
ಈ ವರ್ಷದ ಋತುಮಾನದಲ್ಲಿ ನಮ್ಮ ರಾಜ್ಯದ ಮತ್ತು ದೇಶದ ಲಕ್ಷಾಂತರ ಜಾನುವಾರುಗಳಿಗೆ ಚರ್ಮ ಗಂಟು ರೋಗ, ಮತ್ತು ಕಾಲು ಬಾಯಿ ರೋಗ ಬಂದು, ಸಾವಿರಾರು ಜಾನುವಾರುಗಳು ಮೃತಪಟ್ಟಿವೆ.
ಪಶು ವೈದ್ಯಾಧಿಕಾರಿಗಳ ಕೊರತೆ ಇದ್ದು, ಸರಿಯಾದ ಸಮಯಕ್ಕೆ ವೈದ್ಯರು ಬಾರದೆ, ಜಾನುವಾರುಗಳು ಸಾವನ್ನಪ್ಪಿವೆ. ರೈತರು, ರೈತ ಸಂಘದ ಮುಖಂಡರು ಎಷ್ಟೋ ಬಾರಿ ಸರ್ಕಾರಕ್ಕೆ ಪ್ರತಿಭಟನೆ ಮೂಲಕ ಮನವಿ ಮಾಡಿಕೊಂಡರು ಸಹ, ಸರ್ಕಾರ ಸರಿಯಾದ ರೀತಿಯಲ್ಲಿ ವೈದ್ಯಾಧಿಕಾರಿ ಭರ್ತಿ ಮಾಡುತ್ತಿಲ್ಲ.
ರೋಗದಿಂದ ಅನೇಕ ಜಾನುವಾರುಗಳು ಸಾವು.
ಈ ವರ್ಷದ ಮೇ ತಿಂಗಳ ನಂತರ ಜಾನುವಾರುಗಳಿಗೆ ಹರಡಿದ ಮಾರಣಾಂತಿಕ ಚರ್ಮ ಗಂಟು ರೋಗ ( lumpy skin disease) ಮೈ ಮೇಲೆ ಎಲ್ಲ ಕೀವು ಸಹಿತ ಗಂಟುಗಳು ಉಲ್ಬಣಗೊಂಡು, ಸರಿಯಾದ ಸಮಯಕ್ಕೆ ವೈದ್ಯರು ಬಾರದೆ , ಚಿಕಿತ್ಸೆ ನೀಡಲು ಸಾಧ್ಯವಾಗಿಲ್ಲ .
ಚರ್ಮ ಗಂಟು ರೋಗಕ್ಕೆ ಮದ್ದು , ಹೇಗೆ ರೋಗ ನಿವಾರಣೆ ಮಾಡಬೇಕು ಎಂಬುದರ ಮಾಹಿತಿ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.
https://krushijagattu.com/lumpy-skin-disease-make-these-steps-to-cure-this-deadly-virus/
ಇಬ್ಬರು ತಂತ್ರಜ್ಞಾನಿಗಳಿಂದ ಡಾಕ್ಟರ್ ಪಶು ಆ್ಯಪ್ ಬಿಡುಗಡೆ.
ಆ್ಯಪ್ ನ ಉದ್ದೇಶವೇನು..?
ಮುಂಗಾರು ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸಿದ ಸರ್ಕಾರ… ಎಷ್ಟಿದೆ ರೇಟ್ ನೋಡಿ..
ದೇಶದ ಯಾವುದೇ ಮೂಲೆಯಲ್ಲಿ ರುವ ರೈತರು ಕಾಯಿಲೆಯಿಂದ ಬಳಲುತ್ತಿರುವ ತಮ್ಮ ಜಾನುವಾರುಗಳ ಫೋಟೋ ಅಪ್‌ಲೋಡ್ ಮಾಡಿ ಕರೆ ಮಾಡಿದರೆ ಸಾಕು, ಪಶುವೈದ್ಯರು ವೀಡಿಯೋ ಕಾಲ್ ಮೂಲಕ ಸಂಬಂಧಪಟ್ಟ ರೈತರ ಸಂಪರ್ಕಕ್ಕೆ ಬರುತ್ತಾರೆ. ಆ ಜಾನುವಾರುಗಳಿಗೆ ಸೂಕ್ತ ಚಿಕಿತ್ಸೆಗೆ ಮಾರ್ಗದರ್ಶನ ಮಾಡುತ್ತಾರೆ. ಇನ್ನೂ ಒಂದು ಹೆಜ್ಜೆ ಮುಂದೆಹೋಗಿ, ಶೀಘ್ರದಲ್ಲೇ ಕಾಯಿಲೆಯಿಂದ ಬಳಲುತ್ತಿರುವ ಜಾನುವಾರುಗಳಿಗೆ ಔಷಧಗಳನ್ನು ಕೂಡ ಹೋಂ ಡೆಲಿವರಿ ಮಾಡುವ ವ್ಯವಸ್ಥೆಯನ್ನು ಪರಿಚಯಿಸಲು ಸಿದ್ಧತೆ ನಡೆಸಿದೆ.
Cattle Transportation rules: ಜಾನುವಾರು ಸಾಗಾಣಿಕೆ ನಿಯಮಗಳನ್ನು ಒಮ್ಮೆ ನೋಡಿ…
ಈಗಾಗಲೇ ಸುಮಾರು 12 ಸಾವಿರ ರೈತರು ಉಚಿತವಾಗಿ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು, ಹೆಸರು ನೋಂದಾಯಿಸಿಕೊಂಡಿದ್ದಾರೆ. ಇದರಲ್ಲಿ ಅಂದಾಜು 20 ವೈದ್ಯರು “ಲಿಂಕ್’ ಆಗಿದ್ದಾರೆ. ಪ್ರಸ್ತುತ ಕನ್ನಡ, ಮರಾಠಿ, ತಮಿಳು, ತೆಲಗು, ಅಸ್ಸಾಂ, ಬಂಗಾಳಿ ಸಹಿತ ಎಂಟು ಭಾಷೆಗಳಲ್ಲಿ ಈ ಸೇವೆ ಲಭ್ಯವಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಭಾಷೆಗಳಿಗೆ ಇದನ್ನು ವಿಸ್ತರಿಸುವ ಉದ್ದೇಶವನ್ನು ಸ್ಟಾರ್ಟ್‌ಅಪ್ ಹೊಂದಿದೆ.
ಡೌನ್ಲೋಡ್ ಮಾಡಿಕೊಳ್ಳಲು ಈ ಕೆಳಗಿನ ಲಿಂಕ್ ಒತ್ತಿರಿ.
https://play.google.com/store/apps/details?id=com.drpashu.app
ಕೂಲಿ ಕಾರ್ಮಿಕರಿಗೆ ಲೇಬರ್ ಕಾರ್ಡ್ ಮಾಡಿಕೊಳ್ಳಲು ಅವಕಾಶ ಇದ್ದು, ತಾವುಗಳು ತಮ್ಮ ಮನೆಯಲ್ಲೇ ಕುಳಿತು ಮೊಬೈಲ್ ನಲ್ಲಿ labour ಕಾರ್ಡ್ ಮಾಡುವ ಮಾಹಿತಿ ಪಡೆಯಬಹುದು. ಕೆಳಗೆ ಕೊಟ್ಟಿರುವ ಲಿಂಕ್ ಒತ್ತಿ ನೋಡಬಹುದು.
Labour card: ಈಗ ಮನೆಯಲ್ಲೇ ಕುಳಿತು ಲೇಬರ್ ಕಾರ್ಡ್ ಮಾಡಿಕೊಳ್ಳಿ, ಮದುವೆ,ಹೆರಿಗೆ, ಆಕ್ಸಿಡೆಂಟ್ ಸಹಾಯಧನ ಪಡೆಯಿರಿ