
ಹೌದು ರೈತ ಬಾಂಧವರೇ, ಇದೆ ತಿಂಗಳ ಕೊನೆಯ ವಾರದಲ್ಲಿ, ಅಕ್ಟೋಬರ್ 27 ರಂದು , ರಾಜ್ಯಾದ್ಯಂತ ರಸ್ತೆ ಬಂದ್ ಮಾಡಲು, ರಾಜ್ಯದ ಕಬ್ಬು ಬೆಳೆಗಾರರ ಸಂಘದವರು ಹೇಳಿದ್ದಾರೆ, ರಸ್ತೆ ತಡೆ ಮಾಡಲು ಏನು ಕಾರಣ? ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಕಬ್ಬು ಬೆಳೆಗಾರರು ರಾಜ್ಯಾದ್ಯಂತ ರಸ್ತೆ ತಡೆ ಮಾಡಲು ಕಾರಣ..
ಕೇಂದ್ರ ಸರಕಾರ ನಿಗದಿ ಪಡಿಸಿದ ಕಬ್ಬಿನ ( suger cane) ಬೆಂಬಲ ಬೆಲೆಯನ್ನು, ರಾಜ್ಯ ಸರ್ಕಾರ ಹೆಚ್ಚು ಮಾಡಿಲ್ಲ. ಎಷ್ಟೇ ಸಾರಿ ಸಂಪುಟ ಸಭೆಯಲ್ಲಿ ಇದಕ್ಕೆ ಸಂಬಂಧಿಸಿ, ಮನವಿ ಮಾಡಿಕೊಂಡರೂ ಸಹ ಯಾವುದೇ ರೀತಿಯ, ನಿರ್ಧಾರವನ್ನು ರಾಜ್ಯ ಸರ್ಕಾರ ತೆಗೆದುಕೊಂಡಿಲ್ಲ ಎಂದು, ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷರಾದ ಕುರುಬೂರು ಶಾಂತಕುಮಾರ್ ಅವರು ತಿಳಿಸಿದರು.
https://krushijagattu.com/information-and-application-process-about-crop-insurance-of-rabi/
ಎಷ್ಟು ಸಮಯ ರಸ್ತೆ ಬಂದ್ ಮಾಡಲು ನಿರ್ಧಾರ ಮಾಡಲಾಗಿದೆ.?
ಅಕ್ಟೋಬರ್ 27 ರಂದು, ಬೆಳಿಗ್ಗೆ 11 ಗಂಟೆಯಿಂದ ಸುಮಾರು 1 ಘಂಟೆ ವರೆಗೆ , ಎಲ್ಲ ಜಿಲ್ಲೆಗಳ ಜಿಲ್ಲಾ ಅಧಿಕಾರಿಗಳ( distric magistrate) ಕಛೇರಿ ಮುಂದೆ ಮುತ್ತಿಗೆ ಹಾಕಿ ಪ್ರತಿಭಟನೆ , ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಕರ್ನಾಟಕದಲ್ಲಿ ಎಷ್ಟು ಕಬ್ಬು ಬೆಳೆಯಲಾಗುತ್ತಿದೆ…?
CROP INSURANCE: ಹಿಂಗಾರು ಬೆಳೆ ವಿಮೆ ತುಂಬಲು ಮಾಹಿತಿ.
ನಮ್ಮ ರಾಜ್ಯದಲ್ಲಿ ಪ್ರತಿ ಜಿಲ್ಲೆಯನ್ನು ಹಿಡಿದು , ಸುಮಾರು 30 ಲಕ್ಷ ರೈತರು, 40000 ಕೋಟಿ ಮೌಲ್ಯದ ಕಬ್ಬನ್ನು , ಪ್ರತಿವರ್ಷ ಬೆಳೆಯುತ್ತಾರೆ.
ಬೇರೆ ರಾಜ್ಯಗಳಲ್ಲಿ ಕಬ್ಬಿನ ( sugar cane) bele ಎಷ್ಟಿದೆ…?
ನಮ್ಮ ದೇಶದ, ಗುಜರಾತ್ ರಾಜ್ಯದಲ್ಲಿ, ಕಬ್ಬಿಗೆ ಒಂದು ಟನ್ ಗೆ ಸುಮಾರು, ರೂ 4400.00 ಗಳನ್ನು ಪಡೆಯುತ್ತಿದ್ದಾರೆ. ಮತ್ತು ಉತ್ತರ ಪ್ರದೇಶದಲ್ಲಿ ಒಂದು ಟನ್ ಕಬ್ಬಿಗೆ , 3500 ಪಡೆಯುತ್ತಿದ್ದಾರೆ. ಪಂಜಾಬ್ ನಲ್ಲಿ ಒಂದು ಟನ್ ಕಬ್ಬಿಗೆ ಸುಮಾರು 3800 ರೂಗಳನ್ನು ಪಡೆಯುತ್ತಿದ್ದಾರೆ.
ಆದರೆ ನಮ್ಮ ರಾಜ್ಯದಲ್ಲಿ ಒಂದು ಟನ್ ಕಬ್ಬಿಗೆ ಕನಿಷ್ಠ 3500 ರೂಗಳನ್ನು ಪಡೆಯಬೇಕಿದೆ. ಎಂದು ರೈತ ಸಂಘದವರು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: Solar eclipse: ಖಂಡಗ್ರಾಸ ಸೂರ್ಯಗ್ರಹಣದ ಸಮಯ, ಮತ್ತು ಯಾರಿಗೆ ಗಂಡಾಂತರ ಇದೆ ನೋಡಿ.
ಕಳೆದ ವರ್ಷ ಕಬ್ಬಿನ ದರ ಎಷ್ಟಿತ್ತು…?
ಕಳೆದ ಋತುವಿನಲ್ಲಿ ಕೇಂದ್ರ ಸರ್ಕಾರದ FRP ದರ ನಿಗದಿ ಮಾಡಿತ್ತು. ಅದರಂತೆ ಒಂದು ಟನ್ ಕಬ್ಬಿಗೆ 2900RS ಮಾಡಿದ್ದರು. ಅದನ್ನು ಹೆಚ್ಚಿಸಿ 3050 ರುಗಳಿಗೆ ಮಾಡಿದ್ದರು.
ಸಕ್ಕರೆ ಕಾರ್ಖಾನೆಗಳು ಸಹ ರೈತರಿಗೆ ಮೋಸ ಮಾಡುತ್ತಿವೆ, ಕಡಿಮೆ ಬೆಲೆಗೆ ಕಬ್ಬನ್ನು ತೆಗೆದುಕೊಂಡು, ಕಬ್ಬು ಬೆಳೆಗಾರರಿಗೆ ಅನ್ಯಾಯ ಮಾಡುತ್ತಿದ್ದಾರೆ. ಎಂದು ರೈತ ಸಂಘದ ಅಧ್ಯಕ್ಷರಾದ ಕುರುಬೂರು ಶಾಂತಕುಮಾರ್ ಅವರು ಕಿಡಿ ಕಾರಿ, ಅಂತವರ ವಿರುದ್ಧ ಕೇಸ್ ದಾಖಲಿಸಬೇಕು ಎಂದು ತಿಳಿಸಿದರು.
ವೀಕ್ಷಕರಲ್ಲಿ ವಿನಂತಿ: ನಮ್ಮ ಕೃಷಿ ಜಗತ್ತು ವೆಬ್ಸೈಟ್ ಗೆ ಭೇಟಿ ನೀಡಿದಾಗ, SCREEN ಮೇಲೆ ಬರುವ, NOTIFICATION BUTTON ನ್ನು ALLOW ಒತ್ತಿರಿ. ಮತ್ತು SUBSCRIBE ಮಾಡಿಕೊಂಡರೆ, ನಾವು ಹಾಕುವ ಎಲ್ಲಾ ಮಾಹಿತಿಗಳು ನಿಮ್ಮ ಮೊಬೈಲ್ ಗೆ ನೇರವಾಗಿ ಸಂದೇಶದ ಮೂಲಕ ಬರುತ್ತವೆ.
AUTHOR:
ಮಾಲತೇಶ ಕುಲಕರ್ಣಿ.
BSC (ಪ್ರಾಣಿಶಾಸ್ತ್ರ ಮತ್ತು ಜೀವಶಾಸ್ತ್ರ)