
ಪಾಕಿಸ್ತಾನದಲ್ಲಿ ತರಕಾರಿ ಬೆಲೆಗಳು ಆಕಾಶಕ್ಕೆ ಮುಟ್ಟಿವೆ, ಹೌದು ವೀಕ್ಷಕರೇ 2022ರ ಅತಿಯಾದ ಮಳೆಯಿಂದಾಗಿ ಭಾರತದ ಶತ್ರು ರಾಷ್ಟ್ರವಾದ ಪಾಕಿಸ್ತಾನದಲ್ಲಿ ಈಗ ದಿನ ನಿತ್ಯದ ದಿನಸಿ ವಸ್ತುಗಳಾದ ಈರುಳ್ಳಿ , ಟೊಮಾಟೋ, ಬೆಲೆಗಳು ಅತೀ ದುಬಾರಿ ಆಗಿವೆ.
ಕಾರಣವೇನೆಂದರೆ, 2022 ರ ಜೂನ್ ಜುಲೈ ಆಗಸ್ಟ್ ತಿಂಗಳ ಅತಿಯಾದ ಮಳೆಯಿಂದಾಗಿ,ಪ್ರವಾಹ ಉಂಟಾಗಿ, ರೈತರು ಬೆಳೆದ ಎಲ್ಲಾ ರೀತಿಯ ತರಕಾರಿ ಬೆಳೆಗಳು ನಾಶ ಆಗಿವೆ.ಕೆಲವು ತಿಂಗಳ ಹಿಂದೆ ಟೊಮೋಟೊ ಕೆಜಿ ಗೆ 61ರೂ ನಿಗದಿಯಾಗಿತ್ತು, ಮದ್ಯಮ ವರ್ಗದ ಜನರು, ಬಡ ಕುಟುಂಬದ ಜನರು ಯೋಗ್ಯ ಬೆಲೆಗೆ ಕೊಂದುಕೊಳ್ಳುತ್ತಿದರು
ಆದರೆ ಈಗಿನ ಪರಿಸ್ಥಿತಿಯಲ್ಲಿ ಪಾಕಿಸ್ತಾನದ ಬಡ ಜನರು ಟೊಮೋಟೊ ಬರೀ ಕಣ್ಣಿನಿಂದ ನೋಡುವಂತಾಗಿದೆ.

September 1 2022 ರ ಪ್ರಕಾರ ಪಾಕಿಸ್ತಾನದಲ್ಲಿ 22,09 ಕೋಟಿ ಜನಸಂಖ್ಯೆ ಇದ್ದು, ಸುಮಾರು 96.50% ಪ್ರತಿಶತ ಮುಸ್ಲಿಂ ಜಾತಿಗೆ ಸೇರಿದ ಜನಾಂಗ ಇದೆ,
ಇದರಲ್ಲಿ 70-80% ಪ್ರತಿಶತ ಜನರು ಅತೀ ಬಡವರು ಆಗಿರುತ್ತಾರೆ, ಜಗತ್ತಿನ ಅಂಕಿ ಸಂಖ್ಯೆಯ ಪ್ರಕಾರ ಪಾಕಿಸ್ತಾನವು ತುಂಬಾ ಕಡು ಬಡವ ರಾಷ್ಟ್ರವಾಗಿದೆ.

ಪಾಕಿಸ್ತಾನ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರ ಕೃಷಿಯೇ ಇದರ ಬೆನ್ನೆಲುಬಾಗಿದೆ ಮತ್ತು ಕೃಷಿ ಕ್ಷೇತ್ರದಲ್ಲಿ ಅನೇಕ ಸವಾಲುಗಳನ್ನು ಎದುರಿಸುತ್ತಿರುವ ಮತ್ತು ಕೈಗಾರಿಕೆಗಳಲ್ಲಿ ಹಿಂದುಳಿದ ಒಂದು ಬಡ ರಾಷ್ಟ್ರವಾಗಿದೆ.
ಈ ರಾಷ್ಟ್ರದಲ್ಲಿ ಶೇಕಡ 25 ರಷ್ಟು ಜನ ಪಟ್ಟಣದಲ್ಲಿ ವಾಸ ಮಾಡುತ್ತಿದ್ದಾರೆ ಇನ್ನು 75ರಷ್ಟು ಜನರು ಹಳ್ಳಿಯಲ್ಲಿ ವಾಸವನ್ನು ಮಾಡುತ್ತಿದ್ದಾರೆ ಇವರ ಮೂಲ ಉದ್ಯೋಗ ಕೃಷಿ ಆಗಿದೆ.

ಈ ತಿಂಗಳ ಭಾರೀ ಮಳೆಗೆ, ಪಾಕಿಸ್ತಾನದಲ್ಲಿ ಸುಮಾರು 1191 ಜನರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ, ಇದರಲ್ಲಿ ಸುಮಾರು 399 ಮಕ್ಕಳು ಸಹ ಪ್ರಾಣ ಕಳೆದುಕೊಂಡಿದ್ದಾರೆ, ಇದಕ್ಕೆ ಕಾರಣ ಜಾಗತಿಕ ತಾಪಮಾನ , ಮಂಜುಗಡ್ಡೆ ಅತೀ ಬೇಗನೆ ಕರಗಿ, ನೀರಿನ ಹರಿವು ಹೆಚ್ಚಾಗಿ ಪ್ರವಾಹ ಉಂಟಾಗಿದೆ, ಎಲ್ಲ ಕಡೆಗೂ ಊಟ ಮತ್ತು ವಸತಿಗೆ ಹಾಹಾಕಾರ ಉಂಟಾಗಿದೆ,
ಸುಮಾರು 43 ಬಿಲಿಯನ್ ಡಾಲರ್ ಗಳಷ್ಟು ಹಾನಿ ಉಂಟಾಗಿದೆ, ಇಲ್ಲಿಯವರೆಗೆ 4,82,030 ಜನರನ್ನ ಸ್ಥಳಾಂತರ ಮಾಡಲಾಗಿದೆ, ಮತ್ತು 8 ಲಕ್ಷ ಹೆಕ್ಟೇರ್ ಕೃಷಿ ಭೂಮಿಗೆ ಹಾನಿ ಆಗಿ ಬೆಳೆ ಸಂಪೂರ್ಣ ನೆಲಸಮ ಆಗಿದೆ, ಈ ಕಾರಣಕ್ಕೆ ತರಕಾರಿಗಳ ಬೆಲೆ ಗಗನಕ್ಕೆ ತಲುಪಿದೆ.
ಇದನ್ನೂ ಓದಿ. ಡ್ರಾಗನ್ ಫ್ರೂಟ್ ಬಗ್ಗೆ ಮಾಹಿತಿ.