
ಹೌದು ಸ್ನೇಹಿತರೇ, ಕೇಂದ್ರ ಸರ್ಕಾರ ದೇಶದ ಜನತೆಗೆ ಒಂದಿಲ್ಲೊಂದು, ಮಹತ್ವದ ಯೋಜನೆಗಳನ್ನು ನೀಡುತ್ತಲೇ ಇದೆ, ಅದರಲ್ಲಿ ಈ ಸುಕನ್ಯಾ ಸಮೃದ್ಧಿ ಯೋಜನೆಯು ಒಂದು.
ಏನಿದು ಸುಕನ್ಯಾ ಸಮೃದ್ಧಿ ಯೋಜನೆ..?
ಸುಕನ್ಯಾ ಸಮೃದ್ಧಿ ಯೋಜನೆಯು ಕೇಂದ್ರ ಸರ್ಕಾರದಿಂದ ಹೆಣ್ಣು ಮಕ್ಕಳಿಗೆ ಜಾರಿಗೆ ತಂದ ಒಂದು ಮಹತ್ವದ ಯೋಜನೆ ಆಗಿದೆ.ಈಗಾಗಲೇ ಕೇಂದ್ರ ಸರ್ಕಾರ ಹೆಣ್ಣು ಮಕ್ಕಳ ಭವಿಷ್ಯಕ್ಕೆ ಅನೇಕ ಹಲವಾರು ಯೋಜನೆಗಳನ್ನು ರೂಪಿಸಿದ್ದು, ಅದರಲ್ಲಿ ಈ ಯೋಜನೆಯು, ಹೆಣ್ಣು ಮಗು, ಮತ್ತು ಅವರ ಪಾಲಕ ಮತ್ತು ಪೋಷಕರಿಗೆ ಪ್ರೋತ್ಸಾಹ ನೀಡುವ ಮಹತ್ವದ ಯೋಜನೆ ಆಗಿದೆ.
Labour card: ಈಗ ಮನೆಯಲ್ಲೇ ಕುಳಿತು ಲೇಬರ್ ಕಾರ್ಡ್ ಮಾಡಿಕೊಳ್ಳಿ, ಮದುವೆ,ಹೆರಿಗೆ, ಆಕ್ಸಿಡೆಂಟ್ ಸಹಾಯಧನ ಪಡೆಯಿರಿ
ಈ ಯೋಜನಯಡಿಯಲ್ಲಿ ಅತೀ ಹೆಚ್ಚು ಅಪ್ರಾಪ್ತ ವಯಸ್ಸಿನ ಹೆಣ್ಣು ಮಕ್ಕಳಿಗೆ ಲಾಭ ಆಗಲಿದೆ. ಇದರ ಉದ್ದೇಶ ಏನೆಂದರೆ ಹೆಣ್ಣು ಮಗು ಹುಟ್ಟಿ ಹತ್ತು ವರ್ಷಗಳ ಒಳಗೆ, ಮಗುವಿನ ಪಾಲಕರು ಅಥವಾ ಪೋಷಕರು , ಈ ಯೋಜನಯಡಿಯಲ್ಲಿ ಬ್ಯಾಂಕ್ ಖಾತೆಯನ್ನು ತೆರೆಯಬಹುದು. ನಂತರ ಪೋಷಕರು ತಮ್ಮ ಎರಡು ಹೆಣ್ಣು ಮಕ್ಕಳಿಗೆ ಮಾತ್ರ ಸುಕನ್ಯಾ ಸಮೃದ್ಧಿ ಖಾತೆಯನ್ನು ತೆರೆಯಲು ಅವಕಾಶ ಇರುತ್ತದೆ. ಅಂದರೆ ಒಂದು ಹೆಣ್ಣು ಮಗುವಿಗೆ ಒಂದು ಸುಕನ್ಯಾ ಸಮೃದ್ಧಿ ಖಾತೆ.
ನೀವು ನಿಮ್ಮ ಹೆಣ್ಣು ಮಗುವಿನ ಹುಟ್ಟಿನಿಂದ ಹತ್ತು ವರ್ಷಗಳ ವರೆಗೆ ಈ ಖಾತೆಯನ್ನು ತೆರೆಯಬಹುದು, ಸರಕಾರಿ ಬ್ಯಾಂಕುಗಳು, ಅಂಚೆ ಕಚೇರಿಯಲ್ಲಿ ನೀವು ಸುಕನ್ಯಾ ಸಮೃದ್ಧಿ ಖಾತೆ ತೆರೆಯಲು ಅವಕಾಶ ಇದೆ. ನೀವು ಇಟ್ಟಿರುವ ಖಾತೆಯ ಹಣದ ಮೇಲೆ ವರ್ಷಕ್ಕೆ 7.6% ಬಡ್ಡಿದರ ನಿಗದಿ ಪಡಿಸುತ್ತಾರೆ.
ABHA CARD: ಮನೆಯಲ್ಲೇ ಕುಳಿತು ABHA ಆಯುಶ್ಮಾನ್ ಕಾರ್ಡ್ ಮಾಡಿಕೊಳ್ಳಿ.
ನೀವು ಈ ಸುಕನ್ಯಾ ಸಮೃದ್ಧಿ ಯೋಜನೆಯು ಖಾತೆಗೆ, ಕನಿಷ್ಠ 250ರೂಪಾಯಿ ಇಂದ ಗರಿಷ್ಠ 1,50,000 ವರೆಗೆ ಜಮಾ ಮಾಡಬಹುದು, ನೀವು ಪ್ರತಿ ತಿಂಗಳು ಅಥವಾ ಒಂದೇ ಸಾರಿಗೆ ಈ ಹಣವನ್ನು ಜಮಾ ಮಾಡಲು ಅವಕಾಶ ಇರುತ್ತದೆ.
ಪ್ರತಿದಿನ 411 ರೂಪಾಯಿ ಜಮೆ ಮಾಡಿ, 21 ವರ್ಷಕ್ಕೆ 66 ಲಕ್ಷ ಪಡೆಯುವುದು ಹೇಗೆ..?
ಹೌದು ಸ್ನೇಹಿತರೇ, ಈ ಯೋಜನೆ ತುಂಬಾ ಸಹಕಾರಿ ಆಗಿದ್ದು, ನೀವು ಪ್ರತಿದಿನ 411 ರೂಪಾಯಿ ಅಂತೆ ವರ್ಷಕ್ಕೆ ಸುಮಾರು 1,50,000 ರೂಪಾಯಿ ಜಮಾ ಮಾಡಿ, ಅದರಂತೆ ಹದಿನೈದು ವರ್ಷಗಳ ಕಾಲ ಕಟ್ಟುತ್ತಾ ಬಂದರೆ, ನಿಮಗೆ ಹೆಣ್ಣು ಮಗು 21 ವರ್ಷ ತುಂಬಿದ ಮೇಲೆ, ಹೆಣ್ಣುಮಗಳು 65,93,000 ರೂಪಾಯಿ ಪಡೆಯಲು ಅರ್ಹರಾಗಿರುತ್ತಾರೆ. https://www.nsiindia.gov.in/InternalPage.aspx?Id_Pk=89
ಈ ರೀತಿ ನೀವು ವರ್ಷಕ್ಕೆ ಇಷ್ಟೊಂದು ಹಣ ಜಮಾ ಮಾಡಿದರೆ, ತೆರಿಗೆ ಬಗ್ಗೆ ತೊಂದರೆ ಆದೀತು , ಎನ್ನುವ ಚಿಂತೆ ಬೇಡ. ಈ ಯೋಜನೆಯಲ್ಲಿ ಮಾಡಿದ ಹೂಡಿಕೆಗಳು ಐಟಿ ಖಯ್ದೆಯ ಸೆಕ್ಷನ್ 80ಸಿ ಅಡಿಯಲ್ಲಿ ತೆರಿಗೆ ಕಡಿತಕ್ಕೆ ಅರ್ಹವಾಗಿದೆ. ಈ ಯೋಜನೆ ಹೆಣ್ಣು ಮಗಳಿಗೆ ಆ ವಯಸ್ಸಿನಲ್ಲಿ ಆರ್ಥಿಕ ಸ್ವಾತಂತ್ರ್ಯ ಸಿಗುತ್ತದೆ.
ಇದನ್ನೂ ಓದಿ:ನಿಮ್ಮ ಖಾತೆಗೆ ಬೆಳೆ ಪರಿಹಾರ ಜಮಾ ಆಗಿದ್ಯಾ? ಈಗಲೇ ಚೆಕ್ ಮಾಡಿ..
ಇದನ್ನೂ ಓದಿ:Bank Loan Rules: ಸಾಲಗಾರ ಸತ್ತರೆ ಬ್ಯಾಂಕ್ ಸಾಲ ಏನಾಗುತ್ತದೆ..? ಹೊಸ ನಿಯಮ ತಿಳಿದುಕೊಳ್ಳಿ.