ಹೌದು ವೀಕ್ಷಕರೇ, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ ಯೋಜನೆ ಅಡಿಯಲ್ಲಿ ದೇಶದ 11 ಕೋಟಿ ರೈತರಿಗೆ, 2019 ರಲ್ಲಿ , ಕೇಂದ್ರ ಸರ್ಕಾರದಿಂದ ಮಹತ್ವದ ಯೋಜನೆಯನ್ನು ರೂಪಿಸಿತು. ಇದರಂತೆ ದೇಶದ ಎಲ್ಲಾ ನೋಂದಾಯಿತ ರೈತರ ಖಾತೆಗೆ ನೇರವಾಗಿ ವರ್ಷಕ್ಕೆ ಮೂರು ಕಂತುಗಳಲ್ಲಿ, ಹಣವನ್ನು ಜಮಾ ಮಾಡಲಾಗುತ್ತದೆ.
ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ವರ್ಷದ ಎರಡನೇ ಕಂತನ್ನು ರೈತರಿಗೆ ಜಮಾ ಮಾಡಲಾಗಿತ್ತು. ಆದರೆ ಈ ವರ್ಷ ಸೆಪ್ಟೆಂಬರ್ ಕೊನೆಯ ವಾರ ಬಂದರೂ ಸಹ ಇನ್ನೂ ರೈತರ ಖಾತೆಗೆ ಹಣ ಜಮಾ ಆಗಿಲ್ಲ. ಇದಕ್ಕೆ ಕಾರಣ ಏನೆಂದರೆ, ನಕಲು EKYC ಮಾಡಿಸಿ, ಒಂದೇ ಮನೆಯಲ್ಲಿ ಒಂದಕ್ಕಿಂತ ಎರಡು ಮೂರು ರೈತರು ಹಣವನ್ನು ಪಡೆಯಲು ಮುಂದಾಗಿರುವ, ಮಾಹಿತಿ ತಿಳಿದ ಕೇಂದ್ರ ಸರ್ಕಾರ ಅತ್ಯಂತ ನಿಗಾ ವಹಿಸಿ, ಮತ್ತೊಮ್ಮೆ ಪರಿಶೀಲಿಸಿ ಎಲ್ಲಾ ನಕಲಿ EKYC ಮಾಡಿಸಿದ ಖಾತೆಗಳನ್ನು ವಜಾ ಮಾಡಲಾಗುತ್ತಿದೆ.
ಪಿಎಂ ಕಿಸಾನ್ 12 ನೇ ಕಂತಿನ ಸ್ಟೇಟಸ್ ತಿಳಿದುಕೊಳ್ಳಿ.. ಶೀಘ್ರವೇ ಬರಲಿದೆ ನಿಮ್ಮ ಖಾತೆಗೆ ಹಣ. Pm kisan 12th installment
ಪಿಎಂ ಕಿಸಾನ್ ಸಮ್ಮಾನ ಯೋಜನೆ ಒಂದು ಅತ್ಯಂತ ಮಹತ್ವದ ಯೋಜನೆ ಆಗಿದ್ದು, ರೈತರ ಅಲ್ಪ ಮಟ್ಟಿನ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದರಿಂದ ದೇಶದ 11 ಕೋಟಿ ರೈತರು ಯಾವುದೇ ಮಧ್ಯವರ್ತಿ ಇಲ್ಲದೆ, ನೇರವಾಗಿ ತಮ್ಮ ಖಾತೆಗೆ ಹಣವನ್ನು ಕಂತಿನ ರೂಪದಲ್ಲಿ ಪಡೆಯುತ್ತಾರೆ. ಈಗಾಗಲೇ 11 ಕಂತುಗಳು ರೈತರ ಖಾತೆಗೆ ಹಣ ಜಮಾ ಆಗಿದ್ದು, ಇನ್ನೇನು 12 ಕಂತಿನ ಹಣ ಜಮಾ ಆಗುವ ಸಾದ್ಯತೆ ಇದೆ.
ಕೇಂದ್ರ ಸರ್ಕಾರದ ಮಾಹಿತಿ ಪ್ರಕಾರ, ವಿಜಯದಶಮಿ ದಿನದಂದು ರೈತರ ಖಾತೆಗೆ ಪ್ರಧಾನ್ ಮಂತ್ರಿ ಕಿಸಾನ್ ಸಮ್ಮಾನ ಯೋಜನೆಯ 12 ಕಂತಿನ ಹಣ ಜಮಾ ಆಗುವ ಸಾಧ್ಯತೆ ಹೆಚ್ಚಿದೆ. ಈ ವರ್ಷದ ಅತಿವೃಷ್ಟಿ ಇಂದ ಕೋಟ್ಯಂತರ ರೂಪಾಯಿ ಮೌಲ್ಯದ ರೈತರ ಆಸ್ತಿ ಪಾಸ್ತಿ ಬೆಳೆ ನಾಶವಾಗಿದ್ದು, ರಾಜ್ಯ ಸರ್ಕಾರ ಬೆಳೆ ಪರಿಹಾರ ಘೋಷಣೆ ಸಹ ಮಾಡಿ, ಈಗಾಗಲೇ ಕೆಲವು ಜಿಲ್ಲೆಗಳಿಗೆ ಹಣ ಜಮಾ ಮಾಡಿದೆ.
ನಿಮ್ಮ ಖಾತೆಗೆ ಬೆಳೆ ಪರಿಹಾರ ಜಮಾ ಆಗಿದ್ಯಾ? ಈಗಲೇ ಚೆಕ್ ಮಾಡಿ..
ನೀವು 12 ಕಂತಿನ ಹಣ ದ ಸ್ಟೇಟಸ್ ಚೆಕ್ ಮಾಡಲು ಕೆಳಗೆ ಕೊಟ್ಟಿರುವ ಲಿಂಕ್ ಒತ್ತಿ ನೋಡಬಹುದು..https://www.pmkisan.gov.in/
ನಿಮಗೆ ಒಂದು page ತೆರೆದುಕೊಳ್ಳುತ್ತದೆ, ಆಗ ನಿಮ್ಮ ಮೊಬೈಲ್ನಲ್ಲಿ desktop view ಸೆಲೆಕ್ಟ್ ಮಾಡಿ on ಮಾಡಿಕೊಳ್ಳಿ, ಹೀಗೆ ಮಾಡಿದರೆ ವೆಬ್ಸೈಟ್ ನ ಸಂಪೂರ್ಣ ಪುಟ ನಿಮಗೆ ಗೋಚರವಾಗುತ್ತದೆ.
ನಂತರ , ಫಾರ್ಮರ್ ಕಾರ್ನರ್ ಗೆ ಹೋಗಿ, ಅಲ್ಲಿ ಕೊಟ್ಟಿರುವ ಮಾಡಿಕೊಂಡು, ನಿಮ್ಮ ಮೊಬೈಲ್ ನಂಬರ್ ಅಥವಾ ಆಧಾರ್ ನಂಬರ್ ಹಾಕಿ, ಸ್ಟೇಟಸ್ ನೋಡಿಕೊಳ್ಳಬಹುದು. beneficiary status select