತಹ ರೈತ ಸಾಯುವವರೆಗೆ ಪ್ರತಿ ತಿಂಗಳು 3000 ರೂಗಳನ್ನು ಪಿಂಚಣಿ ರೂಪದಲ್ಲಿ ಪಡೆಯಬಹುದಾಗಿದೆ.

ಮತ್ತು ಒಂದು ಪಕ್ಷ ಫಲಾನುಭವಿ ಆದಂತಹ ರೈತ ಸಾವಿಗೀಡಾದಲ್ಲಿ ಆತನ ಹೆಂಡತಿಯಾದ ಎರಡನೇ ಫಲಾನುಭವಿಯು ಮಾಸಿಕ 1500 ಗಳನ್ನು ಪಡೆಯುತ್ತಾಳೆ, ಹೀಗಾಗಿ ಈ ಯೋಜನೆಯ ಕೇಂದ್ರ ಸರ್ಕಾರದ ಅತ್ಯಂತ ಮಹತ್ವಕಾಂಕ್ಷಿ ಯೋಜನೆಯಾಗಿದ್ದು ಎಲ್ಲಾ ರೈತರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಲು ಒಂದು ಸುವರ್ಣ ಅವಕಾಶವಾಗಿದೆ.

ಈ ಯೋಜನೆಯನ್ನು ನೋಂದಣಿ ಮಾಡಲು, ನಿಮ್ಮ ಹತ್ತಿರದ ಕಂಪ್ಯೂಟರ್ ಸೆಂಟರ್ ಅಥವಾ CSC ಸೆಂಟರ್ ನಲ್ಲಿ ಮಾಡಿಸಬಹುದು.

ರೈತರ ಕಷ್ಟ ನೋಡಲಾರದೆ , ಮುಂಬೈ ನ ಎಂಜಿನಿಯರ್ ದಂಪತಿಗಳು, ಎಲೆಕ್ಟ್ರಿಕ್ ಬುಲ್ ಕಂಡು ಹಿಡಿದಿದ್ದಾರೆ, ಅದರ ಸಂಪೂರ್ಣ ಮಾಹಿತಿ ನೀಡಲಾಗಿದೆ, ಕೆಳಗೆ ಕೊಟ್ಟಿರುವ ಲಿಂಕ್ ಒತ್ತಿ ನೋಡಬಹುದು.

https://krushijagattu.com/engineer-couples-invention-the-electric-ox-for-farmers/

https://krushijagattu.com/join-our-krushi-jagattu-youtube-chennel-get-instant-news/


Share News

Malatesh

Hey I'm malatesh, from karnataka india... This website includes Agriculture, horticulture, vetarnary, latest news informations.

View all posts by Malatesh →

Leave a Reply

Your email address will not be published. Required fields are marked *