
Pm kisan : ಪಿ ಎಮ್ ಕಿಸನ್ ಸಮ್ಮಾನ್ ನಿಧಿಯ 12ನೇ ಕಂತು ಶೀಘ್ರದಲ್ಲೇ ರೈತರ ಖಾತೆಗೆ ವರ್ಗಾವಣೆಯಾಗಲಿದೆ.ಅಕ್ಟೋಬರ್ 17ರಂದು ಪೂಸಾದಲ್ಲಿರುವ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ರೈತರ ಖಾತೆಗೆ ಯೋಜನೆಯ 12ನೇ ಕಂತು ಬಿಡುಗಡೆ ಮಾಡಲಿದ್ದಾರೆ.
ಪಿಎಂ ಕಿಸಾನ್ 12 ನೇ ಕಂತಿನ ಸ್ಟೇಟಸ್ ತಿಳಿದುಕೊಳ್ಳಿ.. ಶೀಘ್ರವೇ ಬರಲಿದೆ ನಿಮ್ಮ ಖಾತೆಗೆ ಹಣ. Pm kisan 12th installment
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ರೈತರ ಖಾತೆಗೆ ನೇರವಾಗಿ 2000 ರೂ ಸಹಾಯಧನವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ್ದರು. ಅಂತೆಯೇ ಈಗಾಗಲೇ 11 ಕಂತುಗಳಲ್ಲಿ ರೈತರು ಹಣವನ್ನು ಪಡೆದಿದ್ದಾರೆ. 12ನೇ ಕಂತು ಇಕೆವೈಸಿ ಮಾಡಿಸಿದ ರೈತರ ಖಾತೆಗೆ ಜಮೆಯಾಗಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
Pm kisan: ಈ ಯೋಜನೆಯಂತೆ ವಾರ್ಷಿಕ 6000 ರೂಗಳನ್ನು ರೈತರ ಖಾತೆಗೆ ಕೇಂದ್ರ ನೇರವಾಗಿ ಜಮೆ ಮಾಡುತ್ತದೆ. ಇದರಲ್ಲಿ ಮಧ್ಯವರ್ತಿಗಳ ಹಾವಳಿ ಇಲ್ಲದೇ ರೈತರು ಇದರ ನೆರವನ್ನು ಪಡೆಯುತ್ತಿದ್ದಾರೆ. ಮೂರು ಕಂತುಗಳಲ್ಲಿ ತಲಾ ಎರಡು ಸಾವಿರ ರೂ ಗಳಂತೆ ವಾರ್ಷಿಕ ನಗದನ್ನು ನೀಡಲಾಗುತ್ತದೆ. ಈ ಬಾರಿ ಅಕ್ಟೋಬರ್ 17ರಂದು ರೈತರ ಖಾತೆಗೆ ನೇರವಾಗಿ 2000 ರೂ ಹಣ ಬರಲಿದೆ ಎಂದು ಕೇಂದ್ರ ತಿಳಿಸಿದೆ.
Pm kisan: ಅಕ್ಟೋಬರ್ 17ಕ್ಕೇ ಪಿಎಂ ಕಿಸಾನ್ ಹಣ ಜಮಾ..!
ಪಿ ಎಮ್ ಕಿಸಾನ್ ಯೋಜನೆ ಅಡಿ ವರ್ಷದ ಮೊದಲ ಕಂತನ್ನು ಏಪ್ರಿಲ್ ಒಂದರಿಂದ ಜುಲೈ 31ರವರೆಗೆ ರೈತರಿಗೆ ನೀಡಲಾಗುತ್ತದೆ ಮತ್ತು ಎರಡನೇ ಕಂತನ್ನು ಅಗಸ್ಟ್1 ರಿಂದ ನವೆಂಬರ್ 31 ವರೆಗೆ ನೀಡಲಾಗುತ್ತದೆ ಅದೇ ಸಮಯದಲ್ಲಿ ಮೂರನೇ ಕಂತಿನ ಹಣವನ್ನು ಡಿಸೆಂಬರ್ 1 ಮತ್ತು ಮಾರ್ಚ್ 31ರ ನಡುವೆ ವರ್ಗಾಯಿಸಲಾಗುತ್ತದೆ. ಇದರ ಪ್ರಕಾರ ಪಿಎಂ ಕಿಸಾನ್ 12ನೇ ಕಂತು ಅಕ್ಟೊಬರ್ 17 ರಂದು ರೈತರ ಖಾತೆಗೆ ಬರುತ್ತದೆ.
12 ನೇ ಕಂತಿನ ಸ್ಟೇಟಸ್ ಚೆಕ್ ಮಾಡಲು ಮೊದಲು https://www.pmkisan.gov.in/ಲಿಂಕ್ ಮೇಲೆ ಕ್ಲಿಕ್ ಮಾಡಿ
ನಂತರ “Farmers corner” ನಲ್ಲಿ “Beneficiaries status” ಮೇಲೆ ಕ್ಲಿಕ್ ಮಾಡಿ
ನಂತರ “Mobile number” ಮೇಲೆ ಕ್ಲಿಕ್ ಮಾಡಿ,ಮೊಬೈಲ್ ನಂಬರನ್ನು ನಮೂದಿಸಿ
ನಂತರ Captcha Type ಮಾಡಿ “Get Data” ಮೇಲೆ ಕ್ಲಿಕ್ ಮಾಡಿದರೆ ನಿಮಗೆ ಇಲ್ಲಿಯವರೆಗೂ ಬಂದಿರುವ ಮತ್ತು ಬರದೇ ಇರುವ ಕಂತಿನ ಕುರಿತ ಮಾಹಿತಿಯನ್ನು ನೋಡಬಹುದು.
ಮೊಬೈಲ್ ನಂಬರ್ ಬದಲು Farmer Registration ನಂಬರ್ select ಮಾಡಿ Farmer Registration ನಂಬರ್ ಹಾಕಿ captcha type ಮಾಡಿ Get Data ಮೇಲೆ ಕ್ಲಿಕ್ ಮಾಡಿ ನಿಮ್ಮ ಮುಂದಿನ ಸ್ಥಿತಿಗತಿ ತಿಳಿಯಬಹುದು.
ಸೂಚನೆ:ನಿಮಗೆ ನಿಮ್ಮ Farmer Registration ನಂಬರ್ ಗೊತ್ತಿಲ್ಲ ಎಂದರೆ Cick here to know your registration ಮೇಲೆ click ಮಾಡಿ ನಿಮ್ಮ ಮೊಬೈಲ್ ನಂಬರ್ ಹಾಕಿದರೆ ನಿಮ್ಮ Farmer Registration ಸಿಗುತ್ತದೆ.
ಅಕ್ಟೋಬರ್ 17 ರಿಂದ ನವ ದೆಹಲಿಯ ( new delhi) ಕೃಷಿ ಸಂಶೋಧನಾ ಕೇಂದ್ರದ ಮೈದಾನದಲ್ಲಿ ( ground) ಭಾರತೀಯ ಪಿಎಂ ಕಿಸಾನ್ ( Pm kisan) ಸಮ್ಮಾನ ಸಮ್ಮೇಳನ -2022 ನಡೆಯಲಿದೆ.
ಈ ಸಮ್ಮೇಳನದಲ್ಲಿ ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು, ಅಗ್ರಿ ಸ್ಟಾರ್ಟ್ ಅಪ್ ಕಾನ್ clave ( agri start up conclave) ಪ್ರದರ್ಶನ ಮಾಡುತ್ತಿದ್ದು. ಈ ವರ್ಷದ ಎರಡನೇ ಕಂತು , ಅಂದರೆ 12th installment, ಹಣ ಬಿಡುಗಡೆ ಮಾಡಲಿದ್ದಾರೆ.
ಇದನ್ನೂ ಓದಿ: Crop insurance: ರೈತರ ಖಾತೆಗೆ ಬೆಳೆ ವಿಮೆ ಜಮಾ
ನಮ್ಮ ಕೃಷಿ ಜಗತ್ತು ವೆಬ್ಸೈಟ್ ಗೆ Subscribe ಮಾಡಿಕೊಳ್ಳಿ, ಮತ್ತು Notifications ಆನ್ ಮಾಡಿಕೊಳ್ಳಿ, ಇದರಿಂದ ನಿಮ್ಮ ಮೊಬೈಲ್ ಗೆ ನೇರವಾಗಿ ಸಂದೇಶದ ಮೂಲಕ ಮಾಹಿತಿ ಸಿಗುತ್ತವೆ.