
ಹೌದು ವೀಕ್ಷಕರೇ, ಪ್ರಧಾನ ಮಂತ್ರಿ ಹೊರಡಿಸಿರುವ ಡಿಜಿಟಲ್ ಹೆಲ್ತ್ ಮಿಷನ್ ( pradhan mantri Jan arogya yojana) ಅಡಿಯಲ್ಲಿ ದೇಶದ ಪ್ರತಿ ಪ್ರಜೆಯೂ ಅವರ ಆರೋಗ್ಯದ ಸಂಪೂರ್ಣ ಮಾಹಿತಿ ಒಳಗೊಂಡ ಡಿಜಿಟಲ್ ಕಾರ್ಡ್ ಗೆ ಯೋಜನೆ ಜಾರಿಗೆ ತರಲಾಗಿದೆ.
ABHA ಅಂದ್ರೆ ಏನು..?
ಆಯುಷ್ಮನ್ ಭಾರತ್ ಹೆಲ್ತ್ ಅಕೌಂಟ್ ( Ayushman bharat health account) ಅಂದರೆ ಇದರ ಅರ್ಥ, ನಮ್ಮ ದೇಶದ ಪ್ರತಿ ಪ್ರಜೆಯ ತನ್ನ ಆರೋಗ್ಯದ ಸಂಪೂರ್ಣ ಮಾಹಿತಿ ಈ ಡಿಜಿಟಲ್ ಕಾರ್ಡಿನಲ್ಲಿ ಒಳಗೊಂಡಿರುತ್ತದೆ. ರೋಗಿಯು ತಾನು ಆಸ್ಪತ್ರೆಗೆ ದಾಖಲಾದ ಮಾಹಿತಿ, ವೈದ್ಯರಿಂದ ಪಡೆದುಕೊಂಡ ಚಿಕಿತ್ಸೆಯ ಎಲ್ಲ ಮಾಹಿತಿಯನ್ನು ಇದರಲ್ಲಿ ಹಾಕಲಾಗುತ್ತದೆ.
ಒಮ್ಮೆ ಈ ಕಾರ್ಡ್ ಪಡೆದುಕೊಂಡ ಮೇಲೆ ದೇಶದ ಯಾವುದೇ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಬಹುದಾಗಿದೆ.
ಏನಿದರ ಉಪಯೋಗ…?
ಕಾರ್ಡ್ ವಿತರಿಸಿದ ಮೇಲೆ ರೋಗಿಯು ದೇಶದ ಯಾವುದೇ ಆಸ್ಪತ್ರೆಗೆ, ಮತ್ತು ವೈದ್ಯರನ್ನು ಬೇಟಿ ಮಾಡಿದ ವಿಷಯ, ವೈದ್ಯರು ನೀಡಿದ ಚಿಕಿತ್ಸೆ,ವೈದ್ಯಕೀಯ ವರದಿಗಳು,ಹಾಗೂ ಇನ್ನೂ ಹಲವಾರು ವಿಷಯಗಳು ಕಾರ್ಡಿನಲ್ಲಿ ಒಳಗೊಂಡಿರುತ್ತವೆ. ಮುಂದೆ ರೋಗಿಯು ವೈದ್ಯರನ್ನು ಭೇಟಿ ಮಾಡಿದರೆ ಅವರ ಎಲ್ಲಾ ಪೂರ್ವಾಪರ ತಿಳಿಯುತ್ತವೆ, ಮತ್ತು ವೈದ್ಯರಿಗೆ ಚಿಕಿತ್ಸೆ ನೀಡಲು ಸುಲಭ ಆಗುತ್ತದೆ. ಇದರಿಂದ ರೋಗಿಯು ತನ್ನ ಎಲ್ಲಾ ಚಿಕಿತ್ಸೆಯ certificates , reports (ಕಡತಗಳು) ತೆಗೆದುಕೊಂಡು ಹೋಗುವ ಅವಶ್ಯಕತೆ ಇರುವುದಿಲ್ಲ. ಈ ಕಾರ್ಡಿನಿಂದ ರೋಗಿಗಳು ಅಯುಷ್ಮನ್ ಭಾರತ್ ಯೋಜನೆಯಂತ ಸರ್ಕಾರಿ ಪ್ರಯೋಜನಗಳನ್ನು ಪಡೆಯಬಹುದು.
ಈ ಕಾರ್ಡಿನಿಂದ ವೈದ್ಯರಿಗೆ( Doctor) ಇನ್ನೂ ಸುಲಭ..
ಹೌದು, ಈ ABHA ಕಾರ್ಡ್ ಇದ್ದಲ್ಲಿ, ರೋಗಿಯ ಎಲ್ಲ ಪೂರ್ವಾಪರ ಚಿಕಿತ್ಸೆಯ ವರದಿಗಳು ಇದರಲ್ಲಿ ಹಾಕಲಾಗುತ್ತದೆ, ಇದರಿಂದ ವೈದ್ಯರು ಸರಾಗವಾಗಿ ರೋಗಿಯ ಎಲ್ಲ ರೀತಿಯ ವಿಷಯಗಳನ್ನ ತಿಳಿದುಕೊಂಡು, ಪರಿಣಾಮಕಾರಿಯಾಗಿ ರೋಗಿಯ ಆರೋಗ್ಯವನ್ನು ಗುಣ ಪಡಿಸಬಹುದು.
ABHA ಕಾರ್ಡ್ ಮಾಡಿಕೊಳ್ಳೋದು ಹೇಗೆ..?

1.ಈ ಲಿಂಕ್ ಮೇಲೆ ಕ್ಲಿಕ್ ಮಾಡಿ: https://healthid.ndhm.gov.in/https://healthid.ndhm.gov.in/
2. ನಂತರ create ABHA CARD ಕ್ಲಿಕ್ ಮಾಡಿ
3. Using ಆಧಾರ್ ಕಾರ್ಡ್ click ಮಾಡಿ, next click ಮಾಡಿ.
4. ನಿಮ್ಮ ಆಧಾರ್ ಕಾರ್ಡ್ ನಂಬರ್ ಟೈಪ್ ಮಾಡಿ, I agree ಕ್ಲಿಕ್ ಮಾಡಿ, ನಂತರ im not robot ಕ್ಲಿಕ್ ಮಾಡಿ,next ಒತ್ತಿರಿ.
5. ನಂತರ ನಿಮ್ಮ ಆಧಾರ್ (adhar) ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ಗೆ OTP ( ONE TIME PASSWORD) ಹೋಗುತ್ತದೆ, ಅದನ್ನು ಟೈಪ್ ಮಾಡಿ next ಒತ್ತಿರಿ.
6. Adhar card ಓಪನ್ ಆದಮೇಲೆ, ನಿಮ್ಮ ಆಧಾರ್ ಕಾರ್ಡ್ ಒಳಗೆ ಇರುವ ಎಲ್ಲ ಮಾಹಿತಿ ತೋರಿಸುತ್ತದೆ, next ಒತ್ತಿರಿ.
7. ನಂತರದಲ್ಲಿ ನಿಮ್ಮ 10 ಸಂಖ್ಯೆಯ ಮೊಬೈಲ್ ನಂಬರ್ enter ಮಾಡಿ,
8. ಅದಾದಮೇಲೆ ನಿಮ್ಮ ABHA ಕಾರ್ಡ್ ಸಂಖ್ಯೆಯನ್ನು ತೋರಿಸುತ್ತದೆ, ಅದನ್ನು ಬರೆದುಕೊಂಡು, DOWNLOAD ಆಪ್ಷನ್ ( option) ಮೇಲೆ ಕ್ಲಿಕ್ ಮಾಡಿ, ನಿಮ್ಮ ಆಯುಷ್ಮಾನ್ ಹೆಲ್ತ್ ಕಾರ್ಡ್ ಮನೆಯಲ್ಲೇ ಪಡೆದುಕೊಳ್ಳಿ.
ಇದಕ್ಕೆ ನೀವು ಯಾವುದೇ ಹಣ ಕೊಡುವ ಅವಶ್ಯಕತೆ ಇರುವುದಿಲ್ಲ,ಮತ್ತು ಇದರಿಂದ ನಿಮ್ಮ Documents na ಗೌಪ್ಯ ವಿಷಯಗಳು ಯಾವುದೇ ಕಾರಣಕ್ಕೂ ಲೀಕ್ ಆಗುವುದಿಲ್ಲ.
ಹೀಗೆ ನಿಮ್ಮ ಮನೆಯ ಎಲ್ಲಾ ಸದಸ್ಯರ ಆಧಾರ್ ಕಾರ್ಡ್ ಮತ್ತು, ವೋಟರ್ ಐಡಿ ಸಹಾಯದ ಮೂಲಕ, ನಿಮ್ಮ ನಿಮ್ಮ ಮೊಬೈಲ್ಗಳಲ್ಲಿ ABHA ಕಾರ್ಡ್ ನ್ನು ಮಾಡಿಕೊಳ್ಳಬಹುದು, ಸಾಮಾನ್ಯ ಜನರಿಗೆ ಅನುಕೂಲ ಆಗುವಂತೆ ಕೇಂದ್ರ ಸರ್ಕಾರ, ತಾವೇ ಕಾರ್ಡನ್ನು ಪಡೆದುಕೊಳ್ಳುವ ವ್ಯವಸ್ಥೆ ಮಾಡಿದೆ, ಇದರ ಪ್ರಯೋಜನ ಪಡೆದುಕೊಳ್ಳಿ.
ಇದನ್ನೂ ಓದಿ: ನಿಮ್ಮ ಖಾತೆಗೆ ಬೆಳೆ ಪರಿಹಾರ ಜಮಾ ಆಗಿದ್ಯಾ? ಈಗಲೇ ಚೆಕ್ ಮಾಡಿ..
ಇದನ್ನೂ ಓದಿ: ಇನ್ಮುಂದೆ ಕೃಷಿ ಪಂಪ್ ಸೆಟ್ಗೆ ಇಲ್ಲ ಉಚಿತ ವಿದ್ಯುತ್…! ಮುಂದೇನು ಗತಿ…?
ಈ ಲೇಖನ (article) ನಿಮಗೆ ಇಷ್ಟವಾದಲ್ಲಿ ಮತ್ತು ಉಪಯೋಗಕಾರಿ ಆದಲ್ಲಿ, ನಿಮ್ಮ ಎಲ್ಲಾ ಮನೆಯ ಸದಸ್ಯರಿಗೆ, ಮತ್ತು ರೈತ ಬಾಂಧವರಿಗೆ ಮೇಲಿರುವ ಸಾಮಾಜಿಕ ಜಾಲ ತಾಣಗಳ link ಉಪಯೋಗಿಸಿ ಹಂಚಿಕೊಳ್ಳಿ
ನಮ್ಮ ಕೃಷಿ ಜಗತ್ತು WhatsApp group ಸೇರಲು ಈ ಕೆಳಗಿನ ಲಿಂಕ್ ಒತ್ತಿ
https://chat.whatsapp.com/GIMEdBHFw0R0M1ysUW80dg
[email protected]
Arogya card
Yes .. it’s a arogya card