ಹೌದು ಸ್ನೇಹಿತರೇ, ಕಳೆದ ವರ್ಷದಿಂದ ದನ ಕರುಗಳಿಗೆ ಕಾಡುತ್ತಿರುವ ವೈರಸ್ ರೋಗವೇಂದರೆ ಅದುವೇ lumpy skin disease ( ಚರ್ಮ ಗಂಟು ರೋಗ)
ನಮ್ಮ ರಾಜ್ಯದಲ್ಲಿ, ಮತ್ತು ತಮಿಳುನಾಡು ರಾಜ್ಯದಲ್ಲಿ ರೈತರು ಅತ್ಯಂತ ವಿಜೃಂಭಣಯಿಂದ ಆಚರಿಸುವ ಹಬ್ಬವೆಂದರೆ ಹೋರಿ ಹಬ್ಬ ( Bull race) , ಲಕ್ಷಾಂತರ ರೈತರು, ಯುವಕರು ಅತ್ಯಂತ ಉತ್ಸಾಹದಿಂದ, ಹೋರಿಗಳನ್ನು ವರ್ಷವಿಡೀ ಮೇಯಿಸಿ, ತಯಾರು ಮಾಡಿ, ದೀಪಾವಳಿ ಹಬ್ಬ ಮುಗಿದ ಕೂಡಲೇ, ಹಳ್ಳಿಗಳಲ್ಲಿ ಅಖಾಡವನ್ನು ಸಿದ್ಧಗೊಳಿಸಿ, ಹೋರಿ ಹಬ್ಬ ಆಚರಿಸುತ್ತಾರೆ.
ಇದನ್ನೂ ಓದಿ:ಬೆಳೆ ವಿಮೆ ಸ್ಟೇಟಸ್ ಚೆಕ್ ಮಾಡಲು, ಡೈರೆಕ್ಟ್ ಲಿಂಕ್ ಇಲ್ಲಿದೆ ನೋಡಿ.. Crop Insurance
ನಮ್ಮ ರಾಜ್ಯದ ಹಾವೇರಿ ಜಿಲ್ಲೆಯಲ್ಲಿ ಅತೀ ಹೆಚ್ಚು ಹೋರಿ ಹಬ್ಬದ ಕಾರ್ಯಕ್ರಮಗಳು ಪ್ರತಿವರ್ಷ ನಡೆಯುತ್ತವೆ. ಹಬ್ಬದ ಹೊರಿಗಳಿಗೆ ಜೂಲ, ಪೀಪಿ, ಬಾಸಿಂಗ, ಕೊಬ್ಬರಿ, ಗೆಜ್ಜೆ, ಹೀಗೆ ಇನ್ನೂ ಹತ್ತು ಹಲವು ಆಕರ್ಷಕ ಬಟ್ಟೆ, ಸಾಮಾನುಗಳನ್ನು ಕಟ್ಟಿ, ಎತ್ತನ್ನು ಮದುವೆಗೆ ತಯಾರು ಮಾಡಿದ ರೀತಿಯಲ್ಲಿ, ಮಾಡಿ ಅಖಾಡದ ಒಳಗೆ ಬಿಟ್ಟು, ಎತ್ತನ್ನು ಬೆದರಿಸುವ ಮತ್ತು ಹಿಡಿಯುವ ಮೂಲಕ , ಮನರಂಜನೆ ಕೊಡುತ್ತಾರೆ.
ಆದರೆ ಕಳೆದ ಎರಡು ತಿಂಗಳಿಂದ, ದನ ಕರುಗಳಿಗೆ ಬಂದಿರುವ ಚರ್ಮ ಗಂಟು ರೋಗ ( lumpy skin disease) ನಮ್ಮ ಜನಪ್ರಿಯ ಹಬ್ಬದ ಹೋರಿಗಳುಗು ತಟ್ಟಿದೆ. ಇದರಿಂದ ಸುಮಾರು ಎತ್ತುಗಳು ಆರೋಗ್ಯ ಸರಿ ಇಲ್ಲದೆ, ನರಳುತ್ತಿವೆ. ಮತ್ತು ಇನ್ನೂ ಕೆಲವು ಎತ್ತುಗಳು ಸಾವನ್ನಪ್ಪಿವೆ. ಇದು ಹಬ್ಬದ ಹೋರಿಯನ್ನು ಮೆಯಿಸಿದ ಮಾಲೀಕನಿಗೆ ತುಂಬಾ ದುಃಖಕರ ಅದ ಸಂಗತಿ.
Lumpy skin disease: ಈ ರೀತಿ ಕ್ರಮ ಅನುಸರಿಸಿ ಗಂಟು ರೋಗ ನಿವಾರಣೆ ಮಾಡಿ,
ಹಬ್ಬದ ಹೋರಿಗಳು ವರ್ಷಕ್ಕೆ ಸುಮಾರು ಬಹುಮಾನಗಳನ್ನು ಯಜಮಾನನಿಗೆ ತಂದು ಕೊಡುತ್ತವೆ, ಮತ್ತು ಸಾವಿರಾರು ರೈತರ, ಯುವಕರ ಮನದಲ್ಲಿ ಮನೆಮಾಡಿ, ಫ್ಯಾನ್ ಗಳನ್ನು ಸಂಪಾದಿಸುತ್ತವೆ. ತಮಿಳುನಾಡಿನಲ್ಲಿ ಸಹ ಇದೆ ರೀತಿ ಹೋರಿ ಹಬ್ಬ ಆಚರಿಸುತ್ತಾರೆ, ಅಲ್ಲಿಂದ ಎತ್ತುಗಳನ್ನು ಮಾರಾಟಕ್ಕೆ ತಂದು ನಮ್ಮ ರಾಜ್ಯದಲ್ಲಿ, ಬೆದರಿಸುವ ಸ್ಪರ್ಧೆಗೆ ಬಿಡಲಾಗುತ್ತದೆ.
ನಿಮ್ಮ ಖಾತೆಗೆ ಬೆಳೆ ಪರಿಹಾರ ಜಮಾ ಆಗಿದ್ಯಾ? ಈಗಲೇ ಚೆಕ್ ಮಾಡಿ..
ಏನೇ ಆಗಲಿ , ನಮ್ಮ ಹೆಮ್ಮೆಯ ರೈತರ ಎತ್ತುಗಳು , ದನ ಕರುಗಳು ಯಾವುದೇ ಕಾರಣಕ್ಕೂ, ಹಾನಿಗೆ ಒಳಗಾಗಬಾರದು, ನಿಮ್ಮ ಎಲ್ಲಾ ದನ ಕರುಗಳನ್ನು ಜೋಪಾನ ಮಾಡಿಕೊಳ್ಳಿ…