
ಹೌದು ವೀಕ್ಷಕರೇ, ಕೇಂದ್ರ ಸರ್ಕಾರದ ಪಿಎಂ ಕಿಸನ್ ಸಮಾನ್ ಯೋಜನೆ ಜಾರಿಗೆ ತಂದಿದ್ದು ಈಗಾಗಲೇ ದೇಶದ 12 ಕೋಟಿ ರೈತರ ಖಾತೆಗೆ ಕಂತಿನ ರೂಪದಲ್ಲಿ ಹಣ ಜಮಾ ಮಾಡಲಾಗಿದೆ. ಅದರಂತೆ 2020ರ 2022ರ ಸಾಲಿನ 12ನೇ ಕಂತಿನ ಹಣ ಜಮಾ ಮಾಡಲು ಕೇಂದ್ರ ಸರ್ಕಾರವು ಪ್ರತಿಯೊಬ್ಬ ರೈತನ ಈಕೆ ವೈಸಿ ಕಡ್ಡಾಯ ಮಾಡಲಾಗಿತ್ತು.
ಯೋಜನೆಯ ಫಲಾನುಭವಿ ರೈತರು ಕಡ್ಡಾಯವಾಗಿ ಈಕೆ ವೈಸಿ ಮಾಡಲೇಬೇಕಾಗಿದ್ದು ಮಾಡದಿದ್ದ ಪಕ್ಷದಲ್ಲಿ 12ನೇ ಕಂತಿನ ಹಣ ಜಮಾ ಆಗುವುದಿಲ್ಲ.
ಈ ಕೆ ವೈ ಸಿ ಮಾಡದೇ ಇದ್ದ ರೈತರು ಕೂಡಲೇ ತಮ್ಮ ಮೊಬೈಲ್ ಮೂಲಕ ಅಥವಾ ಹತ್ತಿರದ csc ಸೆಂಟರ್ ಗಳಲ್ಲಿ ಅಥವಾ ಕೃಷಿ ಕೇಂದ್ರಗಳಿಗೆ ಭೇಟಿ ನೀಡಿ ಈ ಕೆವೈಸಿ ಮಾಡಿಸಲು ಸೂಚನೆ ನೀಡಲಾಗಿದೆ.
ಈಗಾಗಲೇ ಈ ಕೆವೈಸಿ ಮಾಡುವಂತೆ ಪ್ರಚಾರ ಮಾಡಿದರು ಸಹ ಸಾವಿರಾರು ರೈತರು ಇನ್ನು ಸಹ ಮಾಡಿಸಿರುವುದಿಲ್ಲ, ಹಾಗಾಗಿ ಈ ಮೊದಲು ಸಪ್ಟಂಬರ್ 15 2022 ರ ತನಕ ಗಡುವು ನೀಡಿತ್ತು. ಅದನ್ನು ಮತ್ತೆ ವಿಸ್ತರಣೆ ಮಾಡಿ ಸಪ್ಟಂಬರ್ 22 ರ ತನಕ ಗಡುವು ನೀಡಲಾಗಿದೆ. ಹಾಗಾಗಿ ಕೂಡಲೇ ಈಕೆ ವೈ ಸಿ ಮಾಡಿಸಿಕೊಂಡು ಕೇಂದ್ರ ಸರ್ಕಾರದ ಪಿಎಂ ಕಿಸಾನ್ ಸಮಾನ್ ಯೋಜನೆ ಲಾಭ ಅಂದರೆ 12ನೇ ಕಂತಿನ ಹಣ ಪಡೆಯಬಹುದು.
PM ಕಿಸಾನ್ eKYC ಮಾಡುವ ವಿಧಾನ ಹೇಗೆ..?
- ಮೊದಲು ನಿಮ್ಮ ಮೊಬೈಲ್ನಲ್ಲಿ ಪಿಎಂ ಕಿಸಾನ್ ವೆಬ್ಸೈಟ್ ಓಪನ್ ಮಾಡಿ https://pmkisan.gov.in/https://pmkisan.gov.in/farmer corner ಲ್ಲೀ option ಕ್ಲಿಕ್ ಮಾಡಿ, ನಿಮ್ಮ ಆಧಾರ್ ಹಾಗೂ OTP ನಮೂದಿಸುವ ಮೂಲಕ eKYC ಅಪ್ಡೇಟ್ ಮಾಡಬಹುದು.
- https://exlink.pmkisan.gov.in/aadharekyc.aspx error ಬಂದಲ್ಲಿ ಡೈರೆಕ್ಟ್ ಆಗಿ ಈ ಪೇಜ್ ಗೆ ಹೋಗಿ ಅಪ್ಡೇಟ್ ಮಾಡಬಹುದು.
ಯಾವಾಗ ಬರುತ್ತೆ 12 ನೇ ಕಂತಿನ ಹಣ…?
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ ಯೋಜನೆ 2018 ರಲ್ಲಿ ಪ್ರಾರಂಭ ಆಗಿದ್ದು, ಈಗಾಗಲೇ 11ಕಂತಿನ ಹಣ ರೈತರ ಕಾತೆಗೆ ಜಮಾ ಆಗಿದೆ. ವರ್ಷಕ್ಕೆ ಮೂರು ಕಂತಿನ ರೀತಿಯಲ್ಲಿ ಹಣ ನೀಡುತ್ತಿದ್ದು, ರಾಜ್ಯ ಸರ್ಕಾರವು ಸಹ 4000 ಸಹಾಯಧನ ನೀಡುತ್ತಿದೆ.
ಡಿಸೆಂಬರ್ to ಮಾರ್ಚ್, ಏಪ್ರಿಲ್ to ಜೂಲೈ , ಆಗಸ್ಟ್ to ನವೆಂಬರ್ , ಈ ರೀತಿ ಮೂರು ತಿಂಗಳ ಅಂತರದಲ್ಲಿ ತಲಾ 2000 ರು ಗಳನ್ನೂ ನೀಡುತ್ತಿದೆ. 12ನೇ ಕಂತಿನ ಹಣ ಸಪ್ಟಂಬರ್ ಕೊನೆಯ ವಾರ ಇಲ್ಲವೇ ನವಂಬರ್ ತಿಂಗಳಲ್ಲಿ ಎಲ್ಲಾ ರೈತರ ಖಾತೆಗೆ ಹಣ ಜಮಾ ಆಗುತ್ತದೆ.
ಈ ಲೇಖನ ನಿಮಗೆ ಇಷ್ಟವಾದಲ್ಲಿ ಮೇಲಿರುವ ಸಾಮಾಜಿಕ ಜಾಲ ತಾಣಗಳ link ಉಪಯೋಗಿಸಿ , ನಿಮ್ಮ ರೈತ ಬಾಂಧವರಿಗೆ ಈ ಲೇಖನವನ್ನು ತಲುಪಿಸಿ.
ಇದನ್ನೂ ಓದಿ..https://krushijagattu.com/are-you-recieved-crop-amount-please-check-it/