March 22, 2023

Lumpy skin disease: ಈ ರೀತಿ ಕ್ರಮ ಅನುಸರಿಸಿ ಗಂಟು ರೋಗ ನಿವಾರಣೆ ಮಾಡಿ,

Share News

ಹೌದು ಸ್ನೇಹಿತರೇ, ಕಳೆದ ವರ್ಷದಿಂದ ಹೈನುಗಾರಿಕೆ ಮತ್ತು ಕೃಷಿ ವಲಯದಲ್ಲಿ ಭಾರೀ ಸಮಸ್ಯೆಗೆ ಈಡು ಮಾಡುತ್ತಿರುವ ಒಂದು ಸಾಂಕ್ರಾಮಿಕ ರೋಗವೆಂದರೆ, ಈ lumpy skin disease( ಚರ್ಮದ ಗಂಟು ರೋಗ) ಎಂದರೆ ತಪ್ಪಾಗಲಾರದು.

ಲಂಪಿ ಸ್ಕಿನ್ ಡಿಸೀಸ್ (LSD) ಎಂಬುದು ಒಂದು ಜಾನುವಾರುಗಳಲ್ಲಿ ಬರುವ ಸಾಂಕ್ರಾಮಿಕ ರೋಗವಾಗಿದ್ದು, ಪೊಕ್ಸ್‌ವಿರಿಡೆ (foxviride) ಎಂಬ ಕುಟುಂಬದ ವೈರಸ್‌ನಿಂದ ಉಂಟಾಗುತ್ತದೆ, ಇದನ್ನು ನೀತ್ಲಿಂಗ್ ವೈರಸ್ (neetling virus) ಎಂದೂ ಕರೆಯುತ್ತಾರೆ. ರೋಗವು ಜ್ವರ, ವಿಸ್ತರಿಸಿದ ಬಾಹ್ಯ ದುಗ್ಧರಸ ಗ್ರಂಥಿಗಳು( swolen lymph nodes) ಮತ್ತು ಚರ್ಮ ಮತ್ತು ಲೋಳೆಯ ಪೊರೆಗಳ ಮೇಲೆ (ಉಸಿರಾಟ ಮತ್ತು ಜಠರಗರುಳಿನ ಪ್ರದೇಶಗಳನ್ನು ಒಳಗೊಂಡಂತೆ) ಬಹು ಗಂಟುಗಳು( big swolen nodes) (2-5 ಸೆಂಟಿಮೀಟರ್ (1-2 ಇಂಚು) ವ್ಯಾಸವನ್ನು ಅಳೆಯುವುದು) ನಿಂದ ನಿರೂಪಿಸಲ್ಪಟ್ಟಿದೆ.

ಸೋಂಕಿತ ಜಾನುವಾರುಗಳು ತಮ್ಮ ಕೈಕಾಲುಗಳಲ್ಲಿ ಎಡೆಮಾಟಸ್ ಊತವನ್ನು ಬೆಳೆಸಿಕೊಳ್ಳಬಹುದು, ಮತ್ತು ಕುಂಟತನವನ್ನು ಪ್ರದರ್ಶಿಸಬಹುದು. ವೈರಸ್ ಪ್ರಮುಖ ಆರ್ಥಿಕ ಪರಿಣಾಮಗಳನ್ನು ಹೊಂದಿದೆ. ಪೀಡಿತ ಪ್ರಾಣಿಗಳು ತಮ್ಮ ಚರ್ಮಕ್ಕೆ ಶಾಶ್ವತ ಹಾನಿಯನ್ನುಂಟುಮಾಡುತ್ತವೆ, ಈ ರೋಗ ಬರುವುದರಿಂದ ಆರ್ಥಿಕವಾಗಿ ತುಂಬಾ ನಷ್ಟ ಆಗುವ ರೀತಿ ಮಾಡುತ್ತದೆ. ಹೆಚ್ಚುವರಿಯಾಗಿ, ರೋಗವು ಸಾಮಾನ್ಯವಾಗಿ ದೀರ್ಘಕಾಲದ ದೌರ್ಬಲ್ಯ, ಕಡಿಮೆ ಹಾಲು ಉತ್ಪಾದನೆ, ಕಳಪೆ ಬೆಳವಣಿಗೆ, ಬಂಜೆತನ, ಗರ್ಭಪಾತ ಮತ್ತು ಕೆಲವೊಮ್ಮೆ ಸಾವಿಗೆ ಕಾರಣವಾಗುತ್ತದೆ.

ಏನಿದು ಗಂಟು ರೋಗ..? ಹೇಗಿರುತ್ತದೆ…? ಹೇಗೆ ಕಾಣಿಸಿಕೊಳ್ಳುತ್ತದೆ…?

ಇದು ಒಂದು ಸಾಂಕ್ರಾಮಿಕ ರೋಗ ಆಗಿರುವುದರಿಂದ, ಸೊಳ್ಳೆ ಮತ್ತು ನೋಣಗಳಿಂದ ಬಹು ಬೇಗ ಮೈ ಎಲ್ಲ ಆವರಿಸುತ್ತದೆ. ಮೊದಲು ದನಗಳ ದೇಹದ ಮೇಲೆ ಒಂದೆರಡು ಮೆತ್ತನೆಯ ಗುಳ್ಳೆಗಳು ಆಗುತ್ತವೆ, ಅದು ಕೀವು ತುಂಬಿಕೊಂಡು ಒಡೆದು ಸ್ರಾವ ಆರಂಭವಾಗುತ್ತಿದ್ದಂತೆ, ಅದರ ಮೇಲೆ ನೊಣಗಳು ಕೂತು, ಬೇರೆ ದನಗಳಿಗೆ ಚುಚ್ಚುವುದರಿಂದ ಅಕ್ಕ ಪಕ್ಕದ ದನ ಕರುಗಳಿಗೆ ಹರಡುತ್ತದೆ.

ಇದಕ್ಕೆ ಯಾವುದೇ ಲಸಿಕೆ ಇನ್ನೂ ಕಂಡು ಹಿಡಿದಿಲ್ಲ…

ಸದ್ಯಕ್ಕೆ ಈ ಗಂಟು ರೋಗಕ್ಕೆ ( lumpy skin disease ) ಯಾವುದೇ ಲಸಿಕೆ ಕಂಡು ಹಿಡಿದಿಲ್ಲ, ಹಾಗಾಗಿ ಮೇಕೆಗಳಿಗೆ ನೀಡುವ ರೋಗ ನಿರೋಧಕ ಮದ್ದನ್ನು ರೋಗ ಬಂದ ದನ ಕರುಗಳಿಗೆ ನೀಡಲಾಗುತ್ತಿದೆ, ಈ ಮದ್ದು ಹೆಚ್ಚು ಪರಿಣಾಮಕಾರಿ ಆಗಿರುವುದರಿಂದ, ರೋಗಗ್ರಸ್ಥ ದನ ಕರುಗಳು ಬೇಗ ಗುಣಮುಖ ಆಗುತ್ತವೆ.

ಮನೆಯಲ್ಲಿ ಆಯುರ್ವೇದಿಕ್ ಗಿಡಮೂಲಿಕೆಗಳ ಸಹಾಯದಿಂದ ಗುಣ ಪಡಿಸಬಹುದೆ…?

ಹೌದು ಸ್ನೇಹಿತರೇ, ಅನಾದಿ ಕಾಲದಿಂದಲೂ ಪೂರ್ವಜರು, ಗಿಡಮೂಲಿಕೆಗಳ ಸಹಾಯದಿಂದ ಅನೇಕ ಮಾರಣಾಂತಿಕ ರೋಗಗಳನ್ನು ಗುಣಪಡಿಸುವ ಶಕ್ತಿ ಹೊಂದಿದ್ದರು. ಅದೇ ರೀತಿ ಈ ರೋಗಕ್ಕೂ ಸಹ ಆಯುರ್ವೇದಿಕ್ ಗಿಡಮೂಲಿಕೆಗಳ ಸಹಾಯದಿಂದ ರೋಗವನ್ನು ನಿಯಂತ್ರಿಸಲು ಸಾಧ್ಯವಿದೆ.

ಮನೆಯಲ್ಲೇ ಸಿಗುವ ಅತ್ಯದ್ಬುತ ಔಷದಿ ಗುಣ ಹೊಂದಿರುವ ಕೆಲವು ಸಸ್ಯಗಳಿಂದ ಈ ರೋಗ ನಿವಾರಣೆ ಮಾಡಬಹುದು.

 • ಮೆಹಂದಿ ಸೊಪ್ಪು
 • ಅರಿಶಿಣ
 • ಬೇವಿನ ಸೊಪ್ಪು
 • ತುಳಸಿ ಎಲೆ
 • ಬೆಳ್ಳುಳ್ಳಿ (10-15ಎಸಳು)
 • 500ಗ್ರಾಂ ಕೊಬ್ಬರಿ ಎಣ್ಣೆ

ಇವೆಲ್ಲವನ್ನೂ ಸಣ್ಣಗೆ ರುಬ್ಬಿ ಅದಕ್ಕೆ 500ಗ್ರಾಂ ಕೊಬ್ಬರಿ ಎಣ್ಣೆಯ ಜೊತೆಗೆ ಒಲೆಯ ಮೇಲೆ ಇಟ್ಟು, ಬೆಚ್ಚಗೆ ಮಾಡಿ, ಆರಿಸಿ ನಂತರ ಅಗತ್ಯಕ್ಕೆ ತಕ್ಕಷ್ಟು ನೀರು ಬೆರೆಸಿ, ರೋಗ ಹರಡಿದ ಗಂಟುಗಳ ಮೇಲೆ ತಯಾರಿಸಿದ ಲೇಪನವನ್ನು ಹಚ್ಚಬೇಕು. ದಿನಕ್ಕೆ ಮೂರು ಭಾರಿ ಚೆನ್ನಾಗಿ ಮೈ ಮತ್ತು ಕುತ್ತಿಗೆ ಕಾಲುಗಳಿಗೆ ಹಚ್ಚಬೇಕು.

ಮೆಹಂದಿ ಸೊಪ್ಪು, ತುಳಸಿ ಎಲೆ, ಬೇವಿನ ಸೊಪ್ಪು , ಅರಿಶಿನ , ಇವೆಲ್ಲದರಲ್ಲಿ ಉತ್ತಮ ಗುಣಮಟ್ಟದ ರೋಗ ನಿರೋಧಕ ಶಕ್ತಿ ಇರುವದರಿಂದ, ಇದರ ಲೇಪನದಿಂದ ಮೈ ಮೇಲಿನ ಗಾಯಗಳು ಸುಟ್ಟು ರೋಗ ಕ್ರಮೇಣ ಗುಣಮುಖ ಆಗುತ್ತದೆ. ಈ ಲೇಪನ ದೇಹದ ಹೊರಮೈ ಗೆ ಹಚ್ಚುವುದು ಆದ್ದರಿಂದ, ಇದನ್ನು ಹೊಟ್ಟೆಗೆ ಕೊಡಬಾರದು.

ಇದನ್ನೂ ಓದಿ: ವರ್ಷಕ್ಕೆ 30ಲಕ್ಷ ಗಳಿಸುತ್ತಿರುವ ಹಾವೇರಿಯ ರೈತhttp://ವರ್ಷಕ್ಕೆ 30ಲಕ್ಷ ಗಳಿಸುತ್ತಿರುವ ಹಾವೇರಿಯ ರೈತ organic farming

ಹೊಟ್ಟೆಗೆ ತಿನಿಸುವ ಅಥವಾ ಕುಡಿಸುವ ಮನೆ ಮದ್ದು..

 • ವೀಳ್ಯದ ಎಲೆ ( 10)
 • 50ಗ್ರಾಂ ಬೆಲ್ಲ
 • ಕಾಳು ಮೆಣಸು 10ಗ್ರಾಂ
 • ಉಪ್ಪು 10ಗ್ರಾಂ
 • ಇವೆಲ್ಲವನ್ನೂ ಚೆನ್ನಾಗಿ ರುಬ್ಬಿಕೊಳ್ಳಬೇಕು

ರುಬ್ಬಿಕೊಂಡ ಮಿಶ್ರಣವನ್ನು ರೋಗ ಬಂದಂತಹ ದನ ಕರುಗಳಿಗೆ ಹೊಟ್ಟೆಗೆ ಗೊಟ್ಟದ ಮೂಲಕ ಇಲ್ಲವೇ ಇಂಜಿಕ್ಷನ್ ಸಿರಿಂಜ್ ಮೂಲಕ ಹೊಟ್ಟೆಗೆ ಹಾಕಬೇಕು, ಈ ರೀತಿ ದಿನಕ್ಕೆ ಮೂರು ಭಾರಿ ತಿನ್ನಿಸುತ್ತ ಬಂದರೆ ಕ್ರಮೇಣವಾಗಿ ರೋಗ ನಿವಾರಣೆ ಆಗುತ್ತದೆ.

ಪಶು ವೈದ್ಯರು ಸಲಹೆ ನೀಡಿದ LSD CARE ದ್ರಾವಣವನ್ನು ಕುಡಿಸಬಹುದು…

ಈ ಮೇಲೆ ಹೇಳಿದಂತೆ ಈ ರೋಗಕ್ಕೆ ನಿರ್ದಿಷ್ಟವಾದ ಲಸಿಕೆಯನ್ನು ಇನ್ನೂ ಕಂಡು ಹಿಡಿದಿಲ್ಲ ಆದ ಕಾರಣ , ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುವ HOMEO VETERINARY MEDICINE ಆದ LSD CARE ನ್ನು ಪ್ರತಿದಿನ 10ml ಹೊಟ್ಟೆಗೆ ಹಾಕಬೇಕು (oral suppliment) . ದಿನಕ್ಕೆ ಒಮ್ಮೆ ಮಾತ್ರ.

Usage of LSD care:

 • Large animals 10ml BID
 • Sheep & goat 5ml BID
 • Twice daily for 4-5days
 • The dosage is safe to double if required
 • AS DIRECTED BY THE VETERINARIAN

ಈ ರೋಗದಿಂದ ಆಗುವ ದುಷ್ಪರಣಾಮಗಳು..

ಈ ಗಂಟು ರೋಗ ಒಂದು ಅತೀ ಬಯಾನಕ ಸಾಂಕ್ರಾಮಿಕ ರೋಗವಾಗಿದ್ದು, ಇದು ಹರಡುವ ಮುಂಚೆಯೇ ಸ್ವಲ್ಪ ಮುಂಜಾಗ್ರತೆ ವಹಿಸುವುದು ಒಳ್ಳೆಯದು.

ಒಂದು ವೇಳೆ ರೋಗ ಹರಡಿ, ಕಾಳಜಿ ವಹಿಸದಿದ್ದರೆ, ಮತ್ತು ಸೂಕ್ತ ಕ್ರಮ ತೆಗೆದುಕೊಳ್ಳದಿದ್ದರೆ, ಎತ್ತುಗಳು (ox) ತಮ್ಮ ಕಾಲುಗಳ ಸ್ವಾಧೀನ ಕಳೆದುಕೊಳ್ಳುತ್ತವೆ, ಹಸುಗಳು ಹಾಲು ಕರೆಯುತ್ತಿದ್ದರೆ, ಬಲು ಬೇಗ ಹಾಲಿನ ಮಟ್ಟ ಕಡಿಮೆ ಆಗುತ್ತದೆ.

ಆದ್ದರಿಂದ ಆರೋಗ್ಯ ಇರುವ ದನ ಕರುಗಳನ್ನು ರೋಗ ಇರುವ ದನ ಕರುಗಳ ಜೊತೆಗೆ ಕಟ್ಟಬಾರದು, ಕೆರೆಗಳಲ್ಲಿ, ಮೈ ತೊಳೆಯಬರದು, ಆದಷ್ಟು ನೊಣಗಳು ಮೈ ಮೇಲೆ ಕೂರದಂತೆ ಎಚ್ಚರ ವಹಿಸಬೇಕು.


Share News

Malatesh

Hey I'm malatesh, from karnataka india... This website includes Agriculture, horticulture, vetarnary, latest news informations.

View all posts by Malatesh →

Leave a Reply

Your email address will not be published. Required fields are marked *