
ಕರ್ನಾಟಕ ಸರ್ಕಾರ ಎಲ್ಲಾ ರೈತರಿಗೆ ಅನುಕೂಲ ಆಗುವಂತೆ, ಪ್ರತಿದಿನ 7 ಘಂಟೆ 3 ಫೇಸ್ ( 3-phase) ಉಚಿತ ವಿದ್ಯುತ್ ನೀಡಲು ಎಲ್ಲ ರಾಜ್ಯದ ವಿವಿಧ ಎಸ್ಕಂಗಳಿಗೆ ಅನುದಾನ ನೀಡುತ್ತಿತ್ತು, ಅದರಂತೆ ಎಲ್ಲಾ ಎಸ್ಕಾಮ್ ಪ್ರತಿದಿನ ರೈತರ ಜಮೀನುಗಳ ಪಂಪ್ ಸೆಟ್ ಗೆ ವಿದ್ಯುತ್ ಪೂರೈಸುತ್ತಿದ್ದರು.
ಆದರೆ ಸರ್ಕಾರದಿಂದ ನೀಡುವ ಅನುದಾನ ಈಗ ಮಿತಿ ಹೇರಿದೆ, ತಿಂಗಳಿಗೆ ಇಂತಿಷ್ಟು ಉಚಿತ ಯೂನಿಟ್ ( unit) ಎಂದು ನಿಗದಿ ಪಡಿಸಿದ್ದ ಸರ್ಕಾರ ಒಮ್ಮೆಲೆ ಈಗ ಮಿತಿ ಹೇರಿ ರೈತರಿಗೆ ಸಂಕಷ್ಟ ಎದುರು ಮಾಡಿದೆ.
ಎಸ್ಕಂ ಅಧಿಕಾರಿಗಳು, ಸರ್ಕಾರ ನೀಡುವ ಸಹಾಯಧನದ ತಕ್ಕಂತೆ ನಾವು ಪ್ರತಿದಿನ ಉಚಿತ ವಿದ್ಯುತ್ ನೀಡುತ್ತಿದ್ದೇವೆ, ಅದಕ್ಕಿಂತ ಹೆಚ್ಚಾಗಿ ವಿದ್ಯುತ್ ನೀಡಲು ನಮಗೆ ಅಧಿಕಾರವಿಲ್ಲ ಎಂದು ತಿಳಿಸಿ, ಈ ವಿಚಾರದಲ್ಲಿ ಅಸಹಾಯಕರಾಗಿದ್ದಾರೆ.
ಈಗಾಗಲೇ ಸುಮಾರು ಜಿಲ್ಲೆಗಳಲ್ಲಿ ಸರಿಯಾಗಿ ವಿದ್ಯುತ್ ಪೂರೈಕೆ ಇರುವುದಿಲ್ಲ, ಕಂಬಗಳು ಬಿದ್ದು, ಕರೆಂಟ್ ಕಟ್ ಆಗಿ, ಸರಿಯಾದ ಸಮಯಕ್ಕೆ ವಿದ್ಯುತ್ ಬಾರದೆ ರೈತರು ಬೆಳೆದ ಬೆಳೆಗೆ ನೀರು ಹಾಯಿಸಲು ಸಾದ್ಯವಾಗುವುದಿಲ್ಲ,ಇಂತ ಸಮಯದಲ್ಲಿ ಸರ್ಕಾರ ಉಚಿತ ವಿದ್ಯುತ್ ಗೆ ಮಿತಿ ಹೇರಿದರೆ, ರೈತರಿಗೆ ಸಂಕಷ್ಟ ನಿವಾರಿಸಲು ಆಗುವುದಿಲ್ಲ.
ಹೌದು ರೈತ ಭಾಂದವರೇ ಇನ್ಮುಂದೆ ಕೃಷಿ ಪಂಪ್ ಸೆಟ್ ಗೆ ಉಚಿತ ವಿದ್ಯುತ್ ಪೂರೈಕೆ ಇರುವುದಿಲ್ಲ ಎಂಬ ಆಘಾತಕಾರಿ ವಿಷಯವೊಂದನ್ನು ಎಸ್ಕಾಂ ಅಧಿಕಾರಿಗಳು ಹೋರಬಿಟ್ಟಿದ್ದಾರೆ.
ನಮ್ಮ ದೇಶದಲ್ಲಿ ಸುಮಾರು 1 ಲಕ್ಷ ರೈತರು ಹಾವು ಕಚ್ಚಿ ಸಾವನ್ನಪ್ಪುತ್ತಾರೆ, ಕಾರಣ ಸರಿಯಾದ ಸಮಯಕ್ಕೆ ವಿದ್ಯುತ್ ಬರುವುದಿಲ್ಲ, ರಾತ್ರಿ ಸಮಯದಲ್ಲಿ ರೈತರು ಜಮೀನುಗಳಿಗೆ ಹೋಗಿ ಬೆಳೆಗೆ ನೀರು ಹಾಯಿಸುವ ಸಮಯದಲ್ಲಿ ಹಾವುಗಳು ಕಚ್ಚಿ ಸಾವನ್ನಪ್ಪುತ್ತಾರೆ, ಇದಕ್ಕೆ ತಕ್ಕಂತಹ ಪರಿಹಾರವೂ ಸಹ ಸಿಗದೆ ರೈತರು ಆರ್ಥಿಕವಾಗಿ ಮತ್ತು ಮಾನಸಿಕವಾಗಿ ಕುಗ್ಗಿಹೋಗಿದ್ದಾರೆ.