
ಆತ್ಮೀಯ ದೇಶ ಬಾಂಧವರೇ, ನಮ್ಮ ದೇಶದ ಪ್ರಧಾನಮಂತ್ರಿಯದಂತಹ ನರೇಂದ್ರ ಮೋದಿ ಯವರು ಅಗಸ್ಟ್ 13 2022 ರಿಂದ ಅಗಸ್ಟ್ 15 2022 ರವರೆಗೆ ಹರ್ ಘರ್ ತಿರಂಗ ಎಂಬ ಅಭಿಯಾನವನ್ನು ಘೋಷಣೆ ಮಾಡಿದ್ದರು.
ಅದರಂತೆ ದೇಶದ ನಾನಾ ರಾಜ್ಯಗಳ ಪ್ರಜೆಗಳು ತಮ್ಮ ತಮ್ಮ ಮನೆಯ ಮೇಲೆ ಅಗಸ್ಟ್ 13 2022 ರಂದು ಬೆಳಗಿನ ಬೆಳಗಿನ ಜಾವ 7:00ಗೆ ಸರಿಯಾಗಿ ತಮ್ಮ ತಮ್ಮ ಮನೆಯ ಮೇಲ್ಬಾಗದ ಚಾವಣಿಯಲ್ಲಿ ದೇಶದ ಗೌರವಾನ್ವಿತ ಕೇಸರಿ ಬಿಳಿ ಹಸಿರು ಮತ್ತು ಅಶೋಕ ಚಕ್ರ ಇರುವ ಬಾವುಟವನ್ನು ಹಾರಿಸಿದ್ದಾರೆ.
ಮತ್ತು ನರೇಂದ್ರ ಮೋದಿಯವರು ಹೇಳಿದಂತೆ ವೆಬ್ಸೈಟ್ನಲ್ಲಿ ತಾವು ಹಾರಿಸಿದ ಬಾವುಟವನ್ನು,ಬಾವುಟದ ಫೋಟೋ ಮತ್ತು ವಿಡಿಯೋವನ್ನು ಅಪ್ಲೋಡ್ ಮಾಡಿ ಸರ್ಟಿಫಿಕೇಟ್ ಪಡೆದುಕೊಳ್ಳಿ ಅಂತ ಹೇಳಿದರು, ಅದರಂತೆ ಪ್ರಜೆಗಳು ಬಾವುಟ ಹರಿಸಿ ಯಶಸ್ವಿಯಾಗಿ ಸರ್ಟಿಫಿಕೇಟ್ಗಳನ್ನು ಪಡೆದುಕೊಂಡಿದ್ದಾರೆ.
ಭಾರತ ಮತ್ತು ಪಾಕಿಸ್ತಾನ ಗಡಿಭಾಗವಾದಂತಹ ಜಮ್ಮು ಮತ್ತು ಕಾಶ್ಮೀರ ಈ ಪ್ರದೇಶದಲ್ಲಿಯೂ ಸಹ ಯಶಸ್ವಿಯಾಗಿ ಭಾರತೀಯ ಪ್ರಜೆಗಳು ಹರ್ ಘರ್ ತಿರಂಗಾ ಅಭಿಯಾನಕ್ಕೆ ಚಾಲನೆ ಕೊಟ್ಟು ನಾವು ಕೂಡ ನಾವು ಕೂಡ ಭಾರತೀಯ ಪ್ರಜೆಗಳು ಎಂದು ತೋರಿಸಿಕೊಟ್ಟಿದ್ದಾರೆ.
ಕರ್ನಾಟಕದ ಹಾವೇರಿ ಜಿಲ್ಲೆಯ ಒಂದು ಪುಟ್ಟ ಬಾಲಕಿ ತನ್ನ ತಂದೆಯ ಸಹಾಯದ ಜೊತೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಹರ್ ಘರ್ ತಿರಂಗಾ ಅಭಿಯಾನದ ಕುರಿತು ಮಾತನಾಡಿ ಹರ್ ಘರ್ ಫೀದ್ ಫೌದ್ ಅಂದರೆ ಪ್ರತಿ ಮನೆಯಲ್ಲೂ ಒಂದು ಸಸ್ಯ ಬೆಳಸಿ ಎಂದು ಬೆಳೆಸಲು ಅಭಿಯಾನವನ್ನು ಮಾಡಿ ಎಂದು ಪತ್ರವನ್ನು ಬರೆದಿದ್ದಾಳೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಜನ ಪ್ರಶಂಸೆ ಮಾಡಿದ್ದಾರೆ.
ಆಗಸ್ಟ್ 15 2022 ಕ್ಕೆ, ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ತುಂಬುತ್ತವೆ, ಆದ್ದರಿಂದ ದೇಶದ ಎಲ್ಲ ಪ್ರಜೆಗಳು ಶಾಂತ ರೀತಿಯಿಂದ ಸ್ವಾತಂತ್ರ್ಯ ದಿನಾಚರಣೆ ಆಚರಣೆ ಮಾಡಬೇಕು..